ಬೇರೆ ಇಲಾಖೆಯವರ ನೇಮಕ ವಿರೋಧಿಸಿ ಮನವಿ
Team Udayavani, Sep 3, 2022, 3:42 PM IST
ಸಿಂಧನೂರು: ಅನ್ಯ ಇಲಾಖೆಯವರನ್ನು ತಾಪಂ ಇಒ ಆಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಆರ್‌ಡಿಪಿಆರ್ ಅಧಿಕಾರಿಗಳ ಮತ್ತು ನೌಕರರ ಸಂಘದಿಂದ ಶುಕ್ರವಾರ ರಾಜ್ಯ ಸರಕಾರಕ್ಕೆ ತಾಪಂ ಇಒ ಮೂಲಕ ಮನವಿ ರವಾನಿಸಲಾಯಿತು.
ಸಂಘದ ಪದಾಧಿಕಾರಿಗಳು ಮಾತನಾಡಿ, ತಾಪಂ ಇಒ ಹುದ್ದೆಯು ಉಪವಿಭಾಗಾಧಿಕಾರಿ ದರ್ಜೆಯ ಜವಾಬ್ದಾರಿಯಾಗಿದೆ. 32 ಇಲಾಖೆಗಳ ಮೇಲ್ವಿಚಾರಣೆ, ಎಲ್ಲ ಇಲಾಖೆಯ ಬಿಲ್‌ಗಳಿಗೆ ಮೇಲು ರುಜು ಮಾಡುವ ಅಧಿಕಾರವನ್ನು ಹೊಂದಿದೆ. ನರೇಗಾ, ಈ ಸ್ವತ್ತು, ಸುವರ್ಣ ಗ್ರಾಮ, 15ನೇ ಹಣಕಾಸು, ಮುಖ್ಯಮಂತ್ರಿ ಗ್ರಾಮ ವಿಕಾಸ ಸೇರಿದಂತೆ ಅನೇಕ ಯೋಜನೆಗಳ ಮೇಲ್ವಿಚಾರಣೆ ತಾಪಂ ವ್ಯಾಪ್ತಿಯಲ್ಲಿದೆ. ಗ್ರಾಮೀಣಾಭಿವೃದ್ಧಿಯ ಮಹತ್ವದ ಕೆಲಸವನ್ನು ತಾಲೂಕು ಪಂಚಾಯತ್ ನಿರ್ವಹಿಸುತ್ತಿದ್ದು, ಗ್ರಾಪಂಗಳ ಪಾತ್ರ ಪ್ರಮುಖವಿದೆ. ಬೇರೆ ಇಲಾಖೆಗಳ ನೌಕರರನ್ನು ತಾಪಂಗೆ ನೇಮಕ ಮಾಡಿದರೆ, ಇಲಾಖೆಯ ಬಗ್ಗೆ ತಿಳಿದುಕೊಳ್ಳಲು 6 ತಿಂಗಳು ಬೇಕಾಗುತ್ತದೆ. ಗುತ್ತಿಗೆ ಒಪ್ಪಂದ ಮೂಲಕ ಪ್ರಕಾಶ್ ಎನ್ನುವವರನ್ನು ನೇಮಕ ಮಾಡಿದ್ದು, ಅದನ್ನು ರದ್ದುಗೊಳಿಸಬೇಕು. ಆರ್‌ಡಿಪಿಆರ್ ಅಧಿಕಾರಿಗಳ, ನೌಕರರ ಸಂಘದ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ತಾಪಂ ಇಒ ಲಕ್ಷ್ಮೀದೇವಿ ಅವರು ಮನವಿ ಸರಕಾರಕ್ಕೆ ರವಾನಿಸಿದರು. ತಾಪಂ ಗ್ರಾಮೀಣಾಭಿವೃದ್ಧಿ ಎಡಿಎ ಅಮರಗುಂಡಪ್ಪ, ನರೇಗಾ ಸಹಾಯಕ ನಿರ್ದೇಶಕ ಮನೋಹರ್, ಪಿಡಿಒಗಳಾದ ಯಂಕಪ್ಪ ಕುರುಕುಂದಾ, ಸಿ.ಎಚ್. ಮುದುಕಪ್ಪ, ಹನೀಫ್, ದೀಪಾ ಅರಳಿಕಟ್ಟಿ, ಪೂರ್ಣಿಮಾ, ಸರೋಜಮ್ಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.