ಶೇ. 64.38 ಮತದಾನ : ಶಹಾಬಾದನಲ್ಲಿ ನಗರಸಭೆ ಚುನಾವಣೆ
Team Udayavani, Sep 1, 2018, 10:07 AM IST
ಕಲಬುರಗಿ: ಜಿಲ್ಲೆಯ ಏಳು ತಾಲೂಕುಗಳ 168 ವಾರ್ಡ್‌ಗಳಿಗಾಗಿ ಶುಕ್ರವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 64.38 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಶಹಾಬಾದ ನಗರಸಭೆಯ 27 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 11,743 ಪುರುಷರು, 12,011 ಮಹಿಳೆಯರು ಹೀಗೆ ಒಟ್ಟು 23,754 ಮತದಾರರು ಮತ ಚಲಾಯಿಸಿದ್ದು, ಶೇ. 54.01 ರಷ್ಟು ಮತದಾನವಾಗಿದೆ.
ಸೇಡಂ ತಾಲೂಕಿನ ಸೇಡಂ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 10,948 ಪುರುಷರು ಮತ್ತು 10,557 ಮಹಿಳೆಯರು ಸೇರಿದಂತೆ ಒಟ್ಟು 21,505 ಮತದಾರರು ಮತ ಚಲಾಯಿಸುವ ಮೂಲಕ ಶೇ. 67.51 ರಷ್ಟು ಮತದಾನ ದಾಖಲಿಸಿದ್ದಾರೆ. ಚಿತ್ತಾಪುರ ತಾಲೂಕಿನ ಚಿತ್ತಾಪುರ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 8677 ಪುರುಷರು ಮತ್ತು 8959 ಮಹಿಳೆಯರು ಸೇರಿದಂತೆ ಒಟ್ಟು 17,436 ಮತದಾರರು ಮತ ಚಲಾಯಿಸಿದ್ದು, ಶೇ. 67.42 ರಷ್ಟು ಮತದಾನವಾಗಿದೆ.
ಆಳಂದ ತಾಲೂಕಿನ ಆಳಂದ ಪುರಸಭೆಯ 27 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 10,881 ಪುರುಷರು, 10,224 ಮಹಿಳೆಯರು ಹೀಗೆ ಒಟ್ಟು 21,105 ಮತದಾರರರು ಮತ ಚಲಾಯಿಸಿ ಶೇ. 62.52 ರಷ್ಟು ಮತದಾನವಾಗಿದೆ.
ಜೇವರ್ಗಿ ತಾಲೂಕಿನ ಜೇವರ್ಗಿ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 8017 ಪುರುಷರು
ಹಾಗೂ 7960 ಮಹಿಳೆಯರು ಸೇರಿದಂತೆ ಒಟ್ಟು 15,977 ಮತದಾರರು ಮತ ಚಲಾಯಿಸಿದ್ದಾರೆ. ಶೇ. 71.10 ರಷ್ಟು
ಮತದಾನವಾಗಿದೆ. ಚಿಂಚೋಳಿ ತಾಲೂಕಿನ ಚಿಂಚೋಳಿ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 5071 ಪುರುಷ ಹಾಗೂ 4984 ಮಹಿಳೆಯರು ಹಾಗೂ ಒಬ್ಬರು ಇತರರು ಹೀಗೆ ಒಟ್ಟು 10,056 ಮತದಾರರು ಮತ ಚಲಾಯಿಸಿ ಶೇ. 70.44 ರಷ್ಟು ಮತದಾನವಾಗಿದೆ.
ಅಫಜಲಪುರ ತಾಲೂಕಿನ ಅಫಜಲಪುರ ಪುರಸಭೆಯ 22 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 7054 ಪುರುಷರು ಹಾಗೂ 6527 ಮಹಿಳೆಯರು ಸೇರಿದಂತೆ ಒಟ್ಟು 13,581 ಮತದಾರರು ಮತ ಚಲಾಯಿಸಿ ಶೇ. 72.03 ರಷ್ಟು ಮತದಾನವಾಗಿದೆ.
ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟು 62,391 ಪುರುಷರು ಹಾಗೂ 61,022 ಮಹಿಳೆಯರು ಹಾಗೂ ಒಬ್ಬರು ಇತರರು ಸೇರಿದಂತೆ ಒಟ್ಟು 1,23,414 ಮತದಾರರು ಮತ ಚಲಾಯಿಸಿ ಶೇ. 64.38 ರಷ್ಟು ಮತದಾನ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆಯ ಸಂಸ್ಥೆ ಚುನಾವಣೆ ಶಾಂತಿಯುತ ಚುನಾವಣೆ ಶಾಂತಿಯು
ಚಿತ್ತಾಪುರ: ಪಟ್ಟಣದ ಪುರಸಭೆ ಚುನಾವಣೆ ಪ್ರಯುಕ್ತ 23 ವಾರ್ಡ್‌ಗಳಿಗೆ ನಡೆದ ಮತದಾನ ಶಾಂತಿಯುತವಾಗಿದ್ದು, ಶೇ. 67.42ರಷ್ಟು ಮತದಾನವಾಗಿದೆ. ಬೆಳಗ್ಗೆ ನೀರಸ ಮತದಾನ ನಡೆದು ಮಧ್ಯಾಹ್ನದ ಹೊತ್ತಿಗೆ ಹೆಚ್ಚಿನ ಮತದಾರರು ಬಂದು ಮತದಾನ ಮಾಡಿದರು. ಮಧ್ಯಾಹ್ನ 12 ಕ್ಕೆ ಶೇ. 26.79 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3ಕ್ಕೆ ಶೇ. 51ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 2ರಿಂದ ಮತದಾನ ಮಾಡಲು ಮತದಾರರು ಹೆಚ್ಚು ಒಲವು ತೋರಿಸಿದರು. ಚುನಾವಣೆ ಪ್ರಯುಕ್ತ 31 ಮತದಾನ ಕೇಂದ್ರಗಳನ್ನು ರಚಿಸಲಾಗಿತ್ತು. ಒಟ್ಟು 25,863 ಮತದಾರರಿದ್ದು, ಅದರಲ್ಲಿ 17436 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. 8759 ಮಹಿಳೆಯರು, 8677 ಪುರುಷರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂದು ತಹಶೀಲ್ದಾರ್ ಮಲ್ಲೇಶಾ ತಂಗಾ ತಿಳಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಕಾರ್ಯಕರ್ತರು ಮತದಾರರ ಮನೆಗಳಿಗೆ ಹೋಗಿ ಮತದಾರರನ್ನು ಕರೆ ತಂದು ಹಾಕಿಸುತ್ತಿದ್ದರು. ವೃದ್ಧರು, ಅಂಗವಿಕಲ ಮತದಾರರು ಬೇರೊಬ್ಬರ ಸಹಾಯದಿಂದ ತಳ್ಳುವ ಗಾಡಿ, ವ್ಹೀಲ್ ಚೇರ್‌ಗಳ ಮೂಲಕ ಬಂದು ಮತದಾನ ಮಾಡಿದರು. ಕೆಲವರು ವಾಹನಗಳಲ್ಲಿ ಬಂದು ಮತದಾನ ಮಾಡಿದರು. ಶ್ರಾವಣ ಮಾಸದ
ಶುಕ್ರವಾರ ವಿಶೇಷ ಲಕ್ಷ್ಮೀ ಪೂಜೆ ಇದ್ದಿದ್ದರಿಂದ ಮಹಿಳೆಯರು ಮಧ್ಯಾಹ್ನ ವೇಳೆಗೆ ಹೆಚ್ಚಾಗಿ ಬಂದು ಮತದಾನ ಮಾಡಿದರು.
ಪ್ರತಿಷ್ಠಿತ ವಾರ್ಡ್‌ಗಳಿರುವ 1, 2, 3, 9, 10, 12, 13, 14, 16, 20, 21, 22 ಮತಗಟ್ಟೆಯ ಹೊರಗೆ ಕಾರ್ಯಕರ್ತರ ದಂಡು ತುಂಬಿ ತುಳುಕಿತ್ತು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಎಸ್ಪಿ ಎನ್. ಶಶಿಕುಮಾರ ಅವರು ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣೆ ಶಾಂತಿಯುತ ಬಗ್ಗೆ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಕೆ. ಬಸವರಾಜ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ನಟರಾಜ ಲಾಡೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.