ರೈತರ ಮೊಗದಲ್ಲಿ ಹರ್ಷ ತಂದ ವರ್ಷ; ಚುರುಕುಗೊಂಡ ಬಿತ್ತನೆ ಕಾರ್ಯ
ತಿಂಗಳ ಬಳಿಕ ಅಬ್ಬರಿಸುತ್ತಿದೆ ಮಳೆ; ಶೇ.97 ಬಿತ್ತನೆ ಪೂರ್ಣ
Team Udayavani, Jul 23, 2020, 2:33 PM IST
ಸಾಂದರ್ಭಿಕ ಚಿತ್ರ
ಅಫಜಲಪುರ: ಆರಂಭದಲ್ಲಿ ಮುಂಗಾರು ಮಳೆ ಅಬ್ಬರಿಸಲಿಲ್ಲ. ಮಳೆಗಾಲ ಆರಂಭವಾಗಿ ಒಂದು ತಿಂಗಳ ಬಳಿಕ ಮುಂಗಾರು ಮಳೆ ಅಬ್ಬರಿಸಲು ಶುರುಮಾಡಿದೆ. ಹೀಗಾಗಿ ಕುಂಟಿತಗೊಂಡಿದ್ದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ತಾಲೂಕಿನಾದ್ಯಂತ ಮುಂಗಾರು ಹಂಗಾಮಿನ ಬಿತ್ತನೆಯನ್ನು ರೈತರು ಜೋರಾಗಿ ನಡೆಸಿದ್ದಾರೆ. ಕಳೆದ ಒಂದು ತಿಂಗಳಿಂದ ಬಿತ್ತನೆ ಕಾರ್ಯಾ ಕುಂಟಿತವಾಗಿತ್ತು. ಅಲ್ಲದೆ ಮಳೆ ಬರುವ ನಿರೀಕ್ಷೆ ಇಲ್ಲದಂತಾಗಿ ರೈತರು ಚಿಂತೆಯಲ್ಲಿ ತೊಡಗಿದ್ದರು. ಈಗ ಮತ್ತೆ ಮಳೆ ಅಬ್ಬರಿಸಲು ಶುರು ಮಾಡಿದ್ದರಿಂದ ಮತ್ತೆ ರೈತಾಪಿ ಜನ ತಮ್ಮ ಕುಂಟೆ, ರಂಟೆಗಳಿಗೆ ಕೆಲಸ ಕೊಟ್ಟಿದ್ದಾರೆ. ಮತ್ತೆ ಹೊಲದ ಕಡೆ ಮುಖ ಮಾಡಿದ್ದು, ಭೂ ತಾಯಿಗೆ ಬೀಜ ಹಾಕಲು ಆರಂಭಿಸಿದ್ದಾರೆ.
ಬಿತ್ತನೆ ಕ್ಷೇತ್ರ: 99,850 ಹೇಕ್ಟೆರ್ ಪ್ರದೇಶ ತಾಲೂಕಿನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ ಈಗಾಗಲೇ 96,771 ಹೇಕ್ಟೆರ್ ಬಿತ್ತನೆಯಾಗಿದೆ. ಒಟ್ಟು 97 ಪ್ರತಿಶತದಷ್ಟು ಬಿತ್ತನೆಯಾಗಿದೆ. ಇನ್ನೂಳಿದ ಪ್ರದೇಶವು ಕೂಡ ಬಿತ್ತನೆಯಾಗಲಿದೆ. ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಎಲ್ಲಾ ಕಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಕೆರೆ, ಹಳ್ಳ-ಕೊಳ್ಳ ಭರ್ತಿ?: ಮುಂಗಾರು ಹಂಗಾಮಿನ ಮಳೆಗಳು ಉತ್ತಮವಾಗಿ ಸುರಿಯುತ್ತಿದ್ದು ತಾಲೂಕಿನಾದ್ಯಂತ ಕೆರೆ, ಹಳ್ಳ-ಕೊಳ್ಳಗಳು ಭರ್ತಿಯಾಗುತ್ತಿವೆ. ಹೀಗಾಗಿ ಮುಂಬರುವ ಬೇಸಿಗೆಯಲ್ಲಿ ನೀರಿನ ಅಭಾವ ಕಾಡುವುದಿಲ್ಲ. ಅಂತರ್ಜಲ ಮಟ್ಟ ಹೆಚ್ಚಲು, ದನ ಕರುಗಳಿಗೆ, ಕುಡಿಯುವ ನೀರಿಗೆ ಸಮಸ್ಯೆ ಕಾಡುವುದಿಲ್ಲ ಎಂದು ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.