‘ರಾಹುಲ್ ಗಾಂಧಿ ಪ್ರಧಾನಿ: ಅದೊಂದು ತಿರುಕನ ಕನಸು’
Team Udayavani, May 14, 2019, 4:39 PM IST
ಚಿಂಚೋಳಿ: ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಾಬುರಾವ ಚವ್ಹಾಣ ಮಾತನಾಡಿದರು.
ಚಿಂಚೋಳಿ: ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ನರೇಂದ್ರ ಮೋದಿ ಮತ್ತೆ ದೇಶದ ಎರಡನೇ ಸಲ ಪ್ರಧಾನ ಮಂತ್ರಿಗಳಾಗಲಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಆಗುವುದಿಲ್ಲ. ಅದೊಂದು ತಿರುಕನ ಕನಸು ಆಗಿದೆ. ನಮ್ಮ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ಕಾಲ ಸನ್ನಿತವಾಗಿದೆ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಿ ಗಂಗಾಮತ ಸಮಾಜ ಭೀಷ್ಮನ ಕುಲದವರು. ವೀರ ಶೂರರು ಆಗಿದ್ದಾರೆ. ಆದರೆ ಹೇಡಿಗಳಲ್ಲ. ಅಲ್ಲದೇ ಓಡಿ ಹೋಗುವವರಲ್ಲ. ಅಂಬಿಗರು ಹೊಳೆ ದಾಟಿಸುವವರು ನಾವು. ಆದರೆ ಜನರನ್ನು ಮುಳುಗಿಸುವವರು ಅಲ್ಲ. ದೋಣಿಯನ್ನು ನಡು ನೀರಿನಲ್ಲಿ ಬಿಡುವುದಿಲ್ಲ, ದಡ ಮುಟ್ಟಿಸುವುದು ನಮ್ಮ ಕೋಲಿ ಸಮಾಜ ಆಗಿದೆ. ಕಳೆದ ಎರಡು ವರ್ಷಗಳಿಂದ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವಂತೆ ಅನೇಕ ಹೋರಾಟ ನಡೆಸಲಾಗಿದೆ. ನಾನೊಬ್ಬ ಶಾಸಕನಾದರು ಸಹ ಕಲಬುರಗಿ ನಗರದ ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉರುಳು ಸೇವೆ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಮ್ಮ ಸಮಾಜ ನೆನಪಿಗೆ ಬರಲಿಲ್ಲವೇನು?. ಮಾನವೀಯತೆ ದೃಷ್ಟಿಯಿಂದ ನಮ್ಮನ್ನು ಮಾತನಾಡಿಸಲಿಲ್ಲ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಕೋಲಿ ಗಂಗಾಮತವನ್ನು ಎಸ್‌ಟಿಗೆ ಸೇರಿಸುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಮಂತ್ರಿಗಿರಿ ನನಗೇನು ಭಿಕ್ಷೆ ಕೊಟ್ಟಿಲ್ಲ. ಅದು ಕೋಲಿ ಸಮಾಜದ ಹಕ್ಕು ಸಿಕ್ಕಿದೆ. ಕೋಲಿ ಸಮಾಜದ ಹಕ್ಕು ಕಸಿದುಕೊಂಡು ಡಾ| ಮಲ್ಲಿಕಾರ್ಜುನ ಖರ್ಗೆ ಅವರು ತನ್ನ ಮಗನಿಗೆ ಸಚಿವ ಸ್ಥಾನ ಕೊಡಿಸಿದ್ದಾರೆ. ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುತ್ತೇವೆ ಎಂಬ ಹೇಳಿಕೆ ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದೆ ಎಂದು ಆರೋಪಿಸಿದರು. ಕೋಲಿ ಸಮಾಜದ ಕಾರ್ಯದರ್ಶಿ ಲಕ್ಷ್ತ್ರಣ ಆವಂಟಿ, ಶರಣಪ್ಪ ತಳವಾರ, ರವಿಕುಮಾರ ಹುಸೇಬಾಯಿ, ಪಿಡಪ್ಪ ಜಾಲಗಾರ, ರಾಮಲಿಂಗ ನಾಟೀಕಾರ, ಕಾಶಿನಾಥ ನಾಟೀಕಾರ, ಜಗನ್ನಾಥ ನಾಟೀಕಾರ, ಬಸವರಾಜ ನಾಟೀಕಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.