ಜನನ-ಮರಣ ತಿದ್ದುಪಡಿ ಹಿಂಪಡೆಗೆ ಮನವಿ
Team Udayavani, Aug 11, 2022, 5:20 PM IST
ಅಫಜಲಪುರ: ರಾಜ್ಯ ಸರ್ಕಾರ ಜನನ ಮತ್ತು ಮರಣ ನಿಯಮ ತಿದ್ದುಪಡಿ ಮಾಡಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ತಾಲೂಕು ವಕೀಲರ ಸಂಘದಿಂದ ತಹಶೀಲ್ದಾರ್ ಸಂಜಯಕುಮಾರ ದಾಸರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ವಕೀಲರ ಸಂಘದ ತಾಲೂಕಾಧ್ಯಕ್ಷ ಎಂ.ಎಲ್.ಪಟೇಲ್ ಮನವಿ ಸಲ್ಲಿಸಿ ಮಾತನಾಡಿ, ಜನ ಸಾಮಾನ್ಯರಿಗೆ ಅತ್ಯಾವಶ್ಯಕವಾಗಿ ಜನನ ಮತ್ತು ಮರಣ ಪ್ರಮಾಣ ಪತ್ರ ಬೇಕಾಗಿರುವುದರಿಂದ ಅವುಗಳು ತಾಲೂಕು ಮಟ್ಟದಲ್ಲಿ ಪಡೆದುಕೊಳ್ಳುತ್ತಿದ್ದರು. ಅದನ್ನು ಈ ಹಿಂದೆ ಜನನ ಮತ್ತು ಮರಣಗಳ ನೋಂದಣಿ ಯಾಗದಿರುವ ಪ್ರಕರಣಗಳು ವಿಚಾರಣೆ ಮಾಡಲು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಇತ್ತು. ಈಗ ರಾಜ್ಯ ಸರ್ಕಾರ ಈ ನಿಯಮ ರದ್ದು ಮಾಡಿ ಸಹಾಯಕ ಆಯುಕ್ತರಿಗೆ ವಹಿಸಿದೆ. ಇದರಿಂದ ಸಾರ್ವನಿಕರಿಗೆ ಸಮಸ್ಯೆಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಕೀಲರಾದ ಅರ್ಜುನ ಕೇರೂರ, ಪಿ.ಆರ್.ಪೂಜಾರಿ, ಅನಿತಾ ದೊಡ್ಡಮನಿ, ಮಹಿಬೂಬಿ ಪಟೇಲ್, ಎ.ಎಸ್. ಜಮಾದಾರ, ಸುರೇಶ ಅವಟೆ, ಕೆ.ಜಿ.ಪೂಜಾರಿ, ಎಸ್.ಕೆ.ಪೂಜಾರಿ, ಎಸ್. ಎಸ್.ಪಾಟೀಲ, ಪ್ರಶಾಂತ ಪಾಟೀಲ, ವಸೀಂ ಜಾಗಿರದಾರ ಇನ್ನಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.