ತ್ರಿವಳಿ ತಲಾಕ್ ವಿಧೇಯಕ ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ
Team Udayavani, Jan 5, 2018, 11:26 AM IST
ಅಫಜಲಪುರ: ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ವಿಧೇಯಕ ಹಿಂಪಡೆಯಬೇಕು ಎಂದು ಒತ್ತಾಯಿಸಿ ಎಂಐಎಂ ಪಕ್ಷದ ಕಾರ್ಯಕರ್ತರು ತಾಲೂಕು ಅಧ್ಯಕ್ಷ ಮಂಜೂರ್ ಅಗರಖೇಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ನೀಚೆ ಗಲ್ಲಿಯಿಂದ ತಹಶೀಲ್ದಾರ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ ಇಸ್ಮಾಯಿಲ್ ಮುಲ್ಕಿ ಅವರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಎಂಐಎಂ ತಾಲೂಕು ಅಧ್ಯಕ್ಷ ಮಂಜೂರ್ ಅಗರಖೇಡ್ ಮಾತನಾಡಿ, ತ್ರಿವಳಿ ತಲಾಕ್ ವಿಧೇಯಕ ಮುಸ್ಲಿಂ ಕುಟುಂಬಗಳಿಗೆ ವರದಾನವಲ್ಲ, ಶಾಪವಾಗಿದೆ. ಇದರಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬರಲಿವೆ. ಮೂರು ಬಾರಿ ತಲಾಖ್ ಹೇಳುವ ಪುರುಷನಿಗೆ 3 ವರ್ಷ ಜೈಲು ಶಿಕ್ಷೆ ಎಂದು ವಿಧೇಯಕದಲ್ಲಿ ಸೇರಿಸಿದ್ದು ಸರಿಯಲ್ಲ. ಕುಟುಂಬದ ಯಜಮಾನನೇ ಜೈಲುಪಾಲಾದರೆ ಸಂಸಾರದ ಹೊಣೆ ಹೊರುವವರು ಯಾರು? ಹೀಗಾಗಿ ತಕ್ಷಣ ತ್ರಿವಳಿ ತಲಾಖ್ ಬಿಲ್ ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೋಮು ಭಾವನೆ ಕೆದಕುವ ಮೂಲಕ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ರಾಜ್ಯಸಭೆಯಲ್ಲಿ ಈಗಾಗಲೇ ಬಿಜೆಪಿ ಮಂಡಿಸುತ್ತಿರುವ ತಲಾಖ್ ವಿಧೇಯಕಕ್ಕೆ ಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಮಹಿಳೆಯರಾದ ಅಪ್ಸಾನಾ ಮಾಶಾಳಕರ, ತಬಸುಮ್ ಅಗರಖೇಡ, ಶರೀಫಾಬಿ ಮಹಿಬೂಬಸಾಬಧ ಮಾತನಾಡಿದರು. ಹುಸೇನಸಾಬ್ ಶೇಕ್, ಇಸ್ಮಾಯಿಲ್ ಶೇಕ್, ಸೈಫನ್ ಶಿರೂರ, ಮೋಸಿನ್ ಮಡ್ನಳ್ಳಿ, ಅಲ್ಲಾಭಕ್ಷ ಮುಲ್ಲಾ, ರಜಾಕಸಾಬ್ ಆಲಮೇಲಕರ, ರಜಾಕ್ ಆಳಂದಕರ, ಸಲೀಮ್, ಮೋಸಿನ್, ಬಿಲಾಲ್, ಸದ್ದಾಂ ಚೌಧರಿ, ರಹಿಮಾನ್ ಮಉಲ್ಲಾ, ಲಾಲಸಾಬ್, ಅಸ್ಪಾಕ್ ಗೌಂಡಿ, ಹಸೀನಾಬಿ, ಮಾನುಲ್ಲಾ ನೂರಜಹಾನ್, ಫರ್ಜಾನಾ ರೇವೂರಕರ ಇದ್ದರು.
ಜೇವರ್ಗಿ: ತ್ರಿವಳಿ ತಲಾಕ್ ವಿಧೇಯಕ ಹಿಂಪಡೆಯುವಂತೆ ಹಾಗೂ ಕೋರೆಗಾಂವ ಘಟನೆ ಖಂಡಿಸಿ ಗುರುವಾರ ಎಂಐಎಂ ಪಕ್ಷದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಅಖಂಡೇಶ್ವರ ವೃತ್ತದಿಂದ ಮಿನಿ ವಿಧಾನಸೌಧ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಐಎಂಐಎಂ ಜಿಲ್ಲಾ ಮುಖಂಡ ಗುರುಶಾಂತ ಪಟ್ಟೇದಾರ, ಮುಸ್ಲಿಂ ಸಮಾಜದಲ್ಲಿ ಪತ್ನಿಗೆ ವಿಚ್ಛೇಧನ ನೀಡುವುದಕ್ಕಾಗಿ ಮೂರು ಬಾರಿ ತಲಾಕ್ ಹೇಳುವ ಮುಸ್ಲಿಂ ಪುರುಷನಿಗೆ 3 ವರ್ಷ ಜೈಲು ಶಿಕ್ಷೆ ವಿ ಧಿಸುವುದಕ್ಕೆ ಮಸೂದೆಯಲ್ಲಿ ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ. ತಕ್ಷಣ ತ್ರಿವಳಿ ತಲಾಕ್ ನಿಷೇಧ ವಿಧೇಯಕ ವಾಪಸ್ ಪಡೆಯಬೇಕು.
ಕುಟುಂಬದ ಯಜಮಾನ ಜೈಲು ಪಾಲಾದರೆ ಸಂಸಾರದ ಹೊಣೆ ಹೊರವುವರ್ಯಾರು? ಒಂದೆ ವೇಳೆ ಮಸೂದೆ ಕಾನೂನಾಗಿ ಪರಿವರ್ತನೆಗೊಂಡರೆ ಸಣ್ಣಪುಟ್ಟ ಮತ್ತು ಕುಟುಂಬದ ಯಜಮಾನನ ವಿರುದ್ಧ ಆಗದವರು ಪೊಲೀಸರಿಗೆ ದೂರು ನೀಡಿ ತ್ರಿವಳಿ ತಲಾಕ್ ಅನ್ವಯ ಪ್ರಕರಣ ದಾಖಲಿಸುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದ ಮುಸ್ಲಿಂ ಸಮಾಜದ ಕುಟುಂಬಗಳಲ್ಲಿ ಬಿರುಕು ಹುಟ್ಟುವುದು ಸಹಜ. ಕೇಂದ್ರದ ಬಿಜೆಪಿ ಸರ್ಕಾರ ಕೋಮು ಭಾವನೆ
ಕೆದಕುವ ಮೂಲಕ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಈ
ಮಸೂದೆ ವಾಪಸ್ ಪಡೆಯಬೇಕು ಹಾಗೂ ಕೋರೆಂಗಾವ ಘಟನೆಗೆ ಸಂಬಂಧಿಸಿದವರ ಮೇಲೆ ಕಠಿಣ ಕಾನೂನು ಕ್ರಮ
ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ತಹಶೀಲ್ದಾರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಎಐಎಂಐಎಂ ಪಕ್ಷದ ಮುಖಂಡರಾದ ರಾಜಾ ಪಟೇಲ ಯಾಳವಾರ, ಮಹ್ಮದ್ ಗೌಸ್, ಯೂನೂಸ್ ಆಮ್ಲಾ, ಸಿರಾಜ್ ಪಟೇಲ್ ಮುದಬಾಳ ಕೆ., ಟಿಪ್ಪು ಅನ್ವರ್ ಸಿಗರಥಹಳ್ಳಿ, ಶಕೀಲ್ ಪಟೇಲ್, ಫಯಾಜ್‌ಖಾನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.