ಆಕ್ಸಿಜನ್ ಸಹಿತ ಬೆಡ್‌ಗೆ ಪ್ರಿಯಾಂಕ್ ಸಿದ್ಧತೆ
Team Udayavani, May 2, 2021, 7:20 PM IST
ವಾಡಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರೋಗಿಗಳಿಗೆ ಆಕ್ಸಿಜನ್ ಮತ್ತು ಬೆಡ್‌ಕೊರತೆಯುಂಟಾಗಿ ಸಾವು ಸಂಭವಿಸುತ್ತಿರುವಹಿನ್ನೆಲೆಯಲ್ಲಿ ಚಿತ್ತಾಪುರ ಮತಕ್ಷೇತ್ರದ ಶಾಸಕಪ್ರಿಯಾಂಕ್ ಖರ್ಗೆ, ಚಿತ್ತಾಪುರಪಟ್ಟಣದಲ್ಲಿ 100 ಬೆಡ್‌ಗಳಕೋವಿಡ್ ಕೇರ್ ಸೆಂಟರ್ ಹಾಗೂಆಕ್ಸಿಜನ್ ಸಹಿತ ಹತ್ತು ಬೆಡ್‌ಗಳವ್ಯವಸ್ಥೆ ಕಲ್ಪಿಸುವ ಜತೆಗೆ ವಾಡಿನಗರ, ಗುಂಡಗುರ್ತಿ, ಕೋರವಾರ,ನಾಲವಾರ ಗ್ರಾಮಗಳಲ್ಲಿ ಕೋವಿಡ್ ಕೇರ್‌ಸೆಂಟರ್ ತೆರೆಯಲು ಚಿಂತನೆ ನಡೆಸಿದ್ದಾರೆ.
ಆಮ್ಲಜನಕ ಕೊರತೆಯಿಂದ ರೋಗಿಗಳುಉಸಿರುಗಟ್ಟಿ ಸಾಯುತ್ತಿರುವುದನ್ನು ತಪ್ಪಿಸಲುತಾಲೂಕಿಗೊಂದು ಕೋವಿಡ್ ಕೇರ್ ಸೆಂಟರ್‌ನಿರ್ಮಿಸಲು ಜಿಲ್ಲಾಡಳಿತಕ್ಕೆ ಈಗಾಗಲೇ ಪತ್ರಬರೆದು ಒತ್ತಾಯಿಸಿರುವ ಶಾಸಕ ಪ್ರಿಯಾಂಕ್,ತಾವು ಪ್ರತಿನಿ ಧಿಸುವ ಚಿತ್ತಾಪುರ ಮತಕ್ಷೇತ್ರವ್ಯಾಪ್ತಿಯ ಸೋಂಕಿತ ರೋಗಿಗಳ ಆರೋಗ್ಯಕಾಳಜಿ ಹೊಂದುವ ಮೂಲಕ ಚಿತ್ತಾಪುರತಾಲೂಕು ಸೇರಿದಂತೆ ಶಹಾಬಾದ, ಕಾಳಗಿ,ಸೇಡಂ ಮತ್ತು ಚಿಂಚೋಳಿ ರೋಗಿಗಳಿಗೂಬೆಡ್ ವ್ಯವಸ್ಥೆ ಮಾಡಿದ್ದಾರೆ.
ಜಿಲ್ಲಾಡಳಿತ ಸ್ಪಂದಿಸಿದರೆ ಚಿತ್ತಾಪುರದಲ್ಲಿಆಕ್ಸಿಜನ್: ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗೆಬೆಡ್ ಸಿಗುತ್ತಿಲ್ಲ ಮತ್ತು ಆಕ್ಸಿಜನ್ ಕೊರತೆಯಿದೆದಯವಿಟ್ಟು ನಮಗೆ ಸಹಾಯಮಾಡಿ ಎಂದುದಿನಕ್ಕೆ ನನಗೆ ಸುಮಾರು ಐವತ್ತಕ್ಕಿಂತ ಹೆಚ್ಚುಕರೆಗಳು ಬರುತ್ತಿವೆ. ಇತಿಮಿತಿಯಲ್ಲೇ ಕೆಲವರಿಗೆಸಹಾಯ ಮಾಡಿದ್ದೇನೆ. ಈ ವಿಷಯದಲ್ಲಿಜಿಲ್ಲಾಡಳಿತ ಸಂಪುರ್ಣ ಎಡವಿದೆ.
ಕಾರಣಚಿತ್ತಾಪುರ ಪಟ್ಟಣದಲ್ಲಿ 100 ಹಾಸಿಗೆಯಕೋವಿಡ್ ಕೇರ್ ಸೆಂಟರ್ ತೆರೆದಿದ್ದೇವೆ.ಒಟ್ಟು 400 ಬೆಡ್ ಗುರಿಯಿದೆ. ಆಕ್ಸಿಜನ್‌ಸಹಿತ ಒಟ್ಟು ಐವತ್ತು ಬೆಡ್ ಒದಗಿಸಲುತಯಾರಿ ನಡೆಸಿದ್ದೇನೆ. ಆದರೆ ಜಿಲ್ಲಾಡಳಿತಆಕ್ಸಿಜನ್ ಕೊರತೆ ಮುಂದಿಟ್ಟಿದೆ. ಆಕ್ಸಿಜನ್‌ವ್ಯವಸ್ಥೆ ಕಲ್ಪಿಸಲು ಚಿತ್ತಾಪುರದಲ್ಲಿ ಹತ್ತು ಬೆಡ್‌ಗಳನ್ನು ಮೀಸಲಿಡಲಾಗಿದೆ. ಈಗಾಗಲೇಡ್ರೆ„ರನ್ ಕೂಡ ಮಾಡಿಸಿದ್ದೇನೆ.
ಜಿಲ್ಲಾಡಳಿತಆಕ್ಸಿಜನ್ ಪೂರೈಸಿದರೆ ಕೂಡಲೇ ರೋಗಿಗಳಿಗೆಒದಗಿಸುತ್ತೇವೆ. ಅವಶ್ಯಕತೆ ಬಿದ್ದರೆ ವಾಡಿ ನಗರಹೊರವಲಯದ ಏಕಲವ್ಯ ವಸತಿ ಶಾಲೆ ಹಾಗೂಗುಂಡಗುರ್ತಿಯಲ್ಲೂ ಕೋವಿಡ್ ಕೇರ್‌ಸೆಂಟರ್ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ.ಸದ್ಯ ಚಿತ್ತಾಪುರದಲ್ಲಿ ಎಲ್ಲಾ ರೋಗಿಗಳಿಗೂಸಿಗುವಷ್ಟು ಬೆಡ್ ವ್ಯವಸ್ಥೆ ಒದಗಿಸಿದ್ದೇವೆ ಎಂದುಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.