ಜನಪ್ರಿಯಗೊಳ್ಳುತ್ತಿದೆ ಇ ಶೌಚಾಲಯ
Team Udayavani, Aug 9, 2017, 12:04 PM IST
ಕಲಬುರಗಿ: ಸಮರ್ಪಕ ನೀರು, ಪೂರ್ಣ ಪ್ರಮಾಣದ ಒಳಚರಂಡಿ ವ್ಯವಸ್ಥೆ ಕೊರತೆ ಮಧ್ಯೆ ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಸೇವೆಗಾಗಿ ತಲೆ ಎತ್ತಿದ್ದ “ಇ’ ಶೌಚಾಲಯಗಳು ಭಾರಿ ಜನಪ್ರಿಯಗೊಳ್ಳುತ್ತಿವೆ. ಅಲ್ಲದೆ, ಪಾಲಿಕೆಗೆ ಸಣ್ಣ ಪ್ರಮಾಣದ ಆದಾಯವೂ ಆಗಿರುವುದರಿಂದ ಸಾರ್ವಜನಿಕ ಹಿತಚಿಂತನೆ ಯೋಜನೆಯೊಂದು ಯಶಸ್ವಿಯಾಗಿದೆ. ಮುಂದಿನ ಹಂತವಾಗಿ ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ, ಮೇಯರ್ ಶರಣಕುಮಾರ ಮೋದಿ ಆಸಕ್ತಿಯಿಂದ ಇನ್ನಷ್ಟು ಶೌಚಾಲಯಗಳು ಇನ್ನು ಕೆಲವು ಪ್ರಮುಖ ಸ್ಥಳಗಳಲ್ಲಿ ಕಾಣಸಿಗಲಿವೆ. ಇದಕ್ಕೆ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಲಭ್ಯವಾಗಬೇಕಿದೆ. ಆದರೆ,
ನಿರೀಕ್ಷೆಯಷ್ಟು ಅನುದಾನ ಸಿಗುವುದು ಕಷ್ಟಸಾಧ್ಯ. ದೊರೆಯಬಹುದಾದ 50 ಲಕ್ಷ ಅನುದಾನದಲ್ಲಿ ಇನ್ನೂ 10 ಕಡೆಗಳಲ್ಲಿ ಈ ಶೌಚಾಲಯಗಳನ್ನು ಸ್ಥಾಪಿಸುವ ಆಲೋಚನೆ ಪಾಲಿಕೆಗೆ ಇದೆ.
ಎಚ್ಚರಿಕೆಯಿಂದ ಬಳಸಿ: ಕಲಬುರಗಿಯ ವಿವಿಧ ಸ್ಥಳಗಳಲ್ಲಿರುವ ಇ
ಶೌಚಾಲಯಗಳ ಬಳಕೆಯಲ್ಲಿ ಸಾರ್ವಜನಿಕರು ಹಿಂದೆ ಬಿದ್ದಿದ್ದಾರೆ. ಕೆಲವರು, 25 ಪೈಸೆ, 50 ಪೈಸೆ ನಾಣ್ಯಗಳಲ್ಲದೆ, ಪಿನ್, ಗುಂಡಿಹಾಗೂ ಇತರೆ ಕಬ್ಬಿಣದ ಬಿಲ್ಲೆಗಳನ್ನು ಬಳಕೆ ಮಾಡಿ ಬಾಗಿಲು ತೆಗೆಯುತ್ತಿದ್ದಾರೆ.ಇದರಿಂದ ಶೌಚಾಲಯದ ಬಾಗಿಲು ತೆರೆಯುವ
ಮತ್ತು ಬಳಸುವ ಪ್ರಯತ್ನ ಸಾಧುವಲ್ಲ ಎಂದು ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ ತಿಳಿಹೇಳಿದ್ದಾರೆ. ಸಂಪೂರ್ಣ ಗಣಕೀಕೃತವಾದ ವ್ಯವಸ್ಥೆ ಇರುವುದರಿಂದ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು ಮತ್ತು ನಿರ್ದಿಷ್ಟ ನಿಯಮಗಳಂತೆ ಬಳಸುವುದು ಅಗತ್ಯವಾಗಿದೆ.ಇಲ್ಲದಿದ್ದರೆ ಅವು ಕೆಲಸ ಮಾಡುವುದಿಲ್ಲ. ಇದನ್ನು ಬಳಕೆದಾರರು ಅರ್ಥ ಮಾಡಿಕೊಳ್ಳಬೇಕು. ಇದೆ ವೇಳೆ ಹಲವಾರು ಜನರು ಈ ಯೋಜನೆ ಮತ್ತು
ಸೌಲಭ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಸುನೀಲ ನೆನಪಿಸಿಕೊಳ್ಳುತ್ತಾರೆ.
ಇನ್ನೂ 10 ಶೌಚಾಲಯ: ಯೋಜನೆ ಕುರಿತು ಮತ್ತು ಜನರ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮೇಯರ್ ಶರಣಕುಮಾರ ಮೋದಿ ಇನ್ನಷ್ಟು ಉತ್ಸುಕರಾಗಿದ್ದಾರೆ. ನಗರದ ಹಲವು ಪ್ರದೇಶಗಳಲ್ಲಿ ಬೇಡಿಕೆಗೆ ಅನುಸಾರವಾಗಿ 50 ಲಕ್ಷ ರೂ. ಹೆಚ್‌ಕೆಡಿಬಿ ಅನುದಾನದಲ್ಲಿ 10 ಶೌಚಾಲಯ ಸ್ಥಾಪಿಸಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.
22000 ರೂ. ಸಂಗ್ರಹ: ಜೂನ್ 20ಕ್ಕೆ ಈ ಶೌಚಾಲಯಗಳನ್ನು ಸ್ಥಾಪಿಸಲಾಗಿತ್ತು. 20 ದಿನಗಳ ಬಳಿಕ 9,300 ರೂ, ಆದಾದ ಬಳಿಕ ಆ.5 ರಂದು 13000 ಸಾವಿರ ರೂ. ಬಳಕೆದಾರರಿಂದ ಸಂಗ್ರಹವಾಗಿದೆ. ಒಟ್ಟು 22,300 ರೂ. ಸಂಗ್ರಹವಾಗಿದೆ. ಇದು ಯೋಜನೆಯಿಂದ ಬಂದ ಲಾಭವಾಗಿ¨ ಸೂರ್ಯಕಾಂತ ಎಂ.ಜಮಾದಾರ ಇನ್ನಷ್ಟು ಆಧುನಿಕತೆ “ಇ’ ಶೌಚಾಲಯ ವ್ಯವಸ್ಥೆಗೆ ಜನರಿಂದ ಉತ್ತಮ ಸಹಕಾರ ದೊರೆತಿದೆ. ಬಳಕೆಯಿಂದ ಜನರು ಖುಷಿಯಾಗಿದ್ದಾರೆ. ಆದರೆ, ನಿಗದಿತ ನಾಣ್ಯದ ಬದಲು 25, 50 ಪೈಸೆ ನಾಣ್ಯಗಳನ್ನು ಹಾಕುತ್ತಿದ್ದಾರೆ. ಇದರಿಂದ ಬಳಕೆ ಮಾಡಲು ಸಮಸ್ಯೆಯಾಗುತ್ತದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಆಧುನಿಕತೆ:
ಬಳಕೆ ಮಾಡಲಾಗುವುದು. ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಬೋರವೆಲ್‌ಗೆ ನೇರವಾಗಿ ಅಳವಡಿಸಲಾಗುವುದು. ಆಟೋ ಆಫ್ ತಂತ್ರಜ್ಞಾನ ಬಳಕೆ ಮಾಡಲಾಗುವುದು. ಶೌಚಾಲಯ ಟ್ಯಾಂಕ್ ತುಂಬುತ್ತಿದ್ದಂತೆ ಬೋರ್ ಬಂದ್ ಆಗುತ್ತದೆ. ಖಾಲಿಯಾದಾಗ ಮತ್ತೆ ತಾನೇ ಆರಂಭವಾಗುತ್ತದೆ. ಇದರಿಂದ ನೀರಿನ ಸಮಸ್ಯೆಯಾಗದು. ಇನ್ನಷ್ಟು ಶೌಚಾಲಯಗಳು ಜನರ ಬಳಕೆಗೆ ಶೀಘ್ರವೇ
ಅನುದಾನ ಸಿಕ್ಕರೆ ಲಭ್ಯವಾಗಲಿವೆ.
ಪಿ.ಸುನೀಲಕುಮಾರ, ಪಾಲಿಕೆ ಆಯುಕ್ತ, ಕಲಬುರಗಿ
ಬಳಕೆ ಚೆನ್ನಾಗಿರಲಿ:
ಮಹಾನಗರ ಪಾಲಿಕೆಯ ಈ ಶೌಚಾಲಯ ಯೋಚನೆ ಚೆನ್ನಾಗಿದೆ. ಹಲವಾರು ದೊಡ್ಡ ನಗರಗಳಲ್ಲಿ ಇಂತಹ ಶೌಚಾಲಯಗಳ ಬಳಕೆ ಹೆಚ್ಚಾಗಿದೆ. ಇದು ತುಂಬಾ ಸುರಕ್ಷಿತವೂ ಹಾಗೂ ಬಳಕೆಗೆ ಸೂಕ್ತವೂ ಆಗಿದೆ. ಆರಂಭದಲ್ಲಿ ನೀರಿನ ಕೊರತೆ ಅನುಭವಿಸಿದೆವು.
ಈಗ ಅದೆಲ್ಲವೂ ಇಲ್ಲ. ಆದರೆ, ಜನರು ಚೆನ್ನಾಗಿ ಬಳಕೆ ಮಾಡಬೇಕಾಗಿದೆ. ದೂರದ ಊರುಗಳಿಂದ ನಗರಕ್ಕೆ ಬರುವವರಿಗೆ ಈ ಶೌಚಾಲಯಗಳು ತುಂಬಾ ಸಹಕಾರಿಯಾಗಿವೆ.
ರಾಜೇಂದ್ರ ರಾಜವಾಳ, ಜೇವರ್ಗಿ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.