ತೈಲ ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರತಿಭಟನೆ
Team Udayavani, Feb 16, 2021, 4:42 PM IST
ಕಲಬುರಗಿ: ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿ ಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ದಿನ್ಯವೂ ತೈಲ ದರ ಏರಿಕೆಯಾಗುತ್ತಲೇ ಇದೆ. ಕಳೆದ ಎರಡು ವರ್ಷಗಳಿಂದ ಪ್ರತಿ 15 ದಿನದಲ್ಲಿ ಸಾಕಷ್ಟು ಬೆಲೆ ಮಾಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆಯಿಂದ ಬಡ ಹಾಗೂ ಮಧ್ಯಮವರ್ಗದ ಜನ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಈಗಾಗಲೇ ಕೊರೊನಾ ಹಾವಳಿಯಿಂದ ಮಧ್ಯಮ ಹಾಗೂ ಬಡ ವರ್ಗದ ಜನರು ತತ್ತರಿಸಿದ್ದಾರೆ. ಇದರ ಮಧ್ಯೆ ಹಿಂದುಳಿದ ಹಾಗೂ ಬಡ ಕುಟುಂಬಗಳೇ ಹೆಚ್ಚಾಗಿಬಳಸುವ ಈ ಮೂರೂ ತೈಲ ದರಗಳನ್ನು ಉದ್ದೇಶಪೂರ್ವಕವಾಗಿ ಏರಿಸಲಾಗುತ್ತಿದೆ. ಜತೆಗೆ ದಿನಬಳಕೆ ವಸ್ತುಗಳ ದರ, ಆಹಾರ ಧಾನ್ಯಗಳ ದರವೂ ಹೆಚ್ಚಿಸಲಾಗಿದೆ. ಸರ್ಕಾರ ಇಂತಹ ಜನ ವಿರೋಧಿ ಧೋರಣೆ ಬಿಡಬೇಕು ಎಂದು ಘೋಷಣೆ ಕೂಗಿದರು.
ಅಲ್ಲದೇ, ಪ್ರತಿಯೊಂದು ವಸ್ತುವಿನ ಮೇಲಿನ ತೆರಿಗೆ ದರವನ್ನೂ ಹೆಚ್ಚಿಸಲಾಗಿದೆ.ಈಗ ಅಡುಗೆ ಅನಿಲವನ್ನೂ ದುಬಾರಿಮಾಡಿದ್ದರಿಂದ ಬಡವರು ಬದುಕದಂತಹವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಪ್ರತಿ ಲೀಟರ್ ಪೆಟ್ರೋಲ್‌ಗೆ 50 ರೂ.,ಡೀಸೆಲ್‌ಗೆ 40 ರೂ. ಹಾಗೂ ಅಡುಗೆ ಅನಿಲ ಸಿಲಿಂಡರ್ ದರವನ್ನು 500 ರೂ.ಗೆ ಇಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆ ಅಧ್ಯಕ್ಷ ಅಮೃತ ಪಾಟೀಲ,ಮುಖಂಡರಾದ ಶಿವಾಜಿ ಚವ್ಹಾಣ, ರವಿ ಒಂಟಿ, ಅನಿಲ ತಳವಾರ, ಪೂಜಾ ಮಂಗಳಮುಖಿ, ಸಂಜನಾ ಮಂಗಳಮುಖಿ ಮೊದಲಾದವರು ಪಾಲ್ಗೊಂಡಿದ್ದರು.
ಕತ್ತಿ ಹೇಳಿಕೆಗೆ ಕರವೇ ಖಂಡನೆ :
ಕಲಬುರಗಿ: ಬೈಕ್, ಟಿವಿ ಮತ್ತು ಒಂದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇವೆ ಎಂದಿರುವ ಉಮೇಶ ಕತ್ತಿ ಹೇಳಿಕೆಗೆ ಎಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಸರ್ಕಾರ ಈ ರೀತಿಯಾದ ನಿಲುವುಗಳನ್ನು ತೆಗೆದುಕೊಂಡು ಬಡವರನ್ನು ಮತ್ತು ಕೆಳವರ್ಗದವರನ್ನು ತುಳಿಯುವ ಪ್ರಯತ್ನಮಾಡುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ. ಲಾಕ್ ಡೌನ್‌ನಿಂದಾಗಿ ಬಡವರು, ಬೀದಿ ವ್ಯಾಪಾರಿಗಳು ಚೇತರಿಸಿಕೊಳ್ಳುವ ಮುಂಚೆಯೇ ಇಂತಹ ಹೇಳಿಕೆಗಳು ನೀಡಿರುವುದು ಸಚಿವರ ಘನತೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಇಂಥವರನ್ನು ಕೂಡಲೆ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.