ರೌಡಿಗಳಿಗೆ ಪೊಲೀಸರ ಗುಂಡಿನುತ್ತರ
Team Udayavani, Dec 16, 2017, 11:11 AM IST
ಕಲಬುರಗಿ: ರೌಡಿಗಳನ್ನು ಸಂಪೂರ್ಣ ಹೆಡೆಮುರಿಯಲು ಸನ್ನದ್ಧರಾಗಿರುವ ಪೊಲೀಸರು ಬಂದೂಕಿನಿಂದ ಸದ್ದು ಮಾಡುವುದನ್ನು ನಿರಂತರವಾಗಿ ಮುಂದುವರಿಸಿದ್ದು, ಪ್ರಸಕ್ತ ವರ್ಷದಲ್ಲಿಯೇ ಒಟ್ಟು ಎಂಟು ಸಲ ರೌಡಿಗಳ ಹಾಗೂ ಪೊಲೀಸ್‌ರ ನಡುವೆ ಗುಂಡಿನ ಕಾಳಗ ನಡೆದಿದೆ.
ವರ್ಷದ ಹಿಂದೆ ರಾಮ ಮಂದಿರ ವೃತ್ತ, ಆಳಂದ ನಾಕಾದ ಹತ್ತಿರ ವರ್ತುಲ ರಸ್ತೆಯಲ್ಲದೇ ಇತರೆಡೆ ದರೋಡೆ, ಸರಗಳ್ಳತನ ಪ್ರಕರಣಗಳು ಅವ್ಯಾಹುತವಾಗಿ ನಡೆಯುತ್ತಲೇ ಇದ್ದವು. ಹೀಗಾಗಿ ಪೊಲೀಸ್‌ರು ರೌಡಿಗಳಿಗೆ ಗುಂಡೇನಿಂದಲೇ ಉತ್ತರ ನೀಡುತ್ತಿದ್ದಾರೆ. ಅಪರಾಧ ಪ್ರಕರಣಗಳು ಕಡಿಮೆಯಾಗಿವೆಯಾದರೂ ಸಂಪೂರ್ಣ ನಿಂತಿಲ್ಲ. ಬುಡ ಸಮೇತ ಪ್ರಕರಣಗಳನ್ನು ಕಿತ್ತು ಹಾಕುವವರೆಗೂ ಉತ್ತರ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಗುಡುಗಿದ್ದಾರೆ.
ಪ್ರಸಕ್ತ ವರ್ಷದ ಕೊನೆ ತಿಂಗಳವಾದ ಡಿ. 15ರಂದು ನಗರದ ಹೊರ ವಲಯ ತಾವರಗೇರಾ ಕ್ರಾಸ್ ಬಳಿ ಕಳೆದ ಆಕ್ಟೋಬರ್ 7ರಂದು ವಿದ್ಯುತ್ ಗುತ್ತಿಗೆದಾರನ್ನು ಅಪಹರಿಸಿ 6 ಲಕ್ಷ ರೂ. ಬೇಡಿಕೆ ಇಟ್ಟು, ಹಣ ಪಡೆದ ನಂತರವೂ ಗುತ್ತಿಗೆದಾರನನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ತದನಂತರ ಮುಂಬೈ, ಗುಜರಾತ್, ನವದೆಹಲಿ ಸೇರಿದಂತೆ ಇತರೆಡೆ ಸುತ್ತಾಡುತ್ತಿದ್ದ. ಈತನ ಚಲನವಲನ ಮೇಲೆ ಪೊಲೀಸ್‌ರು ನಿಗಾ ವಹಿಸುತ್ತಿರುವುದನ್ನು ಅರಿತ ಕುಖ್ಯಾತ ರೌಡಿ ಯಶ್ವಂತರಾಯ ಹೇಗಾದರೂ ಮಾಡಿ ತನ್ನೂರು ಸುಲ್ತಾನಪುರಕ್ಕೆ ಬಂದು ಹೋಗಬೇಕೆಂದು ನಿರ್ಧರಿಸಿದ. ಆದರೆ ಪೊಲೀಸರು ಹೊಂಚು ಹಾಕಿ ಬಂಧಿಸಲು ಹೋದಾಗ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದ. ಪ್ರತಿಯಾಗಿ ಪೊಲೀಸರು ಗುಂಡಿನ ಮೂಲಕ ಪ್ರತಿದಾಳಿ ನಡೆಸಿದ್ದಾರೆ.
ರೌಡಿ ಯಶ್ವಂತರಾಯ 2016ರಲ್ಲಿ ಸ್ವಗ್ರಾಮ ತಾಜಸುಲ್ತಾನಪುರದ ವಿದ್ಯುತ್ ಗುತ್ತಿಗೆದಾರ ಮಂಜುನಾಥ ಎನ್ನುವರಿಗೆ ಮದ್ಯದಲ್ಲಿ ವಿಷ ಬೆರೆಸಿ ಹತ್ಯೆ ಮಾಡಿರುವುದು ಈಗ ಬಯಲಿಗೆ ಬಂದಿದೆ. ಅಲ್ಲದೇ ಡಕಾಯಿತಿ ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದು, ಹೈಕೋರ್ಟ್‌ಗೆ ಮೊರೆ ಹೋಗಿ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾನೆ. ಅಲ್ಲದೇ ಅಕ್ರಮ ಬಂದೂಕು ಮಾರಾಟ ಸೇರಿದಂತೆ ಇತರ ಅಪರಾಧ ಪ್ರಕರಣಗಳು ಈತನ ಮೇಲಿವೆ.
ರೌಡಿಗಳು ಪೊಲೀಸರ ಗುಂಡಿಗೆ ಒಳಗಾಗಿ ಜೈಲು ಸೇರಿದ್ದರೆ ಆತನ ಹಿಂದಿದ್ದ ಮರಿ ರೌಡಿಗಳು ಬಾಲ ಬಿಚ್ಚುತ್ತಿದ್ದಾರೆಂದು ತಿಳಿದುಬಂದಿದೆ. ಇದಕ್ಕೆ ಪೊಲೀಸ್‌ರು ಕಡಿವಾಣ ಹಾಕಿದರೆ ಅಪರಾಧ ಜಗತ್ತು ವಿಸ್ತಾರಗೊಳ್ಳುವುದಕ್ಕೆ ಪೂರ್ಣವಿರಾಮ ಹಾಕಿದಂತಾಗುತ್ತದೆ.
ಬಂದೂಕು ಪೂರೈಕೆ- ಮಾರಾಟ
ತಡೆಗೆ ಕಾರ್ಯಾಚರಣೆ ಅಪರಾಧ ಪ್ರಕರಣಗಳಿಗೆ ಪ್ರೇರಣೆ ನೀಡುವ ಬಂದೂಕು ಮಾರಾಟ ಹಾಗೂ ಪೂರೈಕೆ ದಂಧೆಗೆ ಬುಡ ಸಮೇತ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸನ್ನದ್ಧಗೊಂಡು ಕಾರ್ಯಾಚರಣೆಗಿಳಿದಿದೆ. ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವೊಂದು ಮಧ್ಯಪ್ರದೇಶಕ್ಕೆ ತೆರಳಿದೆ. ಅಲ್ಲಿನ ಸ್ಥಳೀಯ ಪೊಲೀಸ್‌ರೊಂದಿಗೆ ಸಮನ್ವಯತೆ ಸಾಧಿಸಲಾಗಿದೆ. ಶೀಘ್ರದಲ್ಲಿ ಅಲ್ಲೂ ಪೊಲೀಸ್‌ರು ಕಾರ್ಯಾಚರಣೆ ನಡೆಸಲಿದ್ದಾರೆ.
ಅಲೋಕಕುಮಾರ, ಐಜಿಪಿ, ಈಶಾನ್ಯ ವಲಯ, ಕಲಬುರಗಿ
ಈ ವರ್ಷ ಎಂಟನೇ ಪ್ರಕರಣ
ಪ್ರಸಕ್ತ 2017ರಲ್ಲಿ ಪೊಲೀಸ್‌ರಿಂದ ಹಾಗೂ ಗುಂಡಾಗಳಿಂದ ಒಟ್ಟಾರೆ 8 ಸಲ ಬಂದೂಕಿನಿಂದ ಶಬ್ದ ಹೊರ ಬಂದಿದೆ. ಇವು
ದಾಖಲೆಯ ಗುಂಡಿನ ಸದ್ದುಗಳಾಗಿವೆ.
ಕಳೆದ ಜೂನ್ 27ರಂದು ಕಾರಾಗೃಹದಿಂದ ತಪ್ಪಿಸಿಕೊಂಡು ಹೋಗಿದ್ದ ತಾಜುದ್ದೀನ್ ಎನ್ನುವ ಕೈದಿಯನ್ನು ಹಿಡಿಯಲು ಹೋದಾಗ ಕೈದಿ ಪ್ರತಿಯಾಗಿ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದಾಗ ಪೊಲೀಸ್‌ರು ಕೆಸರಟಗಿ ಬಳಿ ಫೈರಿಂಗ್ ನಡೆಸಿ ಬಂಧಿಸಿದ್ದರು.
ಕಳೆದ ಜುಲೈ 31ರಂದು ಫರಹಾಬಾದ್ ಬಳಿಯ ಬಸನಾಳದಲ್ಲಿ ಅಪಹರಣಕಾರರನ್ನು ಬಂಧಿಸಲು ಹೋದಾಗ ಕಿರಣ ಹಾಗೂ ದೀಪಕಕುಮಾರ ಎನ್ನುವ ಆರೋಪಿಗಳು ಪೊಲೀಸರ ಮೇಲೆಯೇ ಪ್ರತಿದಾಳಿ ನಡೆಸಿದ್ದರು. ಇದರಲ್ಲಿ ಎಸ್‌ಪಿ ಅಂಗರಕ್ಷಕ ಪ್ರಕಾಶ ಸೇರಿದಂತೆ ಇತರರು ಗಾಯಗೊಂಡಿದ್ದರು. ಆಗ ಪೊಲೀಸರು ಎರಡು ಸುತ್ತು ಫೈರಿಂಗ್ ಮಾಡಿದ್ದರು. ಇದರಲ್ಲಿ ಇಬ್ಬರೂ ಅಪಹರಣಕಾರರಿಗೂ ಗುಂಡು ತಗುಲಿದ್ದವು.
ಆಗಸ್ಟ್ 1ರಂದು ಹಲವಾರು ಅಪರಾಧ, ಕೊಲೆ ಪ್ರಕರಣಗಳನ್ನು ನಿರಂತರವಾಗಿ ಎಸಗುತ್ತಾ ಪೊಲೀಸ್‌ರಿಗೆ ಸವಾಲಾಗಿದ್ದ ಕೋಕಾ ಕಾಯ್ದೆ ಅಡಿ ಬಂಧಿತನಾಗಬೇಕಿದ್ದ ಕರಿಚಿರತೆ ಅಲಿಯಾಸ್ ಶಿವಾನಂದ ಬಡಿಗೇರ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದ. ತಾಲೂಕಿನ ಕೆಸರಟಗಿ ಬಳಿ ಬಂಧಿಸಲು ಹೋದಾಗ ಪೊಲೀಸ್‌ರ ಮೇಲೆಯೇ ಕರಿಚಿರತೆ ದಾಳಿ ನಡೆಸಿದ್ದ. ಹೀಗಾಗಿ ಪೊಲೀಸ್‌ರು ಬಂದೂಕಿನಿಂದ ಗುಂಡುಗಳನ್ನು ಹಾರಿಸಿದ್ದರು.
ಅಕ್ಟೋಬರ್ 7ರಂದೇ ಕಲಬುರಗಿ ತಾಲೂಕಿನ ತಾಜಸುಲ್ತಾನಪುರ ಗ್ರಾಮದ ವಿದ್ಯುತ್ ಗುತ್ತಿಗೆದಾರ ಮೋನಪ್ಪ ಸುತಾರ ಎನ್ನುವನನ್ನು ಅಪಹರಿಸಿ 6 ಲಕ್ಷ ರೂ. ಪಡೆದು ತಾಲೂಕಿನ ರಿಕ್ಕಿನ ಆಲೂರ ಬಳಿ ಮೂರು ಸುತ್ತು ಗುಂಡು ಹಾರಿಸಿ ಈರಣ್ಣ ಶರಣಪ್ಪ ಕೋಚಿ, ಪಂಡಿತ ಬಸಣ್ಣ, ಪರಸಪ್ಪ ಲಾಡಪ್ಪ ಕೋಚಿ ಹಾಗೂ ಗೌತಮ ತುಕಾರಾಮ ಮುಗಳಿ ಸೇರಿದಂತೆ ಇತರರು ಗುಂಡು ಹಾರಿಸಿ ಕೊಲೆ ಮಾಡಿದ್ದರು.
ಅಕ್ಟೋಬರ್ 8ರಂದು ಕಲಬುರಗಿ ನಗರದ ಹೊರವಲಯ ಡಬರಾಬಾದ್ ಬಳಿ ಚೇತನ ಹಾಗೂ ಶಿವಕುಮಾರ ಎಂಬ ರೌಡಿಗಳನ್ನು ಬಂಧಿಸಲು ರಾಘವೇಂದ್ರ ಮಹಿಳಾ ಪಿಎಸ್‌ಐ ಅಕ್ಕಮಹಾದೇವಿ ಹಾಗೂ ಸಿಬ್ಬಂದಿಯವರು ತೆರಳಿದ್ದರು. ಆಗ ಪೊಲೀಸ್ ಜೀಪ್ ಮೇಲೆ ಕಲ್ಲೇಸೆದು ಪರಾರಿಯಾಗುತ್ತಿದ್ದಾಗ ಪೊಲೀಸ್ ಫೈರಿಂಗ್ ಆಗಿತ್ತು.
ಡಿ.1ರಂದು ನಗರದ ಹೊರವಲಯದ ಕೆಸರಟಗಿ ಗಾರ್ಡ್‌ನ ಬಳಿ ಪೊಲೀಸರು ದಾಳಿ ನಡೆಸಿದಾಗ ಸುಲಿಗೆಕೋರ ಮಹ್ಮದ ಇರ್ಫಾನ್ ಮಹ್ಮದ ಯುಸೂಫ್ (24) ಎಂಬುವವನು ಹಾಗೂ ಆತನ ಇಬ್ಬರು ಸಹಚರರು ಕಲ್ಲು ಹಾಗೂ ತಲವಾರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದಾಗ ಪ್ರತಿಯಾಗಿ ಪೊಲೀಸ್‌ರು ಗುಂಡಿನ ದಾಳಿ ನಡೆಸಿ ಇರ್ಫಾನ್‌ನನ್ನು ಬಂಧಿಸಿದ್ದರು.
ಡಿ. 4ರಂದು ಅಫಜಲಪುರ ತಾಲೂಕಿನ ಭೀಮಾ ನದಿ ತೀರದ ದೇವಲ್‌ಗಾಣಗಾಪುರಕ್ಕೆ ಹತ್ತಿಕೊಂಡಂತಿರುವ ಹೊಳೆ ಭೋಸಗಾ ಗ್ರಾಮದ ಬಳಿ ಕುಖ್ಯಾತ ರೌಡಿಯಾಗಿದ್ದ ಚಂದಪ್ಪ ಹರಿಜನ ಸಹಚರ ಅರ್ಜುನನ್ನು ಬಂಧಿಸಲು ಹೋದಾಗ ಪೊಲೀಸ್‌ರ ಮೇಲೆಯೇ ಫೈರಿಂಗ್ ಮಾಡಿದ್ದರಿಂದ ಪೊಲೀಸ್‌ರು ಪ್ರತಿಯಾಗಿ ಗುಂಡು ಹಾರಿಸಿದ್ದು, ರೌಡಿ ಅರ್ಜುನನ ಕಾಲಿಗೆ ಗುಂಡು ತಗುಲಿದೆ.
ಡಿ. 15ರಂದು ತಾವರಗೇರಾ ಬಳಿ ಕುಖ್ಯಾತ ರೌಡಿ ಯಶ್ವಂತರಾಯನ ಕಾಲಿಗೆ ಗುಂಡು ಹಾರಿಸಿ ಪೊಲೀಸ್‌ರು
ಬಂಧಿಸಿದ್ದಾರೆ.
ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.