ವೃದ್ಧರ ಸೇವೆಯಿಂದ ಮನಸ್ಸು ಪ್ರಸನ್ನ
Team Udayavani, Mar 21, 2017, 4:55 PM IST
ಜೇವರ್ಗಿ: ವೃದ್ಧರ ಸೇವೆ ಮಾಡುವುದರಿಂದ ಮನಸ್ಸು ಪ್ರಸನ್ನತೆ ಕಡೆಗೆ ಹೋಗುವುದಲ್ಲದೆ ಆಯುಷ್ಯ ವೃದ್ಧಿ, ವಿದ್ಯೆ ಪ್ರಾಪ್ತಿಯಾಗುತ್ತದೆ ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಭಗವತ್ಪಾದರು ನುಡಿದರು. ತಾಲೂಕಿನ ಶಖಾಪುರ ತಪೋವನ ಮಠದಲ್ಲಿ ಸಿದ್ದರಾಮ ಶಿವಾಚಾರ್ಯರ ಜನ್ಮ ಸುವರ್ಣ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ವೃದ್ಧರಿಗೆ ಮಾಡಿದ ಸೇವೆ ದೇವರಿಗೆ ಮಾಡುವ ಸೇವೆಗೆ ಸಮಾನವಾಗಿರುತ್ತದೆ. ತಂದೆ ತಾಯಿಗಳನ್ನು ದೇವರು ಎನ್ನುವ ಮನೋಭಾವ ಹೆಚ್ಚಾಗಬೇಕು. ವೃದ್ಧರಿಗೆ ಸಹಾಯ ಮಾಡುವುದರಿಂದ ಆಯುಷ್ಯ ವೃದ್ಧಿ, ಸಂತೋಷ ಪ್ರಾಪ್ತಿ, ನೆಮ್ಮದಿ ಲಭಿಸುತ್ತದೆ ಎಂದು ಹೇಳಿದರು. ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವ ದೇಶದ ಜನರು ವೃದ್ಧರ ಸೇವೆಗೆ ಅಣಿಯಾಗ ಬೇಕಾಗುತ್ತದೆ.
ವಿದ್ಯೆ, ಬುದ್ಧಿಯನ್ನು ಪಡೆಯಬೇಕಾದರೆ ವೃದ್ಧರ ಸೇವೆ ಮಾಡಬೇಕಾಗುತ್ತದೆ ಎಂದು ಹೇಳಿದರು ಶಖಾಪುರ ತಪೋವನಮಠದ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರೈತ ಮುಖಂಡ ವೆಂಕೋಬರಾವ ವಾಗಣಗೇರಿ, ಬಸವರಾಜ ಸಾಸಾಬಾಳ, ಮಹಾದೇವಪ್ಪ ನೀರಲಕೋಡ, ಭೀಮರಾಯ ನೀರಲಕೋಡ, ಬಸಯ್ಯ ಸ್ವಾಮಿ ಕಮರಿಮಠ, ಚನ್ನಬಸಯ್ಯ ಸ್ಥಾವರಮಠ, ರಾಜೇಂದ್ರ ಕರಗಲ್, ಜಗದೀಶ ಕುಮಾರ ಒಳಕೇರಿ,
ಮಲ್ಲಪ್ಪ ಆರ್. ಜೀರಳಿ, ಸುಭಾಶ್ಚಂದ್ರ ಕಪಾಳೆ, ನಾಗೇಂದ್ರಪ್ಪ ಗಚ್ಚಿನಮನಿ, ವೀರೇಶ ಕಂದಗಲ, ಬಸವರಾಜ ಕಟ್ಟಿ ಹಂಗಿನಹಳ್ಳಿ, ಶ್ರೀಶೈಲ ಹಾಗರಗಾ, ವಿಶ್ವನಾಥ ಮೈನಾಳ, ಶರಣಪ್ಪ ಸಿಪಾಯಿ, ಮಲ್ಲು ಇಡ್ಲಿ, ಬಸವರಾಜ ಕಟ್ಟಿ ಕಲಬುರಗಿ, ಅಶೋಕ ಮರತೂರ, ಮಹಾದೇವಪ್ಪ ಯಕ್ಷಿಂತಿ, ಸುಭಾಷ ಪಾಟೀಲ ಇಟಗಾ, ಅಲ್ಲಾವುದ್ದೀನ, ಶರಣಯ್ಯ ಸ್ವಾಮಿ ಬಂಟನಳ್ಳಿ ಇದ್ದರು.
ಹರಿದು ಬರುತ್ತಿರುವ ಭಕ್ತ ಸಾಗರ: ಮಾ.15ರಿಂದ ಕಾಶೀ ಜಗದ್ಗುರು ಡಾ| ಚಂದ್ರಶೇಖರ ಭಗವತ್ಪಾದರು ನೀಡುತ್ತಿರುವ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಕಲಬುರಗಿ ಜಿಲ್ಲೆ ಸೇರಿದಂತೆ ಸಿಂದಗಿ, ಶಹಾಪುರ, ಸುರಪುರ, ಯಾದಗಿರಿ, ವಿಜಯಪುರ, ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸಹಸ್ರಾರು ಜನ ಭಾಗವಹಿಸುತ್ತಿದ್ದಾರೆ. ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠದಲ್ಲಿ ಪ್ರಸಾದ, ಕುಡಿಯುವ ನೀರಿನ ಸೌಲಭ್ಯ ಹಾಗೂ ವಸತಿ ಸೌಕರ್ಯ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.