ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ
Team Udayavani, Feb 10, 2018, 12:37 PM IST
ಅಫಜಲಪುರ: ಸರ್ಕಾರ ವಸತಿ ನಿಲಯಗಳಲ್ಲಿನ ಮಕ್ಕಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ ವಸತಿ ನಿಲಯದ ಮುಖ್ಯ ಅಡುಗೆಯವರ ನಿರ್ಲಕ್ಷéದಿಂದ ಮಕ್ಕಳು ಕಳಪೆ ಗುಣಮಟ್ಟದ ಆಹಾರ ಸೇವಿಸುವಂತಾಗಿದೆ ಎಂದು ಬಡದಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತಾಲೂಕಿನ ಬಡದಾಳ ಗ್ರಾಮದ ಬಿಸಿಎಂ ವಸತಿ ನಿಲಯದಲ್ಲಿ ಸುಮಾರು ದಿನಗಳಿಂದ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಸುಮಾರು ದಿನಗಳಿಂದ ಮಕ್ಕಳು ಸಮಸ್ಯೆ ಯಾರಿಗೂ ಹಂಚಿಕೊಂಡಿಲ್ಲ. ಆದರೆ ಈಗ ತೊಗರಿ ಬೆಳೆ, ಕಡಲೆ ಬೆಳೆಯಲ್ಲಿ ಹುಳ ತುಂಬಿಕೊಂಡಿವೆ. ಹುಳ ತುಂಬಿಕೊಂಡ ಬೆಳೆ ಕಾಳಿನಿಂದ ಸಾಂಬಾರ ಮಾಡಿ ಹಾಕಲಾಗುತ್ತಿದೆ. ತರಕಾರಿ ಹಾಕುತ್ತಿಲ್ಲ. ಊಟ ಸರಿಯಾಗಿಲ್ಲ ಎಂದು ಮಕ್ಕಳು ಹೇಳಿದರೆ ಮುಖ್ಯ ಅಡುಗೆರಾದ ಬಸವರಾಜ ಪೂಜಾರಿ ಹೆದರಿಸುತ್ತಿದ್ದಾರೆ ಎಂದು ಗ್ರಾಮಸ್ಥರಾದ ವಿನೋದ ಅತನುರ, ಹಸನಸಾಬ್ ಮುಲ್ಲಾ, ಹಣಮಂತ ತೋಟನಾಕ, ಲಕ್ಷ್ಮೀಪುತ್ರ ಮಾತಾರಿ ಆರೋಪಿಸಿದ್ದಾರೆ.
ಬಡದಾಳ ಗ್ರಾಮದ ಬಿಸಿಎಂ ವಸತಿ ನಿಲಯಕ್ಕೆ ಸ್ವಂತ ಕಟ್ಟಡವಿಲ್ಲ. ಈಗ ಹೊಸ ಕಟ್ಟಡ ಕಾಮಗಾರಿ ನಡೆದಿದೆ. ಕಳೆದ ಏಳೆಂಟು ವರ್ಷಗಳಿಂದ ನಮ್ಮ ಮನೆಯಲ್ಲಿ ಬಾಡಿಗೆ ನೀಡಿದ್ದೇನೆ. ನಾನು ಮಕ್ಕಳ ಮೇಲಿನ ಕಾಳಜಿಯಿಂದ ಅನೇಕ ಬಾರಿ ಊಟ ಪರಿಶೀಲಿಸುತ್ತಿರುತ್ತೇನೆ. ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಮುಖ್ಯ ಅಡುಗೆದಾರ
ಬಸವರಾಜ ಪೂಜಾರಿಗೆ ಎಚ್ಚರಿಸಿದ್ದರೂ ಪ್ರಯೋಜನವಾಗಿಲ್ಲ. 20 ವರ್ಷಗಳಿಂದ ನಾನಿಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಯಾರು
ಏನು ಮಾಡುತ್ತಾರೆ ಎಂದು ಬಸವರಾಜ ಪೂಜಾರಿ ಪ್ರಶ್ನಿಸುತ್ತಾನೆ. ವಾರದೊಳಗೆ ಬಸವರಾಜ ಪೂಜಾರಿಯನ್ನು ಇಲ್ಲಿಂದ ತೆಗೆದು
ಹಾಕಬೇಕು ಎಂದು ವಸತಿ ನಿಲಯಕ್ಕೆ ಬಾಡಿಗೆ ನೀಡಿದ ಮನೆ ಯಜಮಾನ ಭೀಮಶಾ ಸವಳಿ ಹೇಳುತ್ತಾರೆ.
ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ನಿಲಯ ಪಾಲಕ ಗಂಗಾಧರ, ನಾನು ಅನೇಕ ಬಾರಿ ಮಕ್ಕಳ ಬಾಯಿಂದ ಬಸವರಾಜ ಪೂಜಾರಿ ದುರ್ವರ್ತನೆ ಬಗ್ಗೆ ಕೇಳಿದ್ದೇನೆ. ಹೀಗಾಗಿ ಈ ಬಾರಿ ಅವನ ಉದ್ದಟತನದ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದರು.
ಗ್ರಾಮಸ್ಥರಾದ ರಾಜು ಮೇತ್ರಿ, ಚಂದ್ರಕಾಂತ ಮಾತಾರಿ, ಹಣಮಂತ ಆನೂರ ಹಾಗೂ ವಸತಿ ನಿಲಯದ ಮಕ್ಕಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.