ಗ್ರಾಹಕರಿಗೆ ಪೆಟ್ರೋಲ್-ಡೀಸೆಲ್ ಗುಣಮಟ್ಟ ಜಾಗೃತಿ
Team Udayavani, Jun 25, 2019, 2:15 PM IST
ವಾಡಿ: ಧನಲಕ್ಷ್ಮೀ ಪೆಟ್ರೋಲ್ ಬಂಕ್‌ನಲ್ಲಿ ಎಚ್ಪಿ ತೈಲದ ಗುಣಮಟ್ಟ ಹಾಗೂ ತೈಲ ಪ್ರಮಾಣ ಖಾತ್ರಿಪಡಿಸುವ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸಲಾಯಿತು.
ವಾಡಿ: ಬಂಕ್‌ಗಳಲ್ಲಿ ದೊರೆಯುವ ಪೆಟ್ರೋಲ್ ಹಾಗೂ ಡೀಸೆಲ್ ಗುಣಮಟ್ಟದ ಮೇಲೆ ಗ್ರಾಹಕರು ವ್ಯಕ್ತಪಡಿಸುವ ಕಲಬೆರಕೆ ಸಂಶಯ ದೂರ ಮಾಡಲು ಮುಂದಾಗಿರುವ ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ) ಕಂಪನಿ ತನ್ನೆಲ್ಲ ಬಂಕ್‌ಗಳಲ್ಲಿ ಮೂಲಸೌಕರ್ಯ ಖಾತ್ರಿ ಪಡಿಸುವ ಜತೆಗೆ ತೈಲದ ಪ್ರಮಾಣ ಮತ್ತು ಗುಣಮಟ್ಟ ಪರೀಕ್ಷಾ ಸೌಲಭ್ಯ ಜಾರಿಗೊಳಿಸುವ ಮೂಲಕ ಪಾರದರ್ಶಕತೆ ಮೆರೆದಿದೆ.
ಪಟ್ಟಣದ ಹೊರ ವಲಯದ ಶ್ರೀಧನಲಕ್ಷ್ಮೀ ಫಿಲ್ಲಿಂಗ್ ಸ್ಟೇಷನ್ (ಪೆಟ್ರೋಲ್ ಬಂಕ್)ನಲ್ಲಿ ಸೋಮವಾರ ಗ್ರಾಹಕರಿಗೆ ತೈಲದ ಗುಣಮಟ್ಟ ಹಾಗೂ ಖರೀದಿಸುವ ತೈಲದ ಪ್ರಮಾಣವನ್ನು ಮೊದಲು ಮಾಪಕಗಳಲ್ಲಿ ತುಂಬಿಸಿ ತೋರಿಸಲಾಯಿತು. ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಲು ಬಂದಿದ್ದ ಪ್ರತಿಯೊಬ್ಬ ಗ್ರಾಹಕರಿಗೂ ಕಡ್ಡಾಯವಾಗಿ ತೈಲದ ಗುಣಮಟ್ಟ-ಪ್ರಮಾಣ ಪರೀಕ್ಷಿಸುವ ಸ್ವಾತಂತ್ರ್ಯ ನೀಡಲಾಯಿತು. ಅನೇಕರು ಪಾರದರ್ಶಕ ನಿಯಮವನ್ನು ಸ್ವಾಗತಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಧನಲಕ್ಷ್ಮೀ ಫಿಲ್ಲಿಂಗ್ ಸ್ಟೇಷನ್ ಮುಖ್ಯಸ್ಥ ಭೀಮರಾವ ದೊರೆ, ಬಂಕ್‌ಗಳಲ್ಲಿ ತೈಲದ ಕ್ವಾಲಿಟಿ ಮತ್ತು ಕ್ವಾಂಟಿಟಿ ಖಾತ್ರಿಪಡಿಸುವ ಹಕ್ಕು ಗ್ರಾಹಕರಿಗೆ ನೀಡಲಾಗಿದೆ. ಗ್ರಾಹಕರಿಗಾಗಿ ಬಂಕ್‌ನಲ್ಲಿ ಪ್ರಥಮ ಚಿಕಿತ್ಸೆ, ವಾಹನಗಳಿಗೆ ಗಾಳಿ, ದೂರವಾಣಿ, ಕುಡಿಯುವ ಶುದ್ಧ ನೀರು, ಶೌಚಾಲಯ, ವಿಶ್ರಾಂತಿ ಕೋಣೆಯ ಸೌಲಭ್ಯ ಒದಗಿಸಲಾಗಿದೆ. ವಿದ್ಯುತ್ ಕಡಿತಗೊಂಡರೂ ದಿನದ 24 ತಾಸು ತೈಲ ದೊರೆಯುವಂತೆ ಜನರೇಟರ್ ಅಳವಡಿಸಲಾಗಿದೆ. ಬಂಕ್‌ಗಳಲ್ಲಿ ಪಾರದರ್ಶಕ ಪರೀಕ್ಷಾ ನಿಯಮ ಜಾರಿಗೆ ತರುವ ಮೂಲಕ ಗ್ರಾಹಕರ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯಿಂದ ಸ್ಥಳೀಯ ಮಟ್ಟದಲ್ಲಿ ನಡೆಯುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಾಯ ಸಹಕಾರದ ಪ್ರೋತ್ಸಾಹ ನೀಡಲಿದ್ದೇವೆ ಎಂದು ತಿಳಿಸಿದರು.
ಸುನೀಲ ದೊರೆ, ಮರಲಿಂಗ್, ಮಹ್ಮದ್, ಭಾಗಣ್ಣ ಬಿ.ಡಿ. ಶಿವುಕುಮಾರ, ಮಲ್ಲಿಕಾರ್ಜುನ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.