ಎಸ್ಐ ದೈಹಿಕ ಪರೀಕ್ಷೆಯಲ್ಲಿ ಗರ್ಭಿಣಿ ಪಾಸ್!
Team Udayavani, Aug 14, 2021, 6:49 AM IST
ಸಾಂದರ್ಭಿಕ ಚಿತ್ರ
ಕಲಬುರಗಿ: ಎಸ್ಐ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಎರಡೂವರೆ ತಿಂಗಳ ಗರ್ಭಿಣಿಯೊಬ್ಬರು ಪಾಲ್ಗೊಂಡು 400 ಮೀಟರ್ ಓಟ ಸಹಿತ ಎಲ್ಲ ಪರೀಕ್ಷೆಯಲ್ಲೂ ಉತ್ತೀರ್ಣಗೊಂಡು ಗಮನ ಸೆಳೆದಿದ್ದಾರೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಲಖನಗಾಂವ ಗ್ರಾಮದ ನಿವಾಸಿಯಾಗಿರುವ 24 ವರ್ಷದ ಅಶ್ವಿನಿ ಕೋರೆ ಅವರು ಈ ಸಾಧನೆ ಮಾಡಿದವರು. ಅವರು ಆ. 10ರಂದು ನಗರದ ಪೊಲೀಸ್ ಮೈದಾನದಲ್ಲಿ ನಡೆದಿದ್ದ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ನೇಮಕಾತಿ ನಿಯಮಗಳ ಪ್ರಕಾರ ಎತ್ತರ ಮತ್ತು ತೂಕ ಪರೀಕ್ಷೆ ಜತೆಗೆ ಉದ್ದ ಜಿಗಿತ, ಗುಂಡು ಎಸೆತ, ಓಟದಲ್ಲೂ ಭಾಗವಹಿಸಿದ್ದರು.
ಎರಡು ನಿಮಿಷಗಳಲ್ಲಿ ಮುಗಿಸಬೇಕಿದ್ದ 400 ಮೀಟರ್ ಓಟವನ್ನು 1.36 ನಿಮಿಷದಲ್ಲಿ ಪೂರೈಸಿದ್ದಾರೆ. ಬಿ.ಇ. ಪದವೀಧರೆ ಆಗಿರುವ ಅವರು ಈ ಹಿಂದೆಯೂ ಎರಡು ಬಾರಿ ಎಸ್ಐ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡು ತೇರ್ಗಡೆ ಆಗಿದ್ದರು. ಆದರೆ, ಲಿಖಿತ ಪರೀಕ್ಷೆಯಲ್ಲಿ ಸೋತಿದ್ದರು. ದೈಹಿಕ ಪರೀಕ್ಷೆಯಲ್ಲಿ ಗರ್ಭಿಣಿ ಪಾಲ್ಗೊಂಡಿದ್ದ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಕೆಲವು ಅಭ್ಯರ್ಥಿಗಳು ಇಂತಹ ವಿಷಯವನ್ನು ಮುಚ್ಚಿಡುತ್ತಾರೆ ಎಂದು ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬಿಕರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.