ಸಾರ್ವಜನಿಕ ಸಮಸ್ಯೆಗೆ ಆದ್ಯತೆ ಕೊಡಿ
Team Udayavani, Jun 30, 2017, 4:40 PM IST
ಕಲಬುರಗಿ: ನಮ್ಮ ಸುತ್ತಲಿನ ಪರಿಸರದಲ್ಲಿರುವ ಸಾರ್ವಜನಿಕ ಹಾಗೂ ಸಾರ್ವತ್ರಿಕ ಸಮಸ್ಯೆಗಳ ಕಡೆಗೆ ಹೆಚ್ಚು ಗಮನ ಕೊಟ್ಟು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್ ಹೇಳಿದರು.
ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆವಿಷ್ಕಾರ ಸ್ಥಳ ಮತ್ತು ಬ್ರಹ್ಮಾಂಡದ ಅರಿವು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಸಮಸ್ಯೆಯನ್ನು ತಿಳಿದುಕೊಂಡ ಬಳಿಕ ಅದಕ್ಕೆ ಸ್ಪಷ್ಟವಾದ ಗುರಿಯಿಂದ ಕೆಲಸ ಮಾಡಿದರೆ ಅತ್ಯದ್ಭುತ ಸಾಧನೆ ಮಾಡಲು ಸಾಧ್ಯ.
ಸಾಧನೆ ಮಾಡಬೇಕಾದರೆ ವಿದ್ಯಾರ್ಥಿ ಸಮುದಾಯ ಎಲ್ಲ ವೈಜ್ಞಾನಿಕ ಚಟುವಟಿಕೆ ತಿಳಿಯಲು ಹಂಬಲ ಹೊಂದಬೇಕು ಎಂದು ಹೇಳಿದರು. ವೈಜ್ಞಾನಿಕ ಪರಿಹಾರವನ್ನು ಸರಳವಾಗಿ ಕಂಡುಕೊಳ್ಳಲು ಹೆಚ್ಚಿನ ಒತ್ತು ನೀಡಬೇಕು. ಸಾರ್ವತ್ರಿಕವಾಗಿರುವ ನಿಗದಿತ ಸಮಸ್ಯೆ ಹಾಗೂ ಪರಿಹಾರಕ್ಕೆ ಪ್ರಥಮಾದ್ಯತೆ ನೀಡಿ ಉಜ್ವಲ ಭಾರತ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ವಿದ್ಯಾರ್ಥಿ ಸಮುದಾಯ ವೈಜ್ಞಾನಿಕ ಚಿಂತನೆ, ಆಸಕ್ತಿ ಹಾಗೂ ಉತ್ಸಾಹ ಹೊಂದಿರಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಈ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಕರೆದುಕೊಂಡು ಬಂದು ಸೂಕ್ತ ವೈಜ್ಞಾನಿಕ ಮಾರ್ಗದರ್ಶನ ನೀಡಬೇಕು.
ಈ ಕುರಿತು ಆದೇಶವನ್ನೇ ಹೊರಡಿಸಲಾಗುವುದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಡಾ| ಎ. ವೆಂಕಟರಮಣ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಕ್ಕಿಂತ ಜ್ಞಾನ ಗಳಿಕೆ ಅತಿ ಮುಖ್ಯ.
ಸಾಮಾಜಿಕ ಬೇಡಿಕೆಗನುಗುವಾಗಿ ವಿದ್ಯಾರ್ಥಿಗಳು ವೈಜ್ಞಾನಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಹೇಳಿದರು. ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದ ನಿರ್ದೇಶಕ ಕೆ.ಜಿ. ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಈಗ ರಾಷ್ಟ್ರದಲ್ಲಿ 27 ವಿಜ್ಞಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರವು ಇಡೀ ರಾಷ್ಟ್ರದಲ್ಲೇ ಪ್ರಾರಂಭವಾದ 2ನೇ ಕೇಂದ್ರವಾಗಿದೆ ಹಾಗೂ 1984ರಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿದೆ. ಕಲಬುರಗಿಯಲ್ಲಿ ಪ್ರಾರಂಭಿಸಲಾದ ರಾಷ್ಟ್ರದ ಇನ್ನೋವೇಶನ್ ಹಬ್ 18ನೇ ಹಾಗೂ ಕರ್ನಾಟಕದ 2ನೆಯದಾಗಿದೆ.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್. ಲಕ್ಷಿನಾರಾಯಣ ಸ್ವಾಗತಿಸಿದರು. ಶಿಕ್ಷಣಾಧಿಕಾರಿ ಆರ್. ವೆಂಕಟೇಶ್ವರಲು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.