![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 4, 2019, 10:39 AM IST
ಕಲಬುರಗಿ: ನಗರದಲ್ಲಿ ಸುರಿಯುತ್ತಿದ್ದ ಮಳೆಯಲ್ಲೇ ವಿದ್ಯಾರ್ಥಿನಿಯರು ನಡೆದುಕೊಂಡು ಹೋದರು.
ಕಲಬುರಗಿ: ಸೂರ್ಯ ನಗರಿ ಖ್ಯಾತಿಯ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು ನಾಗರಿಕಲ್ಲಿ ಸಂತಸ ಮನೆ ಮಾಡಿದ್ದು, ಜಿಲ್ಲಾದ್ಯಂತ ತಂಪಿನ ವಾತಾವರಣ ನಿರ್ಮಾಣವಾಗಿದೆ.
ಕಳೆದ ಮೂರು ವರ್ಷಗಳಿಂದ ಸತತವಾಗಿ ಮಳೆ ಅಭಾವದಿಂದ ಜಿಲ್ಲೆಯಿಡಿ ಬರಗಾಲಕ್ಕೆ ತುತ್ತಾಗಿ ಜನತೆ ನಲುಗುವಂತೆ ಆಗಿತ್ತು. ಪ್ರಸಕ್ತ ಮುಂಗಾರು ಆರಂಭವಾಗಿ ಎರಡು ತಿಂಗಳಾಗಿದ್ದರೂ ಮಳೆಯಾಗದೆ ನಾಗರಿಕರಲ್ಲಿ ಮತ್ತೆ ಬರಗಾಲದ ಭೀತಿ ಹುಟ್ಟಿಸಿತ್ತು. ಆಗಾಗ್ಗೆ ಬಿದ್ದ ಅಲ್ಪ-ಸಲ್ವ ಮಳೆ ಆಶ್ರಯದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.
ಶುಭ ಶ್ರಾವಣ: ಆಷಾಢ ಕಳೆದು ಶ್ರಾವಣ ಮಾಸ ಆರಂಭ ವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮಳೆ ಕೃಪೆ ತೋರಿದ್ದಾನೆ. ಕಳೆದ ಮಂಗಳವಾರ, ಬುಧವಾರ ಜಿಟಿಜಿಟಿ ಮಳೆಯಾಗಿತ್ತು. ಶ್ರಾವಣ ಅಮವಾಸ್ಯೆ ದಿನದಂದು ಗುರುವಾರದಿಂದ ತೀವ್ರಗೊಂಡಿರುವ ವರುಣ ಜಿಲ್ಲಾದ್ಯಂತ ಉತ್ತಮವಾಗಿ ಸುರಿಯಲು ಆರಂಭಿಸಿದೆ.
ಗುರುವಾರ 19 ಮಿಲಿ ಮೀಟರ್ ಮಳೆಯಾಗಿದ್ದರೆ, ಶುಕ್ರವಾರ 17 ಎಂಎಂ ಮಳೆ ಸುರಿದಿದೆ. ಶನಿವಾರ ದಿನವಿಡೀ ಮಳೆ ಸುರಿದಿದ್ದು, ಜಿಲ್ಲಾದ್ಯಂತ ಮೂರು ದಿನಗಳಲ್ಲಿ 33 ಎಂಎಂ ಮಳೆಯಾಗಿದೆ. ಇದರಿಂದ ತೊಗರಿ, ಹೆಸರು, ಸೂರ್ಯಕಾಂತಿ, ಹತ್ತಿ, ಅಲಸಂದಿ ಬೆಳೆ ನಳನಳಿಸುವಂತೆ ಆಗಿದೆ. ಜತೆಗೆ ಚಳಿಯೂ ಹೆಚ್ಚಿದೆ. ಜನತೆ ಸ್ವೆಟರ್, ಜರ್ಕಿನ್ ಖರೀದಿಯಲ್ಲಿ ತೊಡಗಿದ್ದಾರೆ.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.