ರೈತ ವಿರೋಧಿ ಕಾಯ್ದೆ ಪ್ರತಿ ಸುಟ್ಟು ಪ್ರತಿಭಟನೆ
Team Udayavani, Dec 4, 2020, 1:55 PM IST
ಕಲಬುರಗಿ: “ದೆಹಲಿ ಚಲೋ’ ಹೊರಟಿದ್ದ ರೈತರ ಮೇಲೆ ಕೇಂದ್ರ ಬಿಜೆಪಿ ಸರ್ಕಾರ ದೌರ್ಜನ್ಯ ನಡೆಸಿದ್ದನ್ನು ಖಂಡಿಸಿ ಮತ್ತು ರೈತರ ಹೋರಾಟ ಬೆಂಬಲಿಸಿ ರೈತ-ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಸಮಿತಿಯಿಂದ ನಗರದ ಸರ್ದಾರ್‌ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕರಾಳ ರೈತ ವಿರೋಧಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಪ್ರತಿಭಟಿಸಲಾಯಿತು.
ಅಖೀಲ ಭಾರತ ರೈತರ ಐಕ್ಯತಾ ದಿನದ ಹೆಸರಲ್ಲಿ ಪ್ರತಿಭಟನೆ ನಡೆಸಿ, ರೈತರ ಹೋರಾಟ ಆರಂಭಗೊಳ್ಳುತ್ತಿದ್ದಂತೆಹೆದರಿದ ಕೇಂದ್ರ ಸರ್ಕಾರ ರಸ್ತೆಗಳನ್ನು ನಾಶ ಮಾಡಿ, ತಗ್ಗುಗಳನ್ನು ತೋಡಿ ಮಣ್ಣಿನ ಗುಡ್ಡಗಳನ್ನು ನಿರ್ಮಿಸಿತು.ಬ್ಯಾರಿಕೇಡ್ ಹಾಕಿಸಿ, ಮುಳ್ಳಿನತಂತಿ ಅಡ್ಡವಾಗಿ ಕಟ್ಟಿಸಿ, ಸಾವಿರಾರು ಜನ ಪೋಲಿಸ್ ಕಾವಲುಗಾರರನ್ನುನೇಮಿಸಿತು. ರೈತರು ಇದೆಲ್ಲವನ್ನು ಮೀರಿ ಮುನ್ನುಗ್ಗುತ್ತಿದ್ದಾಗ ಅವರ ಮೇಲೆ ಆಕ್ರಮಣ ಎಸಗಿದೆ.
ಜಲಫಿರಂಗಿ ಮತ್ತು ಟಿಯರ್ ಗ್ಯಾಸ್ ಗಳನ್ನು ಬಳಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದು ಖಂಡನೀಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನಗಳ ವ್ಯಾಪಾರವಾಣಿಜ್ಯ ಕಾಯ್ದೆ (ಎಪಿಎಂಸಿ ಅನೂರ್ಜಿತಗೊಳಿಸುವ ಕಾಯ್ದೆ) ಮತ್ತು ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೃಷಿ ಸೇವೆಗಳ ರೈತರ ಒಪ್ಪಂದ ಕಾಯ್ದೆ, ವಿದ್ಯುತ್ ಕಾಯ್ದೆ ರೈತ ವಿರೋಧಿಯಾಗಿವೆ. ಇವುಗಳನ್ನು ಹಿಂತೆಗೆದುಕೊಳ್ಳುವಂತೆ ದೇಶಾದ್ಯಂತ ರೈತರು ಸಿಡಿದೆದ್ದಿದ್ದಾರೆ. ಈ ಸರ್ಕಾರ ಕಾರ್ಪೋರೇಟ್ ಮನೆತನಗಳ ಪರಎಂಬುವುದು ರೈತ ಸಮುದಾಯಕ್ಕೆಗೊತ್ತಾಗಿದೆ. ಇನ್ನಾದರೂ ರೈತರಿಗೆಮರಣ ಶಾಸನವಾದ ಕಾಯ್ದೆಗಳನ್ನುಸರ್ಕಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಲಾಕ್‌ಡೌನ್ ಸಂದರ್ಭ ದುರುಪಯೋಗ ಪಡಿಸಿಕೊಂಡಿರುವ ಸರ್ಕಾರವು ರೈತರಿಗೆ, ದೇಶದ ದುಡಿಯುವ ಜನತೆಗೆ ಮಹಾ ದ್ರೋಹ ಎಸಗಿದೆ. ರೈಲ್ವೆ, ಶಿಕ್ಷಣ, ಆರೋಗ್ಯ, ಅಂಚೆ, ವಿಮಾನ, ಬ್ಯಾಂಕ್, ಎಲ್‌ಐಸಿ ಹೀಗೆ ಎಲ್ಲ ಸಾರ್ವಜನಿಕ ಸೇವಾ ಕ್ಷೇತ್ರಗಳನ್ನು ಖಾಸಗಿಯವರಿಗೆ ಒಪ್ಪಿಸಲು ಹೊರಟಿದೆ. ಇಲ್ಲಿಯವರೆಗೂ ಸಹಿಸಿಕೊಂಡಿದ್ದ ರೈತರು, ಜನರ ಸಹನೆ ಕಟ್ಟೆ ಒಡೆದಿದೆ. ಆದ್ದರಿಂದ ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದ ಲಕ್ಷಾಂತರ ರೈತರು ದೆಹಲಿಯಲ್ಲಿ ಹೋರಾಟಕ್ಕೆ ಇಳಿದಿದ್ದರು.
ಈ ಹೋರಾಟ ಬಲಪಡಿಸೋಣವೆಂದು ಪ್ರತಿಭಟನಾ ನಿರತರು ಕರೆ ನೀಡಿದರು. ಸಂಘಟನೆ ರಾಜ್ಯ ಕಾರ್ಯದರ್ಶಿ ಎಚ್.ವಿ.ದಿವಾಕರ್, ರಾಜ್ಯ ಖಜಾಂಚಿ ವಿ. ನಾಗಮ್ಮಾಳ್, ಜಿಲ್ಲಾಧ್ಯಕ್ಷ ಗಣಪತರಾವ್ ಕೆ.ಮಾನೆ, ಕಾರ್ಯದರ್ಶಿ ಮಹೇಶ ಎಸ್.ಬಿ, ಮುಖಂಡರಾದ ವಿಶ್ವನಾಥ ಸಿಂಘೆ, ಗುಂಡಣ್ಣ ಕುಂಬಾರ,ರಾಜೇಂದ್ರ ಅತನೂರ, ಯಶವಂತ ದಂಡ, ಮಲ್ಲಯ್ಯ ಗುತ್ತೇದಾರ, ಶರಣಯ್ಯ ಗುತ್ತೇದಾರ, ಪರಶುರಾಮ, ಶರಣಯ್ಯ ಸ್ವಾಮಿ, ಪ್ರವೀಣ ತಂಗಾ, ರಹೀಮ ಪಟೇಲ್ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.