![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 28, 2019, 2:27 PM IST
ಅಫಜಲಪುರ: ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮುಖ್ಯಾಧಿಕಾರಿ ಖೈಸರ್ ಹುಸೇನ್ ಅವರಿಗೆ ಮಹಿಳೆಯರು ಘೇರಾವ್ ಹಾಕಿದರು.
ಅಫಜಲಪುರ: ಪಟ್ಟಣದ ವಾರ್ಡ್ ನಂ. 16 ಹೂಗಾರ ಪ್ಲಾಟ್‌ಗೆ ಹಗಲು ಹೊತ್ತಿನಲ್ಲಿ ನೀರು ಬಿಡುವಂತೆ ಒತ್ತಾಯಿಸಿ ಮಹಿಳೆಯರು ಪುರಸಭೆ ಮುಖ್ಯಾಧಿಕಾರಿಗೆ ಘೇರಾವ್ ಹಾಕಿದರು.
ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ಹಗಲೊತ್ತಿನಲ್ಲಿ ನೀರು ಪೂರೈಸಲಾಗುತ್ತಿದೆ. ಆದರೆ ಹೂಗಾರ್ ಪ್ಲಾಟ್‌ಗೆ(ಲಿಂಬಿತೋಟ) ಮಾತ್ರ ರಾತ್ರಿ ವೇಳೆಯಲ್ಲಿ ನೀರು ಬಿಡಲಾಗುತ್ತಿದೆ. ಇದರಿಂದ ನಮ್ಮ ನಿದ್ದೆಗೆ ತೊಂದರೆಯಾಗುತ್ತಿದೆ. ನೀರಿನ ಟ್ಯಾಂಕ್‌ನಿಂದ ರಾತ್ರಿ ವೇಳೆಯಲ್ಲಿ ನೀರು ಬಿಡಬೇಡಿ ಎಂದು ಹೇಳೕದಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪುರಸಭೆ ಸಿಬ್ಬಂದಿ ಕಲ್ಲೆಸೆದಿದ್ದಾರೆ. ಇದರಿಂದ ರಾಜಶ್ರೀ ಮಾಳಗೆ ಎಂಬ ಮಹಿಳೆ ತಲೆ ಒಡೆದಿದ್ದು, ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆಯರು ಪುರಸಭೆಗೆ ಮುತ್ತಿಗೆ ಹಾಕಿದರು. ಅಲ್ಲದೇ ಪ್ರತಿಭಟನೆ ನಡೆಸಿ ಪುರಸಭೆ ಕಚೇರಿಗೆ ಬೀಗ ಹಾಕಿ ಮುಖ್ಯಾಧಿಕಾರಿ ಖೈಸರ್ ಹುಸೇನ್ ಅವರಿಗೆ ತರಾಟೆಗೆ ತೆಗೆದುಕೊಂಡರು.
ಎಲ್ಲ ವಾರ್ಡ್‌ಗೆ ಹಗಲಿನಲ್ಲಿ ನೀರು ಬಿಡಲಾಗುತ್ತಿದೆ. ನಮ್ಮ ವಾರ್ಡ್‌ಗೇಕೆ ರಾತ್ರಿ ಬಿಡುತ್ತಿರಿ? ಹಗಲಿನಲ್ಲಿ ನೀರು ಬಿಡಿ. ನೀರಲ್ಲಿ ಬ್ಲೀಚಿಂಗ್ ಪೌಡರ್ ಬಳಸಿ ಸಮರ್ಪಕವಾಗಿ ಪೂರೈಸಿ ಎಂದು ಎಷ್ಟು ಬಾರಿ ಮನವಿ ಮಾಡಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮಸ್ಯೆ ಕುರಿತು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಾರ್ಡ್ ಮಹಿಳೆಯರಾದ ಅನ್ನಪೂರ್ಣ ಮ್ಯಾಳೇಶಿ, ಗುರುಬಾಯಿ ಹಡಲಗಿ, ಸರೋಜ ಪ್ರಧಾನಿ, ವಿಜಯಲಕ್ಷ್ಮೀ ಸಾಸನೇಕರ, ನಿರ್ಮಲಾ ಹಿರೇಮಠ, ಅನಿತಾ ಅಪ್ಪಾರಾವ, ರತಾಬಾಯಿ ಹೂಗಾರ, ಶಿವಲೀಲಾ ಮ್ಯಾಳೇಸಿ, ಸಿದ್ದಮ್ಮ ಅತನೂರ, ಭೀಮಬಾಯಿ ಹುಕ್ಕೇರಿ, ಚಿದಾನಂದ ಮಠ, ಶೇಖಪ್ಪ ಹಂಗರಗಿ, ಶ್ರೀಮಂತ ಬಿರಾದಾರ, ಬಸವರಾಜ ಇದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.