ರಸ್ತೆ ಬದಿ ಸಸಿ ನೆಡಲು ಸಿದ್ಧತೆ
Team Udayavani, Jun 19, 2018, 1:02 PM IST
ಭೀಮರಾಯ ಕುಡ್ಡಳ್ಳಿ ಕಾಳಗಿ
ಕಾಳಗಿ: ಗ್ರಾಮೀಣ ಭಾಗದ ರಸ್ತೆಗಳ ಎರಡು ಬದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ನೆಡಲಾಗುತ್ತಿದೆ.
ಗ್ರಾಮೀಣ ಭಾಗಕ್ಕೆ ಸಂಚರಿಸುವ ರಸ್ತೆಗಳಾದ ಕಾಳಗಿ-ಸೂಗುರ (ಕೆ) ಎಸ್ ಎಸ್‌ಪಿ ಯೋಜನೆ ಅಡಿ 3 ಕಿ.ಮೀ ರಸ್ತೆ, ಕಲಗುರ್ತಿ-ಅಶೋಕ ನಗರ 4ಕಿ.ಮೀ ರಸ್ತೆ, ಮಂಗಲಗಿ-ಕೊಡದೂರ ಆರ್ ಎಸ್‌ಪಿ ಯೋಜನೆ ಅಡಿಯಲ್ಲಿ 3.5 ಕಿ.ಮೀ ರಸ್ತೆ, ಕಾಳಗಿ-ಕೊಡದೂರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 3.5 ಕೀ.ಮಿ ರಸ್ತೆ, ಕೋರವಾರ-ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನದವರೆಗೆ ಎಸ್‌ಎಸ್‌ಪಿ ಯೋಜನೆಯಲ್ಲಿ 3 ಕಿ.ಮೀ ರಸ್ತೆ, ಟೆಂಗಳಿ-ಕಲಗುರ್ತಿ- ಅಶೋಕ ನಗರದ ವರೆಗೆ ಎಸ್‌ಎಸ್‌ಪಿ ಯೋಜನೆಯಲ್ಲಿ 6 ಕಿ.ಮೀ ರಸ್ತೆ, ಹೊಸ್ಸಳ್ಳಿ-ರಾಜಾಪುರ 3 ಕಿ.ಮೀ ರಸ್ತೆ, ಗುಂಡಗುರ್ತಿ-ಬಾಗೋಡಿ 3 ಕಿ.ಮೀ ರಸ್ತೆ ಸೇರಿದಂತೆ ಹಲವಾರು ರಸ್ತೆಗಳನ್ನು ಸೇರಿಸಿ ದಿನಗೂಲಿ ನೌಕರರೊಂದಿಗೆ 3 ತಿಂಗಳಲ್ಲಿ 8,500 ಸಸಿಗಳನ್ನು ಪ್ರಸಕ್ತ ಸಾಲಿನಲ್ಲಿ ನೆಡಲು ಸಾಮಾಜಿಕ ಅರಣ್ಯ ಇಲಾಖೆ ಮುಂದಾಗಿದೆ.
ಸುಮಾರು 3 ತಿಂಗಳ ಹಿಂದೆಯೇ 1 ಮೀಟರ್ ಗುಂಡಿ ಅಗೆದು ಬಿಟ್ಟಿದ್ದರಿಂದ ಬಿಸಿಲು, ಗಾಳಿ, ಮಳೆಗೆ ಫಲವತ್ತಾದ ಮಣ್ಣಾಗಿ ಮಾರ್ಪಟ್ಟಿದೆ. ಈಗ ಮುಂಗಾರು ಮಳೆ ಸುರಿಯಲಾರಂಭಿಸಿದ್ದು ಈ ಸಂದರ್ಭದಲ್ಲಿ ಸಸಿಗಳಾದ ಬೇವು, ಹುಣಸೆ, ನೇರಳೆ, ಅರಳಿ, ಹೊಂಗೆ, ಬಸರಿ, ತಪ್ಸಿ ಸೇರಿದಂತೆ ವಿವಿಧ ರೀತಿಯ ಗಿಡಗಳನ್ನು ನೆಡಲಾಗುತ್ತಿದೆ.
ವನ್ಯ ಜೀವಿಗಳಾದ ಮಂಗಗಳು ರೈತನ ಜಮೀನುಗಳಲ್ಲಿ ಸಂಚರಿಸಿ ಬೆಳೆಗಳನ್ನು ಹಾಳು ಮಾಡುವುದನ್ನು ಬಿಟ್ಟು ಈ
ಗಿಡಗಳಲ್ಲಿ ನೆಲೆಸುತ್ತವೆ. ಕೂಲಿಕಾರರು ಬೇವಿನ ಗಿಡದಿಂದ ಉದುರುವ ಬೇವಿನ ಬೀಜ ಸಂಗ್ರಹಿಸಿ ಲಾಭ ಗಳಿಸುತ್ತಾರೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನ ತಿಳಿಸಿದ್ದಾರೆ. ರಸ್ತೆಯ ಎರಡು ಬದಿಯಲ್ಲಿ ನೆಡುವ ಸಸಿಗಳ ಸಂರಕ್ಷಣೆ ಮಾಡಲು ಸುಮಾರು ಮೂರು ತಿಂಗಳ ವರೆಗೆ ನಡುತೋಪು ಕಾವಲುಗಾರರನ್ನು ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಳ್ಳಿನ ಕವಚ: ಗಿಡ, ಮರಗಳನ್ನು ನೆಡುವುದರ ಜೊತೆಗೆ ಅದಕ್ಕೆ 8ರಿಂದ 10 ಪೂಟ್ ಎತ್ತರದ (ತೆಕ್ಸ್) ನೀಲಗಿರಿ ಎಳೆಗಳ ಸಹಾಯದಿಂದ ಸುತ್ತಲು ಮುಳ್ಳಿನ ಕವಚ ನಿರ್ಮಿಸಿ ದನ-ಕರ, ಕುರಿಗಳ ದಾಳಿಗೆ ತುತ್ತಾಗದಂತೆ ಕಾಪಾಡಲಾಗುತ್ತಿದೆ.
ನೆಟ್ಟಿರುವ ಸಸಿಗಳಿಗೆ ನೀರುಣಿಸುವುದರ ಜತೆಗೆ ಹಾಳಾಗದಂತೆ ಕಾಪಾಡಿ ಹೆಮ್ಮರವಾಗಿ ಬೆಳೆಸುತ್ತಿದ್ದೇವೆ.
ರೈತರು ಹೊಲದಲ್ಲಿರುವ ಸಸಿಗಳನ್ನು ಹಾಳಾಗದಂತೆ ನೋಡಿಕೊಳ್ಳಬೇಕು.
ರಾಜು ಜಾಧವ, ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ
ಸಸಿಗಳು ಹೆಮ್ಮರವಾಗಿ ಬೆಳೆದ ನಂತರ ರಸ್ತೆಯ ಬದಿಯ ಜಮೀನುದಾರನೇ ಅದರ ಮಾಲೀಕನಾಗುತ್ತಾನೆ. ರೈತರು ಇವುಗಳನ್ನು ಕಡಿಯದೆ ರಕ್ಷಿಸಿ ಸ್ವಚ್ಛಂದ ವಾತಾವರಣ ನಿರ್ಮಿಸಲು ಕೈಜೋಡಿಸಬೇಕು.
ಸಂಜುಕುಮಾರ ಚವ್ಹಾಣ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.