ಬೇಡವಾದ ಮಗು ಮಮತೆ ತೊಟ್ಟಿಲಿಗೆ ಹಾಕಿ
Team Udayavani, Jan 7, 2019, 5:21 AM IST
ಕಲಬುರಗಿ: ಬೇಡವಾದ ಮಕ್ಕಳನ್ನು ಮುಳ್ಳು ಕಂಟೆಗಳಲ್ಲಿಯೋ, ಕಸದ ತಿಪ್ಪೆಗಳಲ್ಲಿಯೋ, ಬಯಲು ಪ್ರದೇಶಗಳಲ್ಲಿಯೋ ಮುಂತಾದ ಅಸುರಕ್ಷಿತ ಪ್ರದೇಶಗಳಲ್ಲಿ ಬೀಸಾಕದೆ ಮಮತೆ ತೊಟ್ಟಿಲಿಗೆ ಹಾಕುವ ಮೂಲಕ ಆ ಮಗುವಿನ ಪಾಲನೆ, ಪೋಷಣೆಗೆ ಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಹೇಳಿದರು.
ನಗರದ ಹೊರವಲಯದ ನಾಗನಳ್ಳಿ ರಸ್ತೆಯಲ್ಲಿನ ಕೋರಂಟಿ ಹನುಮಾನ ದೇವಸ್ಥಾನದ ಬಳಿ ಇರುವ ಡಾನ್ ಭಾಸ್ಕೋ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಮತೆ ತೊಟ್ಟಿಲು ಉದ್ಘಾಟಿಸಿ ಮಾತನಾಡಿದ ಅವರು, ಮಗುವನ್ನು ಎಲ್ಲೆಂದರಲ್ಲಿ ಎಸೆದು ಹೋದ ಘಟನೆಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಇಂತಹ ಘಟನೆಗಳು ಕಳವಳಕಾರಿಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಗುವು ವಿವಿಧ ಕಾರಣಗಳಿಗಾಗಿ ಪಾಲಕರಿಗೆ ಬೇಡವಾದರೂ ಆ ಮಗುವಿನ ರಕ್ಷಣೆಗೆ ಮುಂದಾಗಬೇಕು. ಆ ಹಿನ್ನೆಲೆಯಲ್ಲಿ
ನಿಸ್ಸಂಕೋಚವಾಗಿ ಮಮತೆ ತೊಟ್ಟಿಲಿಗೆ ಹಾಕಿದರೆ ಅದರಿಂದ ಆ ಮಗು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮರಾಯ್ ಕಣ್ಣೂರ್ ಮಾತನಾಡಿ, ನಗರದ ರೈಲು ನಿಲ್ದಾಣ, ಆಳಂದ ರಸ್ತೆಯಲ್ಲಿರುವ ಅಮೂಲ್ಯ ಶಿಶುಗೃಹ, ಪ್ರಗತಿ ಕಾಲೋನಿಯಲ್ಲಿನ ಸರ್ಕಾರಿ ಬಾಲಕರ ಬಾಲ ಮಂದಿರದ ಎದುರು ಮಮತೆ ತೊಟ್ಟಿಲು ಹಾಕಲಾಗಿದೆ. ಅಗತ್ಯ ಇರುವ ಕಡೆ ಇಂತಹ ತೊಟ್ಟಿಲುಗಳನ್ನು ಹಾಕಲಾಗುವುದು.
ಜತೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ, ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆಯೂ ಮಮತೆ ತೊಟ್ಟಿಲು ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ರೀನಾ ರಸ್ಮಿ ಡಿಸೋಜಾ, ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ಗೀತಾ ಸಜ್ಜನಶೆಟ್ಟಿ, ಡಾನ್ ಭಾಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಸಜ್ಜಿತ್ ಜಾರ್ಜ್, ಸುಧಾ ಪಾಳಾ, ಕಾನೂನು ಸಲಹೆಗಾರ
ಭರತೇಶ ಶೀಲವಂತ, ಮಕ್ಕಳ ಸಹಾಯವಾಣಿ ನೋಡಲ್ ಅಧಿಕಾರಿ ಬಸವರಾಜ ಟೆಂಗಳಿ, ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.