ಕಾಯಕ ಸ್ವತಂತ್ರವಾಗಿದ್ದರೆ ಸಾಧನೆ ನಿಶ್ಚಿತ
Team Udayavani, Aug 6, 2018, 10:26 AM IST
ಕಲಬುರಗಿ: ಸ್ವತಂತ್ರವಾದ ವಿಚಾರ, ಸ್ವತಂತ್ರ ಬರವಣಿಗೆ ಹಾಗೂ ಸ್ವತಂತ್ರ ಮಾತುಗಾರಿಕೆ, ಕಾಯಕದಲ್ಲಿ ನಿಷ್ಠೆ
ಹೊಂದಿದ್ದರೆ ಸಾಧನೆ ಮಾಡಲು ಸಾಧ್ಯ. ಇದನ್ನು ತಾವು ಜೀವನುದ್ದಕ್ಕೂ ಅನುಸರಿಸಿಕೊಂಡು ಬಂದಿದ್ದೇವೆ.
ಕನ್ನಡ ಸಾಹಿತ್ಯ ಪರಿಷತ್ ರವಿವಾರ ಸಂಜೆ ಆಯೋಜಿಸಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಹೀಗೆ ಅನುಭಾವದ ಸಂದೇಶ ನೀಡಿದ್ದು ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ. ಬಾಲ್ಯದಲ್ಲಿ ತಾವು ಶಿಕ್ಷಣ ಕಡೆಗೆ ಹೆಚ್ಚಿನ ಆಸಕ್ತಿ
ಹೊಂದಿರಲಿಲ್ಲ. ವಾಲಿಬಾಲ್ ಚಾಂಪಿಯನ್ ಶಿಪ್‌ದಲ್ಲಿ ಪಾಲ್ಗೊಂಡಿದ್ದೆ. ಗಣಿತವಂತೂ ಕಬ್ಬಿಣದ ಕಡಲೆಯಾಗಿತ್ತು. ನಂತರ ಆಸಕ್ತಿ ವಹಿಸಿ ಕಠಿಣವಾಗಿ ಅಭ್ಯಸಿಸಿ 80 ಅಂಕ ಪಡೆದೆ. ಅದೇ ರೀತಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲೂ ಪರಿಣಾಮಕಾರಿಯಾಗಿ ಓದಿದೆ. ಅಷ್ಟೋತ್ತಿಗೆ ಮಹಾದಾಸೋಹ ಸಂಸ್ಥಾನಪೀಠ ಹಾಗೂ ಶಿಕ್ಷಣ ಸಂಸ್ಥೆ ಮುನ್ನಡೆಸುವ ಜವಾಬ್ದಾರಿ ಹೆಗಲ ಮೇಲೆ ಬಂತು. ಲಂಡನ್ ಕೆಂಬ್ರಿಡ್ಜ್ ವಿದ್ಯಾಲಯದಲ್ಲಿ ಜನರು ಹೇಗೆ ಓದುತ್ತಾರೆಯೂ ಅದೇ ರೀತಿ ತಮ್ಮ ಸಂಸ್ಥೆಯಾಗಬೇಕೆನ್ನುವ ಬಯಕೆಯಿದೆ. ಅದೇ ರೀತಿ ಒಂದೊಂದೇ ಹೆಜ್ಜೆ ಇಡಲಾರಂಭಿಸಿದ್ದೇವೆ ಎಂದು
ಹೇಳಿದರು.
ಬರಿ ಗಿಳಿ ಪಾಠ ತಮ್ಮಲ್ಲಿಲ್ಲ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿ ನೂರಾರು ಶಿಕ್ಷಣ ವಿಭಾಗಗಳು ಯಶಸ್ವಿಯಾಗಿ ಮುನ್ನಡೆಯಲು ತಮ್ಮ ಹಾಗೂ ಸಂಸ್ಥೆಯ ಪ್ರಾಧ್ಯಾಪಕರ ಕಠಿಣ ಆಸಕ್ತಿಯೂ ಕಾರಣವಾಗಿದೆ. ಮುಖ್ಯವಾಗಿ ಎಲ್ಲರಲ್ಲೂ ಜ್ಞಾನ-ತಿಳಿವಳಿಕೆ ಇರುತ್ತದೆ. ಆದರೆ ಆಸಕ್ತಿ ತೋರದೇ ಇರುವುದರಿಂದ ಕಲಿಕೆ ಸರಳವಾಗುವುದಿಲ್ಲ. ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬರೀ ಗಿಳಿಪಾಠ ಇಲ್ಲ. ಬರವಣಿಗೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಕೇಳಿದ್ದನ್ನು ಬೇಗ ನೆನಪು ಹಾರಬಹುದು. ಆದರೆ ಬರವಣಿಗೆ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಗುಣಮಟ್ಟದ ಶಿಕ್ಷಣ ಅಳವಡಿಸಿಕೊಂಡಿದ್ದರಿಂದಲೇ ತಮ್ಮ ಸಂಸ್ಥೆಯಲ್ಲಿಂದು 25 ಸಾವಿರ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ವಿದ್ಯೆ ಎನ್ನುವುದು ಅಭ್ಯಸಿಗರ ಕೈ ವಶವಾಗಬೇಕು. ಆದರೆ ವ್ಯಾಪಕವಾಗಿ ವಿದ್ಯೆ ಎಂಬುದೀಗ ನಕಲು ಮಾಡುವರ ವಶವಾದಂತೆ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಮಕ್ಕಳಿಗೆ ಶೂ, ಸೈಕಲ್, ಬಸ್ ಪಾಸ್ ನೀಡುವುದಕ್ಕೆ ಆದ್ಯತೆ ನೀಡುತ್ತಿದೆ. ಆದರೆ ಗುಣಮಟ್ಟದ ಶಿಕ್ಷಣದ ಕಡೆಗೆ ಮಹತ್ವ ಕೊಡುತ್ತಿಲ್ಲ ಎಂದು ವಾಸ್ತವ ಅಂಶಗಳನ್ನು ಬಿಚ್ಚಿಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಪ್ರಾಸ್ತಾವಿಕ ಮಾತನಾಡಿ, ಕಲಬುರಗಿ ಮೂರು ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯುವಂತಾಗಲು ಡಾ| ಶರಣಬಸವಪ್ಪ ಅಪ್ಪ ಹಾಗೂ ಶರಣ ಸಂಸ್ಥಾನದ ಕೊಡುಗೆ ಅಪಾರವಾಗಿತ್ತು.
ಈಗ ಬೃಹದಾಕಾರದ ಶಿಕ್ಷಣ ಸಂಸ್ಥೆ ಬೆಳೆಸಿ, ಗುಣಮಟ್ಟದ ಶಿಕ್ಷಣದ ಮೂಲಕ ಈ ಭಾಗದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿರುವ ಡಾ| ಶರಣಬಸವಪ್ಪ ಅಪ್ಪ ಅವರು 120 ವರ್ಷಗಳ ಕಾಲ ಬದುಕಲು ಮಹಾದಾಸೋಹಿ ಶರಣಬಸವೇಶ್ವರರು ಕೃಪಾಶೀರ್ವಾದ ಮಾಡಲಿ ಎಂದು ಪ್ರಾರ್ಥಿಸಿದರು.
ಸಿ.ಎಸ್. ಮಾಲಿಪಾಟೀಲ ಪ್ರಾರ್ಥನಾಗೀತೆ ಹಾಡಿದರು. ಭೀಮರಾವ್ ಅರಕೇರಿ ನಿರೂಪಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ್ ನಿಷ್ಠಿ, ಕುಲಸಚಿವರಾದ ಡಾ| ವಿ.ಡಿ. ಮೈತ್ರಿ, ಪ್ರೊ| ಎನ್.ಎಸ್. ದೇವರಕಲ್, ಡಾ| ಅನೀಲಕುಮಾರ ಬಿಡವೆ, ಡೀನ್ ಡಾ| ಲಿಂಗರಾಜ ಶಾಸ್ತ್ರೀ, ಸಾಹಿತಿಗಳಾದ ಪ್ರೊ| ವಸಂತ ಕುಷ್ಟಗಿ, ಎ.ಕೆ.ರಾಮೇಶ್ವರ ಹಾಜರಿದ್ದರು.
ಡಾ| ಅಪ್ಪ ಅವರ ಆರೋಗ್ಯ ಸೂತ್ರ ತಾವು ಸದೃಢ ಆರೋಗ್ಯ ಹೊಂದಿರಲು 70 ವಯಸ್ಸಿನವರೆಗೂ ಸೂರ್ಯ ನಮಸ್ಕಾರ, ವ್ಯಾಯಾಮ ಅಳವಡಿಸಿಕೊಂಡಿರುವುದೇ ಕಾರಣ. ಅಲ್ಲದೇ ರಾತ್ರಿ ಕಡಿಮೆ ಊಟ ಮಾಡುವ ರೂಢಿ ಮೈಗೂಡಿಸಿಕೊಂಡಿರುವುದು ಹಾಗೂ ಕಾಯಕ ಧೋರಣೆ ಸದಾ ಹೊಂದಿರುವುದೇ ತಮ್ಮ ಆರೋಗ್ಯಗುಟ್ಟು. ಕರಿದ ಪದಾರ್ಥಗಳನ್ನು ತಿನ್ನಬಾರದು. ದಿನಾಲು ಬೆಳಗ್ಗೆ ಎದ್ದ ತಕ್ಷಣ ನಾಲ್ಕು ಗ್ಲಾಸು ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಹೀಗೆ ಮಾಡಿದಲ್ಲಿ ನೈಸರ್ಗಿಕ ಕ್ರಿಯೆ ಕ್ರಮಬದ್ಧವಾಗುತ್ತದೆ. ಅಲ್ಲದೇ ಮೊಣಕಾಲು ನೋವು ಬರೋದಿಲ್ಲ. ಜೇನುತುಪ್ಪ ದಾಲ್‌ಚಿನ್ನಿ ತಿನ್ನಬೇಕು. ಒಟ್ಟಾರೆ ತಾವು ಬದುಕಿ ಇನ್ನೊಬ್ಬರನ್ನು ಬದುಕಿಸಬೇಕು ಎಂದು ಡಾ| ಶರಣಬಸವಪ್ಪ
ಅಪ್ಪ ಹೇಳಿದರು.
ಶರಣಬಸವ ವಿವಿಯಲ್ಲಿ ಅಧ್ಯಯನ ಪೀಠ ಶರಣಬಸವ ವಿಶ್ವವಿದ್ಯಾಲಯಕ್ಕೆ ತಿಂಗಳಿಗೆ ಮೂರು ಕೋಟಿ ರೂ. ಖರ್ಚು
ಮಾಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವುದೇ ತಮ್ಮ ಧ್ಯೇಯವಾಗಿದೆ. ಸಂಸ್ಥೆಯಲ್ಲಿ ಮೂರು ಸಾವಿರ ಶಿಕ್ಷಕ- ಶಿಕ್ಷಕೇತರ ವರ್ಗದವರಿದ್ದಾರೆ. ತಿಂಗಳಿಗೆ 20 ಕೋಟಿ ರೂ. ಪಗಾರ ನೀಡಲಾಗುತ್ತಿದೆ. ಶರಣಬಸವ ವಿವಿಯಲ್ಲಿ ಪರಿಣಾಮಕಾರಿ ಅಧ್ಯಯನ ಪೀಠಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಕುಲಸಚಿವ ಅನೀಲಕುಮಾರ ಬಿಡವೆ ಹಾಗೂ
ಉದ್ಯಮಿ ಎಸ್.ಎಸ್. ಪಾಟೀಲ ತಲಾ 10 ಲಕ್ಷ ರೂ. ನೀಡಿದ್ದಾರೆ. ವಿಶ್ವದಲ್ಲಿ 200 ಉತ್ತಮ ವಿವಿಗಳೆಂದು ಗುರುತಿಸಲಾಗಿದೆ. ಅದರಲ್ಲಿ ದೇಶದ ಒಂದೂ ವಿವಿ ಇಲ್ಲ. ಆದರೆ ಶರಣಬಸವ ವಿವಿ ಸೇರಬೇಕೆಂಬುದು ತಮ್ಮ ಅಭಿಲಾಷೆಯಾಗಿದೆ.
ಡಾ| ಶರಣಬಸವಪ್ಪ ಅಪ್ಪ, ಕುಲಾಧಿಪತಿಗಳು, ಶರಣಬಸವ ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.