ಶಂಕರಗೌಡಗೆ ರಾಷ್ಟ್ರಪತಿ ಪದಕ
Team Udayavani, Aug 15, 2021, 1:35 PM IST
ಕಲಬುರಗಿ: ಕಲಬುರಗಿ ಗ್ರಾಮಾಂತರ ವೃತ್ತದ ಸಿಪಿಐ ಶಂಕರಗೌಡ ಪಾಟೀಲ ರಾಷ್ಟ್ರಪತಿಪದಕಕ್ಕೆ ಭಾಜನರಾಗಿದ್ದಾರೆ. ಹಲವಾರು ಪ್ರಕರಣಗಳನ್ನು ಭೇದಿಸಿ, ಅಪರಾಧಿಗಳಿಗೆಶಿಕ್ಷೆಯಾಗುವ ನಿಟ್ಟಿನಲ್ಲಿ ಶ್ರಿಸಿದ ಶಂಕರಗೌಡಅವರು ಯಾವುದೇ ಕಪ್ಪುಚುಕ್ಕೆ ಇಲ್ಲದೇಸೇವೆ ಸಲ್ಲಿಸುತ್ತಿದ್ದಾರೆ.
ಕಾನೂನು ಸುವ್ಯವಸ್ಥೆಪಾಲನೆಯಲ್ಲೂ ಸೈ ಎನಿಸಿದ್ದಾರೆ. ಇದುವರೆಗೆಅತ್ಯಾಚಾರ, ಕೊಲೆ, ದರೋಡೆ ಸೇರಿ 38ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ.2019ರಲ್ಲಿ ದೇಶದ ಗಮನ ಸೆಳೆದಿದ್ದಸುಲೇಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನಡೆದಿದ್ದ ಯಾಕಾಪುರ ಬಾಲಕಿ ಅತ್ಯಾಚಾರ ಮತ್ತುಕೊಲೆ ಪ್ರಕರಣವನ್ನು ಇವರು ಸಮರ್ಥವಾಗಿತನಿಖೆ ಮಾಡಿ ಅತಿ ಕಡಿಮೆ ದಿನಗಳಲ್ಲೇ ಚಾರ್ಜ್‌ಶೀಟ್ ದಾಖಲಿಸಿದ್ದರು. ನ್ಯಾಯಾಲಯತೀರ್ಪು ಸೇರಿ ಕೇವಲ 102 ದಿನಗಳಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತಾಗಿತ್ತು.
ಅಲ್ಲದೇ ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ದೊರಕಿಸಿ ಕೊಡುವಲ್ಲಿಯೂಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿಸ್ನಾತಕೋತ್ತರ ಪದವಿ ಪಡೆದ ಇವರು 2001ರಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದರು.
ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪೂರೈಸಿದ ನಂತರ ಕಲಬುರಗಿಯಲ್ಲಿ ಪ್ರೊಬೇಷನರಿ ಪಿಎಸ್ ಆಗಿ, ಸುಲೇಪೇಟ, ಸೇಡಂನಲ್ಲಿ ಪಿಎಸ್‌ಐ ಆಗಿಸೇವೆ ಸಲ್ಲಿಸಿದ ಇವರು, ಚಿತ್ತಾಪುರ, ವಾಡಿ ಹಾಗೂ ಗ್ರಾಮಾಂತರ ವೃತ್ತದ ಸಿಪಿಐ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು, ಬೆಳಗಾವಿ, ಯಾದಗಿರಿ ಜಿಲ್ಲೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ.ಮೂಲತಃ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿಯವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.