ಸುರಿಯದ ಮಳೆ: ಬಾಡುತ್ತಿದೆ ಬೆಳೆ
Team Udayavani, Jul 31, 2018, 5:09 PM IST
ಶಹಾಬಾದ: ಮಳೆ ಕೊರತೆಯಿಂದಾಗಿ ಬೆಳೆ ಬಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಜೂನ್ ತಿಂಗಳ ಮೊದಲ ವಾರದಲ್ಲಿ ಬಿದ್ದ ಮೊದಲ ಮಳೆಯಿಂದ ಹರ್ಷಗೊಂಡಿದ್ದ ರೈತರು ಹೆಸರು ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿದ ನಂತರ ಸುಮಾರು ತಿಂಗಳಾಗುತ್ತ ಬಂದರೂ ಇದುವರೆಗೂ ಮಳೆಯಾಗದಿರುವುದರಿಂದ ರೈತರು ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಉತ್ತಮ ಮಳೆಯಾಗಿತ್ತು. ಅಲ್ಲದೇ ಹೆಚ್ಚಿನ
ಮಳೆಯಾಗಿದ್ದರಿಂದ ತಗ್ಗು ಪ್ರದೇಶದ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿತ್ತು.
ಈ ಬಾರಿ ಮಳೆ ಬಾರದಿರುವುದರಿಂದ ಬಾಡುವ ಹಂತ ತಲುಪಿದೆ. ಕೆಲವು ರೈತರು ಹೊಲ ಹರಗಿದ್ದಾರೆ. ಮಳೆ ಇಲ್ಲದೇ ಇರುವುದರಿಂದ ಆತಂಕಗೊಳಗಾದ ಮತ್ತೆ ನಿರಾಶೆಯಾಗಿದ್ದಾರೆ. ಹವಾಮಾನ ಇಲಾಖೆ ವರದಿಯಂತೆ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂಬ ಆಶಾಭಾವನೆಯಿಂದ ರೈತರು ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮಾಡಿದ ನಂತರ ಮೊಳಕೆ ಒಡೆದು ಬಂದ ಬೆಳೆಗೆ ಸುಮಾರು ಒಂದು ತಿಂಗಳವರೆಗೆ ಮಳೆಯಾಗಲಿಲ್ಲ. ಆದರೆ ಆಗೊಮ್ಮ ಈಗೊಮ್ಮೆ ಸುರಿದ ಮಳೆಯಿಂದ ಹೇಗೋ ಚತರಿಸಿಕೊಂಡು ಬೆಳೆದ ಬೆಳೆಗೆ ತೇವಾಂಶದ ಕೊರತೆಯಿಂದ ಬಾಡುವ ಹಂತಕ್ಕೆ ತಲುಪಿವೆ. ಎಲೆಗಳು ಉದುರಿ ಹೋಗಿವೆ.
ಹೆಸರು, ಉದ್ದು, ಎಳ್ಳು, ಸಜ್ಜೆ ಮಳೆಯಿಲ್ಲದೇ ಒಣಗಿ ಹೋಗಿರುವುದರಿಂದ ರೈತರು ಬೆಳೆ ಹರಗುತ್ತಿದ್ದಾರೆ. ಅಲ್ಪ
ಮಳೆಯಾದ ಕೆಲವು ಪ್ರದೇಶಗಳಲ್ಲಿ ಕಾಯಿಯಾಗಿವೆ. ಆದರೆ ತೇವಾಂಶದ ಕೊರತೆಯಿಂದ ಕಾಯಿ ಕಟ್ಟಿಲ್ಲ. ಹತ್ತಿ ಬೆಳೆ ಮಾತ್ರ ಎರಡು ಗೇಣಿನಷ್ಟು ಬೆಳೆದು ನಿಂತಿದೆ. ಈಗ ಮಳೆಯಾದರೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನೂ ತೊಗರಿ ಬಿತ್ತನೆ ಮಾಡಿ, ಇಪ್ಪತ್ತು ದಿನಗಳಾದರೂ ಮಳೆಯಾಗದಿರುವುದರಿಂದ ರೈತರು ಕಣ್ಣೀರು ಸುರಿಸುವಂತಾಗಿದೆ.ಅಲ್ಲದೇ ರೈತರು ಮುಂದೆ ಒಳ್ಳೆಯ ಮಳೆ ಬರುವ ಆಶಾಭಾವನೆಯಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ವರ್ಷ ಮಳೆಯೂ ಇಲ್ಲ. ಕಳೆಯೂ ಇಲ್ಲ. ಇದರಿಂದ ದನಗಳಿಗೆ ಮೇವಿಲ್ಲದಿದ್ದರೆ ಮಾರಾಟ ಮಾಡಲು ಕೃಷಿಕರು ಮುಂದಾಗುತ್ತಾರೆ. ಇಷ್ಟೆಲ್ಲ ಕಷ್ಟಗಳು ಇದ್ದರೂ ರೈತರು ಆಶಾಭಾವನೆಯಿಂದ ಮಳೆರಾಯನನ್ನು ಎದುರು ನೋಡುತ್ತಿದ್ದಾರೆ.
ಹೋಬಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ಮಳೆಯಿಲ್ಲದೇ ಬೆಳೆ ಒಣಗಿ ಹೋಗಿದೆ. ಆದರೂ ಆಶಾಭಾವನೆಯಿಂದ ರೈತರು ಮಳೆರಾಯನಿಗಾಗಿ ಕಾದು ಕುಳಿತ್ತಿದ್ದಾರೆ ಎಂದು ನಾಗಣ್ಣ ರಾಂಪೂರೆ ತಿಳಿಸಿದ್ದಾರೆ. ಬೆಳೆಗೆ ತಕ್ಕಷ್ಟು ಮಳೆ ಬಂದಿದ್ದರೆ, ಬೆಳೆ ಉತ್ತಮವಾಗಿರುತ್ತಿತ್ತು. ಅಲ್ಲದೇ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಪಡೆಯಬಹುದಾಗಿತ್ತು. ಆದರೆ ಮಳೆಯಾಗದ ಕಾರಣ ಅರಳುವ ಮುಂಚೆಯೇ ಹೆಸರು ಬೆಳೆಗಳ ಎಲೆಗಳು ಉದುರಿ ಹೋಗಿವೆ. ಸಾಲ ಮಾಡಿದ ರೈತ ಮತ್ತೆ ಸಂಕಷ್ಟಕ್ಕೆ ಒಳಗಾಗಗಿದ್ದಾರೆ ಎಂದು ಮೋನಪ್ಪ ತೆಲಗಬಾಳ ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.