ಪ್ರಿಯಾಂಕ್ ಬಚ್ಚಾ ಅಲ್ಲ ಲುಚ್ಚಾ: ಗುತ್ತೇದಾರ್
Team Udayavani, Apr 15, 2018, 11:12 AM IST
ಚಿತ್ತಾಪುರ: ಬಿಜೆಪಿ ಅಭ್ಯರ್ಥಿ ಪರ ಮೇ 12ರಂದು ಮತ ಹಾಕುವುದರ ಮೂಲಕ ಮೇ 15 ರಂದು ನಡೆಯುವ ಮತ ಎಣಿಕೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಠೇವಣಿ ಜಪ್ತಿಯಾಗುವಂತೆ ಮಾಡಬೇಕು ಎಂದು ಶಾಸಕ ಮಾಲಿಕಯ್ನಾ ಗುತ್ತೇದಾರ್ ಕರೆ ನೀಡಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಚಿತ್ತಾಪುರ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಮಾಲೀಕಯ್ನಾ ಗುತ್ತೇದಾರ್ ಅವರಿಗೆ ಸನ್ಮಾನ, ಬಿಜೆಪಿ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದರು. ಪ್ರಿಯಾಂಕ್ ಖರ್ಗೆ ಅವರಿಗೆ ಬಚ್ಚಾ ಅಂದ್ರೆ ಸಿಟ್ಟು ಬರುತ್ತಿದೆ. ಹಾಗಾದರೆ ಅವರಿಗೆ ಲುಚ್ಚಾ ಅನ್ನಬೇಕಾ. ಅವರು ನನ್ನ ಎದುರು ಬಚ್ಚಾನೇ. ಆದ್ದರಿಂದ ಅವರಿಗೆ ಬಚ್ಚಾ ಅಂದಿದ್ದೇನೆ. ಆದರೆ ಅವರಿಗೆ ಬಚ್ಚಾ ಅನ್ನಬಾರದಂತೆ ಅದಕ್ಕೆ ಲುಚ್ಚಾ ಅನ್ನುತ್ತೇನೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ನನ್ನ ತಂದೆ ಹತ್ತಿರ ಬಂದು ನನಗೆ ಸಚಿವ ಸ್ಥಾನ ಕೊಡಿಸಿ ಎಂದು ಕೇಳಿಕೊಂಡವರು. ಆದರೆ ನಾನು ಯಾರ ಹತ್ತಿರವೂ ಸಚಿವ ಸ್ಥಾನ ಕೊಡಿಸಿ ಎಂದು ಕೇಳಿದವನಲ್ಲ. ಬೇಕಾದರೆ ಇದನ್ನು ಸುಳ್ಳು ಎಂದು ಹೇಳಲಿ. ಅವರು ನಂಬಿರುವ ಬುದ್ಧನ ಮಂದಿರಲ್ಲಿ ಆಣೆ ಮಾಡಲಿ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುದ್ಧನ ಮಂದಿರ ಕಟ್ಟಿಸಲು 900 ಕೋಟಿ ರೂ. ದೇಣಿಗೆ ಬಂದಿದೆ.
ಆದರೆ ಅದರಲ್ಲಿ ಖರ್ಚಾಗಿದ್ದು ಮಾತ್ರ 35 ಕೋಟಿ ರೂ. ಅಷ್ಟೇ. ಇದಕ್ಕೆ ಯಾವುದೇ ಸಮಿತಿ ಇಲ್ಲದೇ ಕೇವಲ ಅವರ ಕುಟುಂಬದವರನ್ನೆ ಸೇರಿಸಿಕೊಂಡು ಟ್ರಸ್ಟ್ ಮಾಡಿಕೊಂಡಿದ್ದಾರೆ. ಹೊರಗಿನವರನ್ನು ಸೇರಿಸಿಕೊಂಡು ಸಮಿತಿ ಮಾಡಿದರೆ ಎಲ್ಲಿ ನಮ್ಮ ಬಂಡವಾಳ ಹೊರಗೆ ಬೀಳುತ್ತದೆಯೋ ಎನ್ನುವ ಭಯ ಖರ್ಗೆ ಅವರಿಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ 2002ರಲ್ಲಿ ಸೇರಿ 2018ರ ತನಕ ವನವಾಸ ಅನುಭವಿಸಿದ್ದೇನೆ. ಸೀತಾ 14 ವರ್ಷ ಮಾತ್ರ ವನವಾಸ ಅನುಭವಿಸಿದ್ದಳು. ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಯಾಕಾರೇ ಸೇರಿನಿ ಅಂತಾ ಕೊರಗಿ ಕೊರಗಿ 16 ವರ್ಷಗಳ ಕಾಲ ಯಾವುದೇ ಹುದ್ದೆಗಳನ್ನು ಪಡೆಯದೇ ವನವಾಸ ಅನುಭವಿಸಿದ್ದು ಯಾರ ಮುಂದೆ ಹೇಳಲಿ ಎಂದು ಶಾಸಕ ಮಾಲಿಕಯ್ಯ ಗುತ್ತೇದಾರ ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ಅಧಿಕಾರದ ಆಸೆ ಇರಲಿಲ್ಲ. ನಾನು ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅದಕ್ಕೆ ನನಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಕೊಡಲಿಕ್ಕೆ ಬಿಡಲಿಲ್ಲ. ಇಲ್ಲಿಯವರೆಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಆಟ ನಡಿತಿತ್ತು. ಆದರೆ ಇದೀಗ ಸಂಗ್ಯಾ ಬಾಳ್ಯನ ಆಟ ನಡೆಯೋದಿಲ್ಲ. ಹೈಕದಲ್ಲಿ ಕಾಂಗ್ರೆಸ್‌ನ 24 ಶಾಸಕರಿದ್ದರು. ಆದರೆ ಈ ಬಾರಿ ಬಿಜೆಪಿ 18 ರಿಂದ 20 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಸಿಗಲಿದೆ. ಈಡಿಗ ಸಮಾಜದ ಮೂಲ ಕಸಬನ್ನು
ಕಾಂಗ್ರೆಸ್ ಪಕ್ಷ ಕಸಿದುಕೊಂಡಿದೆ. ಬಿಜೆಪಿ ಸರ್ಕಾರ ಬಂದ ನಂತರ ಆಂಧ್ರದಂತೆ ಕರ್ನಾಟಕದಲ್ಲಿ ಸೇಂದಿ ಸೊಸೈಟಿ ಮೂಲಕ ಆರಂಭಿಸಲಾಗುವುದು.
ಮಾಲಿಕಯ್ಯ ಗುತ್ತೇದಾರ್, ಶಾಸಕ, ಅಫಜಲಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.