ಅತಿವೃಷ್ಟಿಗೆ ಬಸವಳಿದ ಯಡ್ರಾಮಿ ಅನ್ನದಾತ
Team Udayavani, Oct 10, 2020, 4:47 PM IST
ಯಡ್ರಾಮಿ: ತಾಲೂಕಿನೆಲ್ಲೆಡೆ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಬೆಳೆಗಳುಸಂಪೂರ್ಣ ಹಾಳಾಗಿದ್ದು, ಕೈಗೆ ಬಂದ ತುತ್ತುಬಾಯಿಗೆ ಬರದಂತಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬಿಟ್ಟುಬಿಡದೆ ಬಿದ್ದ ವ್ಯಾಪಕ ಮಳೆ ರೈತರನ್ನು ನಿಜಕ್ಕೂಕಂಗಾಲಾಗಿಸಿದೆ.
ತಾಲೂಕಿನಲ್ಲಿ ಶೇ.98ರಷ್ಟು ಬಿತ್ತನೆಯಾಗಿ ಭತ್ತ, ಕಬ್ಬು, ತೊಗರಿ, ಹತ್ತಿ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದವು. ಆದರೆ, ವರುಣನ ಆರ್ಭಟಕ್ಕೆಹೂವು, ಕಾಯಿಗಳನ್ನು ಹೊತ್ತುಕೊಂಡು ನಿಂತಿದ್ದ ಹತ್ತಿ ಬೆಳೆ ಕೆಂಪು ರೋಗಕ್ಕೆ ತುತ್ತಾಗಿ, ಹೂವು ಉದುರಿ ಬಿದ್ದವೆ. ಮೈ ಬಿಚ್ಚಿ ಹತ್ತಿ ಕೊಡುವ ಹಂತದಲ್ಲಿದ್ದ ಕಾಯಿಗಳು ಕೊಳೆತು ಹೋಗಿವೆ.ಹೆಚ್ಚಿನ ಪ್ರಮಾಣದ ಮಳೆಯಿಂದ ಭೂಮಿಯಲ್ಲಿನೀರು ನಿಂತು ತೊಗರಿ ಬೆಳೆ ಒಣಗುತ್ತಿವೆ. ಪ್ರತಿಎಕರೆಗೆ ಹತ್ತಿ 15-18 ಕ್ವಿಂಟಲ್ ನಿರೀಕ್ಷೆಯಿತ್ತು.ಆದರೆ ಸದ್ಯ 6-8 ಕ್ವಿಂಟಲ್ ಬರುವುದೇ ಕಷ್ಟ. ಪ್ರತಿ ಎಕರೆಗೆ ತೊಗರಿ 6-8 ಕ್ವಿಂಟಲ್ ಬರುವುದೆಂದರೆ,ಪ್ರಸ್ತುತ ಪರಿಸ್ಥಿತಿಯಲ್ಲಿ 2-3 ಕ್ವಿಂಟಲ್ ಬರುವುದೇಅನುಮಾನವಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೊನ್ನೆಯಷ್ಟೆ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿರುವ ಎರಡು ತಾಲೂಕುಗಳಲ್ಲಿ ಯಡ್ರಾಮಿಯುಒಂದಾಗಿದೆ. ಬರದಿಂದ ನರಳಾಡುತ್ತಿರುವ ತಾಲೂಕಿನ ರೈತರ ಈ ಸಂಕಷ್ಟಕ್ಕೆ ತುರ್ತುಪರಿಹಾರದ ಅಗತ್ಯವಂತೂ ಇದೆ. ಈ ನಿಟ್ಟಿನಲ್ಲಿಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಿಸಿ,ಪ್ರತಿ ಕ್ವಿಂಟಲ್ ಹತ್ತಿಗೆ 8 ಸಾವಿರ ರೂ., ಕ್ವಿಂಟಲ್‌ತೊಗರಿಗೆ 10 ಸಾವಿರ ರೂ. ನಿಗದಿ ಮಾಡಿಖರೀದಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಮಂಡಳಿಯಾಗಲಿ, ರಾಜ್ಯ ಸರ್ಕಾರವಾಗಲಿಕೂಡಲೇ ಮುಂದಾಗಬೇಕಾಗಿದೆ. ಹೀಗಾದರೆ ಈಭಾಗದ ರೈತರು ಕೋವಿಡ್ ಹಾಗೂ ಅತಿವೃಷ್ಟಿಯಸಂಕಷ್ಟದ ಸ್ಥಿತಿ ಎದುರಿಸಿ, ತಕ್ಕಮಟ್ಟಿನ ಸಮಾಧಾನ ಹೊಂದಬಹುದು
ಈ ವರ್ಷ ಮೊದಲೇ ಕೋವಿಡ್ ಬಂದು ಹೈರಾಣು ಮಾಡಿದೆ. ಹೋದ ತಿಂಗಳು ಹತ್ತಿದ ಮಳೆಯಿಂದ ಹತ್ತಿ, ತೊಗರಿ ಹಾಳಾಗಿವೆ.ಸಾಕಷ್ಟು ಸರ್ಕಾರಿ ಗೊಬ್ಬರ, ಔಷಧಕ್ಕೆ ಖರ್ಚುಮಾಡಿದ್ದು ವ್ಯರ್ಥವಾಯಿತು. ನಮ್ಮ ಜೀವನವೇ ಇಷ್ಟೇ ಎನ್ನುವಂತಾಗಿದೆ. ನಮ್ಮ ಗೋಳು ಕೇಳುವರ್ಯಾರಿಲ್ಲ. –ರಾಜೇಸಾಬ ಮನಿಯಾರ, ಮಳ್ಳಿ ರೈತ
ಬೆಳೆ ನಷ್ಟದ ಬಗ್ಗೆ ಶೀಘ್ರವಾಗಿ ಸರ್ಕಾರ ಪರಿಹಾರ ನೀಡಿ ರೈತರ ಜೀವ ಕಾಯಬೇಕಾಗಿದೆ. ಬರೀ ಬೆಳೆಗಳ ಸಮೀಕ್ಷೆ, ಪರಿಶೀಲನೆಯ ನೆಪದಲ್ಲಿ ಹೊತ್ತು ಕಳೆಯುವ ಬದಲು ರೈತರ ಸಂಕಷ್ಟಕ್ಕೆ ಕೂಡಲೇ ಧಾವಿಸಬೇಕು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತಪರ ಅಭಿವೃದ್ಧಿ ಕುರಿತು ಗಂಭೀರ ಚಿಂತನೆ ಇದೆ.-ಕೇಶುರಾಯಗೌಡ ಮಾಲೀಪಾಟೀಲ, ಪ್ರಗತಿಪರ ರೈತ
-ಸಂತೋಷ ಬಿ. ನವಲಗುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: ಪೊಲೀಸರಿಂದ 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, ಎರಡು ಕಾರು ವಶಕ್ಕೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.