ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

Team Udayavani, May 24, 2022, 8:24 PM IST

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ವಾಡಿ (ಚಿತ್ತಾಪುರ) : ಪಠ್ಯಪುಸ್ತಕ ಪರೀಷ್ಕರಣೆ ಹೆಸರಿನಲ್ಲಿ ಶಿಕ್ಷಣವನ್ನು ಕೇಸರೀಕರಣಗೊಳಿಸಲು ರಾಜ್ಯ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಬಹು ಸಂಸ್ಕೃತಿಯ ಈ ಕನ್ನಡ ನಾಡಿನಲ್ಲಿ ಏಕ ಜಾತಿ ಪ್ರಭಾವದ ಮನುವಾದ ಬೇರನ್ನು ಪಠ್ಯದಲ್ಲಿ ನೆಟ್ಟಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಭುಗಿಲೆದ್ದಿರುವ ಪಠ್ಯ ಪುಸ್ತಕ ಪರೀಷ್ಕರಣೆ ವಿವಾದದ ಕುರಿತು ಮಂಗಳವಾರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಂದೇಶವನ್ನು ಹಂಚಿಕೊಂಡಿರುವ ಪ್ರಿಯಾಂಕ್, ಬಲು ತೀಕ್ಷಣವಾಗಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಶೇ.40 ಕಮಿಷನ್ ದಂಧೆಯಲ್ಲಿ ತೊಡಗಿರುವ ಭಾಜಪ ಸರ್ಕಾರ ಅಪರಿಮಿತವಾದ ಭ್ರಷ್ಟಾಚಾರದಲ್ಲಿ ತೊಡಗಿದೆ. ಪ್ರಾಯೋಜಿತ ಕೋಮುದಳ್ಳುರಿ ಮತ್ತು ಹಂಗಿಲ್ಲದ ಬೆಲೆ ಏರಿಕೆಗಳು ಜನಸಾಮಾನ್ಯರ ಜೀವನ ಹಾಳುಗೆಡವಿದೆ. ಈಗ ಪಠ್ಯಪುಸ್ತಕದಲ್ಲಿ ಕೋಮುವಾದಿ ಹಿನ್ನೆಲೆಯ ಬಾಡಿಗೆ ಭಾಷಣಕಾರನ ಲೇಖಕನವನ್ನು ಸೇರಿಸಿ ಮಕ್ಕಳ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತಿಹಾಸ ಮರೆತವರು ಇತಿಹಾಸವನ್ನು ರಚಿಸುವುದಿಲ್ಲ ಎಂದು ಅಂಬೇಡ್ಕರರು ಹೇಳಿರುವಂತೆ, ಕೋಮುಸೌಹಾರ್ಧತೆ ಎಂಬುದು ಅರಿಯದವರು ಇಂದು ಈ ನಾಡಿನ ಇತಿಹಾಸವನ್ನೇ ತಿರುಚಲು ಮುಂದಾಗಿದ್ದಾರೆ. ತಾಯಿನಾಡನ್ನೇ ಬ್ರಿಟೀಷರಿಗೆ ಮಾರಲು ಹೊರಟಿದ್ದ ಹೇಡಿಗಳನ್ನು ವೀರರಂತೆ ಬಿಂಬಿಸಲು ಮುಂದಾಗಿರುವುದು ದೇಶಕ್ಕಾಗಿ ಪ್ರಾಣತೆತ್ತ ನಿಜವಾದ ದೇಶಭಕ್ತರಿಗೆ ಮಾಡಿದ ಘೋರ ಅಪಮಾನವಾಗಿದೆ. ಈಟಿ ಸೆಲ್‌ನ ಟ್ರೋಲ್‌ಗಳು ಇಂದು ಪಠ್ಯಪುಸ್ತಕ ಪರೀಷ್ಕರಣೆಯ ಸೂತ್ರದಾರಿಗಳಾಗಿದ್ದಾರೆ. ಜಾತಿ ಸಮಾನತೆ, ಕೋಮು ಸೌಹಾರ್ಧತೆ ಸಾರಿದ ಕವಿಗಳು ಹಾಗೂ ಬಡ ಜನರ ಗ್ರಾಮೀಣ ಜನಪದ ನುಡಿಗಳು ಇವರಿಗೆ ಬೇಕಾಗಿಲ್ಲ. ಬಾಯಿಬಿಟ್ಟರೆ ಸುಳ್ಳು ಹೇಳುವ ಬಾಡಿಗೆ ಭಾಷಣಕಾರರ ಲೇಖನಗಳು ಪಠ್ಯಪುಸ್ತಕದ ಭಾಗವಾಗಿವೆ ಎಂದು ಪ್ರಿಯಾಂಕ್ ಖರ್ಗೆ ವಿಷಾಧಿಸಿದ್ದಾರೆ.

ಇದನ್ನೂ ಓದಿ : ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ

ಸ್ವಾತಂತ್ರ್ಯಕ್ಕಾಗಿ ಗಲ್ಲುಗಂಭಕ್ಕೇರಿದ ಶಹೀದ ಭಗತ್‌ಸಿಂಗ್ ಹಾಗೂ ಮೂರು ಸಲ ಬ್ರಿಟೀಷರ ವಿರುದ್ಧ ಯುದ್ಧ ಮಾಡಿದ ಟಿಪ್ಪು ಅವರ ಇತಿಹಾಸ ಬಿಜೆಪಿಗೆ ಬೇಡವಾಗಿದೆ. ಬದಲಾದ ಶಿಕ್ಷಣ ವ್ಯವಸ್ಥೆಯಿಂದ ದೇಶದ ತ್ರೀವರ್ಣ ಧ್ವಜದ ಬದಲು ಆರ್‌ಎಸ್‌ಎಸ್‌ನ ಭಗ್ವಾ ಧ್ವಜಕ್ಕೆ ಮಂಡಿಯೂರಬೇಕಾದ ಪರಸ್ಥಿತಿ ಬರಲಿದೆ. ಸಾರಾ ಅಬೂಬಕರ್, ಕೆ.ಲೀಲಾ, ಬಿ.ಟಿ.ಲಲಿತಾ ನಾಯ್ಕ್ ಅವರ ಚೇತೋಹಾರಿ ಲೇಖನಗಳನ್ನು ಕೈಬಿಟ್ಟು, ಹೆಣ್ಣೊಬ್ಬಳನ್ನು ಹಣದ ರಾಶಿಗೆ ಹೋಲಿಸುವ ಆರ್‌ಎಸ್‌ಎಸ್ ಪ್ರೇಮಿಯ ಲೇಖನಗಳನ್ನು ಪಠ್ಯದಲ್ಲಿ ಸೇರಿಸಲಾಗಿದ್ದು, ಮನುವಾದದ ಸ್ತ್ರೀ ವಿರೋಧಿ ನೀತಿಗಳನ್ನು ೨೧ನೇ ಸತಮಾನದ ಮಕ್ಕಳಿಗೆ ಕಲಿಸುವ ನೀಚ ಸ್ಥಿತಿಗೆ ನಾವು ಬಂದಿದ್ದೇವಾ? ಜಾತಿ ಶೋಷಣೆ ವಿರುದ್ಧ ಹೋರಾಡಿದವರನ್ನ ಬದಿಗೆ ಸರಿಸುತ್ತಾ, ಮನುವಾದ ಸಾರಿದವರನ್ನ ಮುನ್ನೆಲೆಗೆ ತರಲಾಗುತ್ತಿದೆ. ಇಂತಹ ಶಿಕ್ಷಣವನ್ನು ಬಿಜೆಪಿ ನಾಯಕರ ಮಕ್ಕಳು ಎಂದಿಗೂ ಕಲಿಯುವುದಿಲ್ಲ. ಕಾರಣ ಅವರೆಲ್ಲರೂ ವಿದೇಶದಲ್ಲಿ ಓದುತ್ತಾರೆ ಎಂದು ತಿವಿದಿರುವ ಪ್ರಿಯಾಂಕ್, ಹೇಳೋದು ಸಬ್‌ಕಾ ಸಾಥ್-ಸಬ್‌ಕಾ ವಿಕಾಸ್, ಆದರೆ ಮಾಡುತ್ತಿರೋದು ಮಾತ್ರ ಸಬ್‌ಕಾ ಸರ್ವನಾಶ ಎಂದು ಕಿಡಿಕಾರಿದ್ದಾರೆ.

ಟಾಪ್ ನ್ಯೂಸ್

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.