ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ : ಲಿಂಗಸೂಗುರ ಡಿವೈಎಸ್ಪಿ ವಿಚಾರಣೆ
Team Udayavani, May 5, 2022, 12:16 AM IST
ಕಲಬುರಗಿ: ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ಡಿವೈಎಸ್ಪಿಯೊಬ್ಬರನ್ನು ಸಿಐಡಿ ತಂಡ ವಿಚಾರಣೆ ನಡೆಸಿದೆ.
ಹೀಗಾಗಿ ಮಹತ್ವದ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಅಲ್ಲದೆ ಈ ಪ್ರಕರಣ ಹೊಸ ತಿರುವು ಪಡೆದುಕೊಳ್ಳಲಿದೆ ಎನ್ನಲಾಗುತ್ತಿದೆ.
ಮಲ್ಲಿಕಾರ್ಜುನ ಸಾಲಿ ಎಂಬುವರೇ ವಿಚಾರಣೆಗೊಳಪಟ್ಟಿರುವ ಡಿವೈಎಸ್ಪಿ. ಈ ಹಿಂದೆ ಅವರು ಆಳಂದ ಉಪ ವಿಭಾಗದಲ್ಲಿ ಕೆಲಸ ಮಾಡಿದ್ದರು. ಸದ್ಯ ರಾಯಚೂರು ಜಿಲ್ಲೆಯ ಲಿಂಗಸೂಗುರು ಪೊಲೀಸ್ ಉಪಾಧೀಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂ ಟೂತ್ ಬಳಸಿ ಅಕ್ರಮ ನಡೆಸಿದ ಕಿಂಗ್‌ಪಿನ್ ಅಗಿರುವ ಆರ್.ಡಿ.ಪಾಟೀಲ್ ಆಪ್ತರು ಎನ್ನಲಾಗಿದೆ.
ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನು ಸಿಐಡಿ ಅಧಿಕಾರಿಗಳು ನಗರದ ಐವಾನ್-ಇ-ಶಾಹಿಯಲ್ಲಿರುವ ಕ್ಯಾಂಪ್ ಕಚೇರಿಗೆ ಕರೆದುಕೊಂಡು ಬಂದಿದ್ದು ಸಿಐಡಿ ಅಧಿಕಾರಿಗಳು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ : ಸಾಹಾಗೆ ಬೆದರಿಕೆಯೊಡ್ಡಿದ ಪತ್ರಕರ್ತ ಮಜುಂದಾರ್ ಗೆ 2 ವರ್ಷ ನಿಷೇಧ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.