ಜಾನಪದ ಸಾಹಿತ್ಯದ ಅಗತ್ಯ ಈಗಲೇ ಹೆಚ್ಚು
Team Udayavani, Feb 7, 2020, 12:14 PM IST
ಕಲಬುರ್ಗಿ: ಮೌಲ್ಯಗಳು ಅಪಮೌಲ್ಯಗಳಾಗುತ್ತಿರುವ ಸಂದರ್ಭದಲ್ಲಿ ಜನಪದ ಸಾಹಿತ್ಯ ಎಂದಿಗಿಂತ ಹೆಚ್ಚು ಅವಶ್ಯಕವಾಗಿದೆ ಎಂದು ಡಾ. ಶೈಲಜಾ ಬಾಗೇವಾಡಿ ಹೇಳಿದರು.
ಸಮ್ಮೇಳನದ ದ್ವಿತೀಯದಿನ ನಡೆದ ಜಾನಪದ ಜಗತ್ತು ಗೋಷ್ಠಿಯಲ್ಲಿ ಜಾನಪದ ಸಾಹಿತ್ಯದ ವಿಷಯದ ಕುರಿತು ಮಾತನಾಡಿದರು. ಜಾಗತೀಕರಣದ ಯುಗದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಮಾನವೀಯ ಮೌಲ್ಯಗಳು, ಜೀವನ ಪದ್ಧತಿ, ರೀತಿ-ನೀತಿ ಪ್ರತಿಪಾದಿಸುವ ಜಾನಪದ ಸಾಹಿತ್ಯ ಹೆಚ್ಚು ಅವಶ್ಯಕವೆನಿಸುತ್ತದೆ ಎಂದರು. ಜಾನಪದ ಸಾಹಿತ್ಯದಲ್ಲಿನ
ಜೀವನಮೌಲ್ಯ ಶಿಷ್ಟ ಸಾಹಿತ್ಯದಲ್ಲಿ ಸಿಗಲಾರದು.
ಅನುಭವಾಮೃತವೇ ಇದಕ್ಕೆ ಕಾರಣವಾಗಿದೆ. ಜಾನಪದ ಸಾಹಿತ್ಯದಲ್ಲಿ ವೈಯಕ್ತಿಕ ಮೌಲ್ಯಕ್ಕಿಂತ, ಸಾಮಾಜಿಕ ಮೌಲ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಜಾನಪದವು ಹೃದಯದಿಂದ ಹೃದಯಕ್ಕೆ ಹರಿಯುವ ಜೀವದ್ರವ್ಯವಾಗಿದೆ. ಬದುಕಿನ ರಸಾನುಭವ ಇದರಲ್ಲಿದೆ. ಅದರೂ ಕೆಲವರು ಜಾನಪದ ಸಾಹಿತ್ಯವನ್ನು ಲಘುವಾಗಿ ಪರಿಗಣಿಸುತ್ತಿರುವುದು ದುರ್ದೈವದ ಸಂಗತಿ. ಜನವಾಣಿ ಬೇರು, ಕವಿವಾಣಿ ಹೂವು ಎಂದು ಹಿರಿಯ ಕವಿಗಳೇ ಹೇಳಿದ್ದನ್ನು ಸ್ಮರಿಸಿಕೊಳ್ಳುವುದು ಸೂಕ್ತವಾಗಿದೆ ಎಂದರು. ಡಾ.ರಾಜಶ್ರೀ ಜಾನಪದ ಹಾಗೂ ಸಮಕಾಲೀನತೆ ಕುರಿತು ಮಾತನಾಡಿ, ಪ್ರಸ್ತುತ ಜಾನಪದ ಲಿಖೀತ ರೂಪದಲ್ಲಿ ಮಾತ್ರವಲ್ಲ, ಆದು ನಾಗರಿಕ ಹಾಗೂ ಜಾಗತಿಕ ನೆಲೆಯಲ್ಲಿ ವಿಸ್ತರಿತಗೊಂಡಿದೆ.
ಜಾನಪದವನ್ನು ಅಧ್ಯಯನ ಶಿಸ್ತಾಗಿ ಬೆಳೆಸಲಾಗುತ್ತಿದೆ. ಇದು ಪರಿಶೀಲನೆಯ ಹೊಸ ವಿಷಯವಾಗಿ ರೂಪಗೊಂಡಿದೆ ಎಂದರು. ಡಾ.ಹಣಮಂತರಾವ ದೊಡ್ಡಮನಿ ಜಾನಪದ ಕಲೆಗಳು ಕುರಿತು ಮಾತನಾಡಿ, ಬಾಯಿಯಿಂದ ಕಿವಿಗೆ ಕಂಠಸ್ಥವಾಗಿ ಬಂದ ಸಾಹಿತ್ಯವೇ ಜಾನಪದ. ಮಾನವರಲ್ಲಿ ಮಾನವೀಯ ಮೌಲ್ಯಗಳು ಅರಂಭಗೊಂಡಂದಿನಿಂದ ಜಾನಪದ ಅರಂಭಗೊಂಡಿದೆ. ಜಾಗತೀಕರಣದ ಯುಗದಲ್ಲಿ ಯಂತ್ರಗಳಿಂದಾಗಿ ಜಾನಪದ ಹಾಡುಗಳು ಮಾಯವಾಗುತ್ತಿವೆ. 10-15 ದಿನಗಳ ಕಾಲ ನಡೆಯುತ್ತಿದ್ದ ಮದುವೆಗಳು ಕೆಲ ಗಂಟೆಗಳಿಗೆ ಸೀಮಿತಗೊಳ್ಳುತ್ತಿರುವುದರಿಂದ ಜಾನಪದಕ್ಕೆ ಆಚರಣೆಗಳಲ್ಲಿ ಸ್ಥಾನ ಇಲ್ಲವಾಗಿದೆ.
ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ ತತ್ವಪದಗಳಿಂದ ಜಾನಪದವನ್ನು ಜನರಿಗೆ ಮುಟ್ಟಿಸುವ ಪ್ರಮುಖ ಕಾರ್ಯ ಮಾಡಿದರು ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬಿ.ಆರ್. ಪೊಲೀಸ್ ಪಾಟೀಲ, ಬಯಲಾಟ ಹಾಗೂ ಯಕ್ಷಗಾನ ಕುರಿತು ಮಾತನಾಡಿ, ಮಕ್ಕಳ ಕೈಗೆ ಮೊಬೈಲ್ ಬದಲಿಗೆ ಜಾನಪದ ಸಾಹಿತ್ಯವನ್ನು ನೀಡುವ ಅವಶ್ಯಕತೆಯಿದೆ. ಇದೇ ಸಂದರ್ಭದಲ್ಲಿ ಅಪ್ಪಟ ಜಾನಪದ ಹಾಡುಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಹೆಚ್ಚು ಜನರಿಗೆ ಮುಟ್ಟಿಸಬೇಕು. ಜಾನಪದ ಸಾಹಿತ್ಯವನ್ನು ಓದಿದರೆ ಸಾಲದು, ಅದನ್ನು ಅನ್ವಯಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ, ಉತ್ತರ ಕನ್ನಡದವರು ಯಕ್ಷಗಾನ ಬೆಳೆಸಿದಂತೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದವರು ದೊಡ್ಡಾಟ, ಸಣ್ಣಾಟ ಬೆಳೆಸಬೇಕು. ನಮ್ಮ ಕಲೆಗಳನ್ನು ಪೋತ್ಸಾಹಿಸಬೇಕು ಎಂದರು.
ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.