ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ
Team Udayavani, Nov 22, 2018, 10:34 AM IST
ಕಲಬುರಗಿ: ಗುರುವಿನ ಮಾರ್ಗದರ್ಶನದಲ್ಲಿ ದೃಢ ಹೆಜ್ಜೆಯೊಂದಿಗೆ ನಡೆದರೆ ನಿಶ್ಚಿತ ಗುರಿ ತಲುಪಲು ಸಾಧ್ಯ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಆಳಂದ ತಾಲೂಕಿನ ಚಿಂಚನಸೂರ ಬಾಣೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀಮಠದ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ, ನಂತರ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಹಸಿವಾದ ಒಡಲಿನ ದಾಹ ಹಿಂಗಿಸಲು ಅನ್ನದಾತ, ಸನ್ಮಾರ್ಗದಲ್ಲಿ ಸಾಗಲು ಗುರು ಬೇಕು. ಆ ಗುರು ಎನ್ನುವ ಬೆಳಕಲ್ಲಿ ಜೀವನದ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು. ಬಾಣೇಶ್ವರ ಮಠದ ಉತ್ತರಾಧಿಕಾರಿ ಆಗಿರುವ ಬೀಡ ಜಿಲ್ಲೆಯ ಅಂಬಾ ಜೋಗದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಂಚನಸೂರ ಕಲ್ಮಠದ ಸಿದ್ಧಮಲ್ಲ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಕಡಗಂಚಿ ವೀರಭದ್ರ ಶಿವಾಚಾರ್ಯರು, ಮಹಾಗಾಂವದ ಗುರುಲಿಂಗ ಶಿವಾಚಾರ್ಯರು, ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಸ್ವಾಮೀಜಿ, ನರೋಣಾದ ಚನ್ನಮಲ್ಲ ದೇವರು, ಮುದ್ದಡಗಾದ ಸಂಗಮೇಶ ಶಿವಾಚಾರ್ಯರು, ಮಲಕೂಡದ ಗುರುಲಿಂಗ ಶಿವಾಚಾರ್ಯರು ಹಾಜರಿದ್ದರು. ಪಾಳಾದ ಗುರುಮೂರ್ತಿ ಶಿವಾಚಾರ್ಯರು ನಿರೂಪಿಸಿದರು, ಮಲ್ಲಯ್ಯ ಶಾಸ್ತ್ರೀ ಐನಾಪುರ ಸಂಗೀತ ಸೇವೆ ಸಲ್ಲಿಸಿದರು ಎಂದು ವಿಶ್ವಾರಾಧ್ಯ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.