ಪ್ರಿಯಾಂಕ್ ಜನ್ಮದಿನ: ಪ್ರವಾಹ ಸಂತ್ರಸ್ತರಿಗೆ ಕಿಟ್
Team Udayavani, Nov 22, 2020, 5:11 PM IST
ವಾಡಿ: ಸಮೀಪದ ಕಡಬೂರ ಗ್ರಾಮದ ಭೀಮಾ ಪ್ರವಾಹ ಸಂತ್ರಸ್ತ ಕುಟುಂಬಗಳ ಮಧ್ಯೆ ಚಿತ್ತಾಪುರ ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರ 42ನೇ ಜನ್ಮದಿನ ಆಚರಿಸುವ ಮೂಲಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸರಳತೆ ಮರೆದರು.
ಅದ್ಧೂರಿ ಸಮಾರಂಭ ಕೈಬಿಟ್ಟು, ಶಾಸಕ ಪ್ರಿಯಾಂಕ್ ಹೆಸರಿನಲ್ಲಿ ಕೇಕ್ ಕತ್ತರಿಸಿ ಪ್ರವಾಹ ಸಂತ್ರಸ್ತ ಮಕ್ಕಳಿಗೆ ಸಿಹಿ ತಿನಿಸುವ ಜತೆಗೆ ಎಣ್ಣೆ, ಸಾಬೂನು, ಟೂತ್‌ಬ್ರೆಶ್, ಟೂತ್‌ಪೇಸ್ಟ್, ಮಾಸ್ಕ್ ಸೇರಿದಂತೆ ಇನ್ನಿತರ ದಿನಬಳಕೆ ವಸ್ತುಗಳ ಕಿಟ್ ವಿತರಿಸಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಚಿತ್ತಾಪುರ ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡ ವೀರಣ್ಣಗೌಡ ಪರಸರೆಡ್ಡಿ,ಸರಕಾರದಿಂದ ಸಾವಿರಾರು ಕೋಟಿ ರೂ.ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದು ಜಾತ್ಯತೀತನಾಯಕನಾಗಿ ಜನಪರ ಯೋಜನೆಗಳನ್ನುಜಾರಿಗೆ ತಂದ ಪ್ರಿಯಾಂಕ್ ಖರ್ಗೆ ಕಲ್ಯಾಣ ನಾಡಿನ ಪ್ರಬುದ್ಧ ಯುವ ರಾಜಕಾರಣಿಯಾಗಿದ್ದಾರೆ ಎಂದರು.ಭ್ರಷ್ಟಾಚಾರ ಹಾಗೂ ಜಾತಿ ರಾಜಕಾರಣದಿಂದ ದೂರವಿದ್ದು ಎಲ್ಲರೂ ನನ್ನವರು ಎನ್ನುತ್ತ ಬುದ್ಧ, ಬಸವ, ಅಂಬೇಡ್ಕರ್ ತತ್ವದ ತಳಹದಿ ಮೇಲೆಹೆಜ್ಜೆಯಿಡುತ್ತಿರುವ ನಾಯಕನಾಗಿ ಪ್ರಿಯಾಂಕ್ ಹೊರಹೊಮ್ಮಿದ್ದಾರೆ. ಆಳುವ ಪಕ್ಷಗಳ ಎಡಬಿಡಂಗಿ ನೀತಿಗಳ ವಿರುದ್ಧ ಸಿಡಿಯುವ ಮೂಲಕ ಪ್ರಜಾತಂತ್ರ ಉಳಿಸಿದ್ದಾರೆ ಎಂದು ಹೇಳಿದರು.
ಭೀಕರ ಪ್ರವಾಹದಿಂದ ತತ್ತರಿಸಿದ ಭೀಮಾನದಿ ದಂಡೆಯ ಗ್ರಾಮಸ್ಥರ ನೆರವಿಗೆ ಬರಬೇಕಾದ ರಾಜ್ಯ ಬಿಜೆಪಿ ಸರಕಾರ, ಪ್ರವಾಹ ಪೀಡಿತರ ಮುಂದೆ ಮೊಸಳೆ ಕಣ್ಣೀರು ಸುರಿಸಿ, ಕೇವಲ ಹುಸಿ ಭರವಸೆ ಕೊಟ್ಟಿದೆ. ಜನರು ಬದುಕು ಕಟ್ಟಿಕೊಳ್ಳಲು ತಕ್ಷಣಕ್ಕೆ ಪರಿಹಾರ ಒದಗಿಸದೆ ವಿಳಂಬ ನೀತಿ ಅನುಸರಿಸುತ್ತಿದೆ. ಯಾವುದೇ ಕಾರಣಕ್ಕೂ ಪ್ರವಾಹ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ತಡವಾಗಬಾರದು.
ಬೆಳೆ ಪರಿಹಾರವನ್ನು ಶೀಘ್ರವೇ ಪಾವತಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಕಡಬೂರ ಗ್ರಾಮ ಸ್ಥಳಾಂತರಿಸಲು ಶಾಸಕ ಪ್ರಿಯಾಂಕ್ ಖರ್ಗೆ ಒಪ್ಪಿದ್ದು, ಗ್ರಾಮಸ್ಥರು ತಮ್ಮನಿಲುವು ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ವಾರದ್ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಶಿವರಾಜ ಪಾಟೀಲ ತುನ್ನೂರ, ರುದ್ರುಮುನಿ ಮಠಪತಿ ಕೊಂಚೂರ, ಸಿದ್ದರಾಜ ಮದ್ರಿಕಿ, ಚಂದ್ರು ಲೇವಡಿ, ಸಂಜೀವಕುಮಾರ ಕುಲಕರ್ಣಿ, ಶರಣು ಕೆಂಚಗುಂಡಿ, ಸಂಗಣ್ಣಗೌಡ ಅಣಬಿ, ಭಾಷಾ ಪಟೇಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.