ಗ್ರಾಮೀಣ ಠಾಣೆ ಪ್ರಗತಿಗೆ ಆದ್ಯತೆ: ಪಂತ್
Team Udayavani, Mar 11, 2022, 12:52 PM IST
ವಾಡಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಹಂತ-ಹಂತವಾಗಿ ಗ್ರಾಮೀಣ ಪೊಲೀಸ್ ಠಾಣೆಗಳ ಪ್ರಗತಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿದ ಅವರು, ಕಟ್ಟಡದ ಸೌಂದರ್ಯೀಕರಣ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಠಾಣೆ ಆವರಣದಲ್ಲಿ ನಿರ್ಮಿಸಲಾದ ಪೇದೆ ಮಕ್ಕಳ ಶೆಟಲ್ ಕಾಕ್ ಕ್ರೀಡಾಂಗಣ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವಾಡಿ ಠಾಣೆ ನವೀಕರಣ ಹೊಂದಲು ಪಿಎಸ್‌ಐ ಮಹಾಂತೇಶ ಕಾರಣರಾಗಿದ್ದಾರೆ. ಈ ಕಾರ್ಯ ಜಿಲ್ಲೆಯ ಇತರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಮಾದರಿಯಾಗಲಿದೆ. ಗ್ರಾಮೀಣ ಠಾಣೆಗಳನ್ನು ಜನಾಕರ್ಷಣೀಯ ಮಾಡಲು ಶ್ರಮಿಸೋಣ ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಪೊಲೀಸ್ ವಸತಿ ಗೃಹಗಳ ದುಸ್ಥಿತಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಠಾಣೆಗಳ ಕಟ್ಟಡದ ಜತೆಗೆ ನಮ್ಮ ಸಿಬ್ಬಂದಿ ಗೃಹಗಳು ದುರಸ್ತಿ ಕಾಣಬೇಕಿದೆ. ವಾಡಿ ಪೊಲೀಸ್ ವಸತಿ ಗೃಹಗಳಲ್ಲಿನ ಸಮಸ್ಯೆಗಳು ಗಮನಕ್ಕೆ ಬಂದಿವೆ. ಇವುಗಳ ಜೀರ್ಣೋದ್ಧಾರಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಅಪ್ರೂವಲ್‌ಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.
ವಾಡಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಎರಡು ಕೊಲೆ ಪ್ರಕರಣಗಳು ನಡೆದಿವೆ. ಮೊದಲ ಪ್ರಕರಣದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಎರಡನೇ ಕೊಲೆ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಅವರನ್ನು ಬಂಧಿಸುತ್ತೇವೆ. ಮಟಕಾ, ಗಾಂಜಾ, ಜೂಜಾಟ ಸೇರಿದಂತೆ ಯಾವುದೇ ಅಪರಾಧ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಕಳೆದ ಎರಡು ತಿಂಗಳಲ್ಲಿ ಮಟಕಾ-ಜೂಜಾಟಕ್ಕೆ ಸಂಬಂಧಿಸಿದಂತೆ ಐದಾರು ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.
ಇದೇ ವೇಳೆ ಠಾಣೆ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದ ಎಸ್‌ಪಿ ಇಶಾ ಪಂತ್, ಪೊಲೀಸ್ ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಹಿರಿಯ, ಕಿರಿಯ ಪೊಲೀಸ್ ಸಿಬ್ಬಂದಿಗಳಿಗೆ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದರು. ನಂತರ ಎರಡು ತಾಸು ಠಾಣೆಯಲ್ಲಿ ಕುಳಿತು ಕಡತಗಳನ್ನು ಪರಿಶೀಲಿಸಿದರು. ಶಹಾಬಾದ ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಮಹಾಂತೇಶ ಪಾಟೀಲ, ಕ್ರೈಂ ಪಿಎಸ್‌ಐ ಶಿವುಕಾಂತ ಕಮಲಾಪುರ, ಎಎಸ್‌ಐ ಅಶೋಕ ಕಟ್ಟಿ, ಚನ್ನಮಲ್ಲಪ್ಪ ಪಾಟೀಲ, ಶರಣಪ್ಪ ಜಾಂಜಿ, ಲಕ್ಷ್ಮಣ ಜಾನೆ ಇದ್ದರು.
ಆಳಂದ ಘಟನೆಗೆ ಸಂಬಂದಿಸಿದಂತೆ ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡಿ ಶಾಂತಿ ನೆಲೆಸಲು ಸಕಲ ಕ್ರಮ ಕೈಗೊಂಡಿದ್ದೇನೆ. ಆದಾಗ್ಯೂ ನನ್ನ ವಿರುದ್ಧ ಟೀಕೆ, ಆರೋಪಗಳು ಕೇಳಿಬಂದರೆ ಪ್ರಜಾತಾಂತ್ರಿಕ ನೆಲೆಗಟ್ಟಿನಲ್ಲಿ ಅವುಗಳನ್ನು ಸ್ವೀಕರಿಸುತ್ತೇನೆ. ಆಳಂದ ಘಟನೆಗೆ ಸಂಬಂದಿಸಿದಂತೆ ಇದುವರೆಗೂ ನನಗೆ ಯಾರಿಂದಲೂ ಯಾವುದೇ ನೋಟಿಸ್ ಬಂದಿಲ್ಲ. -ಇಶಾ ಪಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.