ಕೀಟನಾಶಕ ಬಳಕೆಯಿಂದ ರೈತರಿಗೂ ಹಾನಿ: ಭಕ್ಕಣ್ಣನವರ
Team Udayavani, Jul 4, 2017, 2:42 PM IST
ಕಲಬುರಗಿ: ಸದಾ ಕಾಲ ಕೃಷಿ ಕ್ಷೇತ್ರದಲ್ಲಿ ದುಡಿಯುವ ರೈತರು ವಿವಿಧ ಕೀಟನಾಶಕ ಸಿಂಪಡಿಸುತ್ತಲೇ ಇರುತ್ತಾರೆ. ಹಾಗಾಗಿ ಅವರಿಗೂ ಆರೋಗ್ಯ ಹಾನಿ ಸಂಭವಿಸಲಿದೆ ಎಂದು ಮಣಿಪಾಲ ಕಸ್ತೂರಬಾ ಮೆಡಿಕಲ್ ಕಾಲೇಜು ವೈದ್ಯ ಶಂಕರ ಎಂ. ಭಕ್ಕಣ್ಣನವರ ಹೇಳಿದರು.
ಆಳಂದ ತಾಲೂಕು ತೆಲ್ಲೂರು ಗ್ರಾಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗ, ರಾಯಚೂರು ಕೃಷಿ ವಿಶ್ವವಿದ್ಯಾಲಯ,
ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ, ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಡಾನ್ ಫೌಂಡೇಶನ್ ವತಿಯಿಂದ ರೈತರಿಗೆ
ಸೋಮವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ರೈತರ ದೇಹದಲ್ಲಿನ ಇತರೆ ಭಾಗಗಳ ಮೇಲೆ ಕೀಟನಾಶಕ ರಸಾಯನಿಕದ ಅಡ್ಡ ಪರಿಣಾಮಗಳ ಕುರಿತು ತಪಾಸಣೆ ಮಾಡಿ ಅವರಿಗೆ ಸೂಕ್ತ ಪರಿಹಾರೋಪಾಯ ಸೂಚಿಸಲಾಗುವುದು ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ| ರಾಜು ಜಿ. ತೆಗ್ಗಳ್ಳಿ ಮಾತನಾಡಿ, ತೊಗರಿ ನಾಡಿನಲ್ಲಿ
ಹುಳ-ರೋಗ ಬಾಧೆ ಕಂಡು ಬಾರದೆ ಇದ್ದರೂ ಅತಿಯಾದ ರಸಾಯನಿಕ ಕೀಟನಾಶಕ ಬಳಕೆ ತಪ್ಪಿಸಬೇಕು. ಶಿಫಾರಸಿನ
ಹಾಗೂ ಪ್ರಮಾಣಿಕೃತ ಕೀಟನಾಶಕ ಹಾಗೂ ಸಾವಯವ ಕೃಷಿಗೆ ಒತ್ತು ನೀಡಬೇಕು. ಇದರಿಂದ ಪರಿಸರವಲ್ಲದೆ, ರೈತರು ತಮ್ಮ ಹಾಗೂ ಸಮಾಜದ ಆರೋಗ್ಯ ಕಾಪಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ವೈದ್ಯ ವಿನುತ ಭಟ್ ಮಾತನಾಡಿದರು. ಸಂಶೋಧಕರಾದ ಡಾ| ಬ್ರಿಜೇಶ ನಾಯಕ, ಡಾ| ಪ್ರಿಯಾಂಕ, ಡಾ| ಪ್ರಗತಿ,
ಅಮರೇಶ ಹಾಗೂ ನಾಗರಾಜ ದೇಶಪಾಂಡೆ ರೈತರನ್ನು ವಿವಿಧ ಪರೀಕ್ಷೆಗೆ ಒಳಪಡಿಸಿದರು. ಒಟ್ಟು 135 ಜನ ರೈತರು ಆರೋಗ್ಯ ತಪಾಸಣಾ ಶಿಬಿರದ ಉಪಯೋಗ ಪಡೆದುಕೊಂಡರು. ಸಸ್ಯರೋಗ ತಜ್ಞರಾದ ಡಾ| ಜಹೀರ್ ಅಹಮದ್
ಸ್ವಾಗತಿಸಿದರು. ಧಾನ್ ಫೌಂಡೇಶನ್ ಅ ಧಿಕಾರಿ ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು. ಕೃಷಿ ವಿಜ್ಞಾನ
ಕೇಂದ್ರದ ಕ್ಷೇತ್ರ ಸಹಾಯಕ ಮಲ್ಲಿನಾಥ ಹೆಮಾಡಿ, ಸೈದಪ್ಪ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.