“ಲಿಂಗಾಯತ ರ್ಯಾಲಿ’ಗೆ ಒಳಪಂಗಡಗಳ ಬೆಂಬಲ
Team Udayavani, Jul 17, 2017, 3:30 PM IST
ಬೀದರ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಂವಿಧಾನಿಕ ಮಾನ್ಯತೆಗಾಗಿ ಆಗ್ರಹಿಸಿ ಲಿಂಗಾಯತ ಧರ್ಮ ಸಮನ್ವಯ
ಸಮಿತಿ ವತಿಯಿಂದ ನಗರದಲ್ಲಿ ಜು.19ರಂದು ನಡೆಯಲಿರುವ ಮಹಾ ರ್ಯಾಲಿಗೆ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳು ಪೂರ್ಣ ಬೆಂಬಲ ವ್ಯಕ್ತಪಡಿಸಿವೆ.
ನಗರದ ಶರಣ ಉದ್ಯಾನದಲ್ಲಿ ನಡೆದ ಒಳಪಂಗಡದ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಬೆಂಬಲ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಾನಿಧ್ಯ ವಹಿಸಿದ್ದ ನವದೆಹಲಿಯ ಬಸವ ಮಂಟಪದ ಸಂಚಾಲಕ ಶ್ರೀ ಚನ್ನಬಸವಾನಂದ ಸ್ವಾಮೀಜಿ
ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವುದರಿಂದ ಎಲ್ಲಾ ಒಳಪಂಗಡಗಳಿಗೂ ಧಾರ್ಮಿಕವಾಗಿ,
ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸೌಲಭ್ಯಗಳು ದೊರಕಲಿವೆ ಎಂದು ವಿವರಿಸಿದರು.
ಲಿಂಗಾಯತವು ವೈದಿಕ ಅಥವಾ ಹಿಂದೂವಿನ ಒಳಗಿನ ಒಂದು ಜಾತಿಯಲ್ಲ. ಇದೊಂದು ಸ್ವತಂತ್ರ ಧರ್ಮ. ಗುರು ಬಸವಣ್ಣನವರು ಎಲ್ಲಾ ಒಳಪಂಗಡಗಳ ಜನರಿಗೆ ಇಷ್ಟಲಿಂಗ ನೀಡಿ ಲಿಂಗಾಯತರನ್ನಾಗಿ ಮಾಡಿದರು. ಮೇಲು ಕೀಳು ಎಂಬ ಭೇದವಿಲ್ಲದೇ ಎಲ್ಲರನ್ನು ಜಾತ್ಯತೀತ ತತ್ವದಿಂದ ಲಿಂಗಾಯತ ಧರ್ಮ ಸ್ಥಾಪಿಸಿದರು. ಹೀಗಾಗಿ ಅಂಗದ ಮೇಲೆ ಲಿಂಗ ಧರಿಸಿದ ಯಾವುದೇ
ಒಳಪಂಗಡದವರಿರಲಿ ಎಲ್ಲರೂ ಭೇದ ಮರೆತು ರ್ಯಾಲಿಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬನ್ನಿರಿ ಎಂದು ಕರೆ ನೀಡಿದರು.
ಹೂಗಾರ ಸಮಾಜದ ಅಧ್ಯಕ್ಷ ಚಂದ್ರಕಾಂತ ಹೂಗಾರ, ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ರಾಮಚಂದ್ರ ಮಹದೋಜಿ,
ಅಂಬಿಗರ ಚೌಡಯ್ಯ ಸಮಾಜದ ರವೀಂದ್ರ ಬಾಲೆಬಾಯಿ, ನೇಕಾರ ಸಮಾಜದ ಅಧ್ಯಕ್ಷರ ಸೋಮಶೇಖರ ಅಮಲಾಪುರೆ, ಮಾದಾರ
ಚನ್ನಯ್ಯ ಸಮಾಜದ ಅಧ್ಯಕ್ಷ ರಮೇಶ ಕಟ್ಟಿ ತೂಗಾಂವ, ಶೀಲವಂತ ಸಮಾಜದ ಅಧ್ಯಕ್ಷ ಅಶೋಕ ಶೀಲವಂತ, ಹರಳಯ್ಯ
ಸಮಾಜದ ಮುಖಂಡರಾದ ಸುಭಾಷ ಟಿಳೇಕರ್, ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ರ್ಯಾಲಿಗೆ
ಬೆಂಬಲ ನೀಡಲು ಒಪ್ಪಿರುವುದಾಗಿ ಭರವಸೆ ನಿಡಿದರು.
ಸಮಿತಿಯ ಪ್ರಮುಖರಾದ ಶ್ರೀಕಾಂತ ಸ್ವಾಮಿ, ಬಾಬು ವಾಲಿ, ಅಮೃತರಾವ್ ಚಿಮಕೋಡ, ರಮೇಶ ಪಾಟೀಲ ಸೋಲಪುರ,
ವಿರೂಪಾಕ್ಷ ಗಾದಗಿ, ಅಶೋಕ ಕೋಡಗೆ, ಡಾ| ಶೈಲೇಂದ್ರ ಬೆಲ್ದಾಳೆ, ಕುಶಾಲರಾವ್ ಯಾಬಾ, ಸಂತೋಶ ಪಾಟೀಲ, ನಗರಸಭೆ
ಸದಸ್ಯ ಅರುಣ, ಶಿವಕುಮಾರ ಹಂಗರಗಿ, ನಾಗಶೆಟ್ಟಿ ಕುಂಬಾರವಾಡಾ, ಬಸವರಾಜ ಧನ್ನೂರ, ಸೋಮನಾಥ ಮುಧೋಳಕರ್,
ಪ್ರಕಾಶ ಸಾವಳಗಿ, ಗಂಗಾಧರ ಗುನ್ನಳ್ಳಿ, ಸುರೇಶ ಕಾಮಶೆಟ್ಟಿ, ಮಾಣಿಕೇಶ ಪಾಟೀಲ, ಸಂಗಶೆಟ್ಟಿ ಹಲಬುರ್ಗೆ ಮತ್ತಿತರರು
ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.