ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ; UPSCಯಲ್ಲಿ ರಾಜ್ಯಕ್ಕೆ 15ನೇ ರ‍್ಯಾಂಕ್
ಕೊವಿಡ್ ಕರ್ತವ್ಯದಲ್ಲಿದ್ದಾಗಲೇ ರ‍್ಯಾಂಕ್ ಸಂದೇಶ ಬಂತು
Team Udayavani, Aug 4, 2020, 9:47 PM IST
ಕಲಬುರಗಿ: ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಪ್ರೊಬೆಷನರಿ ಕೆಎಎಸ್ ಅಧಿಕಾರಿಯಾಗಿರುವ ಬಂದಿರುವವರಿಗೆ ಈಗ ಐಎಎಸ್ ಭಾಗ್ಯ ಲಭಿಸಿದೆ.
ಮಂಗಳವಾರ ಪ್ರಕಟಗೊಂಡ ಪ್ರಸಕ್ತ ಯುಪಿಎಸ್‌ಸಿಯಲ್ಲಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆಯಲ್ಲಿ ಪ್ರೋಬೆಷನರಿ ಕೆಎಎಸ್ ಅಧಿಕಾರಿಯಾಗಿ ಜಿಲ್ಲೆಯ ಕೊವಿಡ್ ನಿಯಂತ್ರಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ ಅಡಹಳ್ಳಿ 440ನೇ ರ‍್ಯಾಂಕ್ ಗಳಿಸಿ ಉತ್ತೀರ್ಣರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ (ಮೊದಲು ಅಥಣಿ) ತಾಲೂಕಿನ ಮೊಳೆ ಗ್ರಾಮದವರಾಗಿರುವ ಜಗದೀಶ ಅಡಹಳ್ಳಿ ಅವರು ಕೊನೆಯ ಆರನೇ ಪ್ರಯತ್ನದಲ್ಲಿ ಐಎಎಸ್ ಕನಸು ನನಸು ಮಾಡಿಕೊಂಡಿದ್ದಾರೆ.
ಯುಪಿಎಸ್‌ಯಲ್ಲಿ ಪ್ರಸಕ್ತ ರಾಜ್ಯಕ್ಕೆ 15ನೇ ರ‍್ಯಾಂಕ್ ಪಡೆದಿದ್ದಾರೆ. ಕಳೆದ 2019ರ ಕೆಎಎಸ್ ನಲ್ಲಿ 23ನೇ ರ‍್ಯಾಂಕ್ ಪಡೆದಿರುವ ಜಗದೀಶ ಅವರು ನವದೆಹಲಿಯ ವಾಜಿರಾಮ ಹಾಗೂ ರವಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.
ಕಳೆದ ಒಂದುವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಕೊವಿಡ್ ಕೇರ್ ಸೆಂಟರ್, ಚೆಕ್ ಪೊಸ್ಟ್ ಸೇರಿದಂತೆ ಕೊವಿಡ್ ನಿಯಂತ್ರಣದ ಕುರಿತಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ ಕೊವಿಡ್ ನಿಯಂತ್ರಣ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಸಂದರ್ಭದಲ್ಲೇ ಐಎಎಸ್‌ನಲ್ಲಿ ರ‍್ಯಾಂಕ್ ಪಡೆದಿರುವ ವಿಷಯವನ್ನು ಗೆಳೆಯರು ಜಗದೀಶ್ ಅವರಿಗೆ ತಿಳಿಸಿದ್ದಾರೆ.
ಜಗದಿಶ್ ಅವರ ತಂದೆ ವಾಹನ ಚಾಲಕರಾಗಿದ್ದಾರೆ. ಒಟ್ಟಾರೆಯಾಗಿ ತಮ್ಮ ಈ ಸಾಧನೆ ತಮ್ಮ ಅವಿರತ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಜಗದೀಶ್ ಅವರು ತಮ್ಮ ಸಂತೋಷವನ್ನು ಮಾದ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ತಂದೆ-ತಾಯಿಯ ಆಶೀರ್ವಾದ ಹಾಗೂ ಐಎಎಸ್ ಪಾಸಾಗಬೇಕೆಂಬ ದೃಢ ಇಚ್ಚೆಯೇ ಇದನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ ಎಂದು ತಿಳಿಸುವ ಜಗದೀಶ ಅಡಹಳ್ಳಿ ಅವರು, ಕಲಬುರಗಿಯಲ್ಲಿನ ಪ್ರೊಬೆಷನರಿ ಸೇವೆ ಸಾಕಷ್ಟು ಅನುಭವ ನೀಡಿದೆ ಎಂದು ಸ್ಮರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.