ಸುರಿಯಿತು ಮಳೆ: ತಪ್ಪಿತು ರಣಬಿಸಿಲಿನ ರಗಳೆ
Team Udayavani, Jun 9, 2017, 4:11 PM IST
ವಾಡಿ: ಬಿಸಿಲಿನ ಧಗೆಯಿಂದ ತತ್ತರಿಸಿದ್ದ ಸಿಮೆಂಟ್ ನಗರಿ ವಾಡಿ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ನೆಲಗಳು ನೀರುಂಡು ಎಲ್ಲೆಡೆ ತಂಪಿನ ವಾತಾವರಣ ಮೂಡಿದೆ. ನಗರದ ಸುತ್ತಲೂ ಕಲ್ಲು ಗಣಿಗಳು. ನರನ ನೆತ್ತಿಯ ಮೇಲೆ ಸುಡು ಬಿಸಿಲು.
ರಣಬಿಸಿಲ ಮಧ್ಯೆ ಬೆವರು ಸುರಿಸುತ್ತಿದ್ದ ಕಾರ್ಮಿಕರು, ನೀರು ನೆರಳಿಗಾಗಿ ನರಳುವಂತಾಗಿತ್ತು. ಸದ್ಯ ಅರಂಭದಲ್ಲೇ ವರುಣ ಅಶಾದಾಯಕ ಕೃಪೆ ತೋರಿದ್ದು, ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ. ಪಟ್ಟಣ ಸೇರಿದಂತೆ ಹಳಕರ್ಟಿ, ಲಾಡ್ಲಾಪುರ, ಇಂಗಳಗಿ, ಕುಂದನೂರ, ರಾವೂರ, ಕಮರವಾಡಿ, ಸೂಲಹಳ್ಳಿ, ಆಲೂರ, ನಾಲವಾರ, ಅಳ್ಳೊಳ್ಳಿ, ಸನ್ನತಿ, ಕೊಲ್ಲೂರ ಗ್ರಾಮಗಳಲ್ಲಿ ಗುರುವಾರ ಬೆಳಗ್ಗೆಯಿಂದ ಮೋಡಗಟ್ಟಿದ ವಾತವಾರಣ ಸೃಷ್ಟಿಯಾಗಿ ಸಂಜೆ ಮಳೆಯಾಗಿದೆ.
ಕಾದು ಕೆಂಡದಂತಿದ್ದ ನೆಲ ತಣ್ಣಗಾಗಿದೆ. ಮುಂಗಾರಿಗೂ ಮುಂಚೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರ ಜಮೀನುಗಳಲ್ಲಿನ ಮೇಲ್ಲೆ ಪದರಿನ ಮಣ್ಣು ಹಸಿಯಾಗಿದೆ. ಮಳೆ ಆಗಮನದಿಂದ ಅನ್ನದಾತರ ಮನಸ್ಸು ಖುಷಿಯಾಗಿದೆ. ಪಟ್ಟಣದ ರಸ್ತೆಗಳ ಮೇಲೆ ನೀರು ಹರಿದಾಡಿದ್ದು, ಗಲ್ಲಿ ರಸ್ತೆಗಳಲ್ಲಿ ಚರಂಡಿ ನೀರಿನ ರಗಳೆ ಸೃಷ್ಟಿಯಾಗಿದೆ. ಗುರುವಾರದ ಸಂತೆ ಸಂಜೆ ಕೊನೆಗೊಳ್ಳುತ್ತಿದ್ದಂತೆ ಮಳೆ ಸುರಿದಿದ್ದರಿಂದ ವಿವಿಧ ಗ್ರಾಮಗಳಿಂದ ಬಂದವರು ಬೇಗ ಊರು ಸೇರಿಕೊಂಡರು.
ಹಗಲು ಖಡಕ್ ಬಿಸಿಲು-ಝಳ, ರಾತ್ರಿ ವಿಪರೀತ ಧಗೆ, ಬಾಯಾರಿಕೆ ಸಂಕಟ, ನೆರಳಿಗಾಗಿ ಪರದಾಟ, ಗಾಳಿಗಾಗಿ ಹುಡುಕಾಟ. ಹೀಗೆ ಬೇಸಿಗೆಯ ವಿವಿಧ ಪರಿಪಾಟಿಲುಗಳನ್ನು ಅನುಭವಿಸಿದ್ದ ಜನರು, ಶುಭಾರಂಭ ನೀಡಿರುವ ಮಳೆಯಿಂದ ವಾತಾವರಣದ ಜತೆಗೆ ಮನಸ್ಸೂ ತಂಪಾಗಿಸಿಕೊಂಡಿದ್ದಾರೆ. ಮಳೆ ಹನಿಗಳಲ್ಲಿ ನೆನೆದು ವಿದ್ಯಾರ್ಥಿಗಳು ಖುಷಿಪಟ್ಟ ಸನ್ನಿವೇಶಗಳು ಕಂಡು ಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.