ಭಕ್ತರಿಂದ ರಾಮತೀರ್ಥ ಶಿವಲಿಂಗ ದರ್ಶನ
Team Udayavani, Feb 25, 2017, 3:11 PM IST
ಕಲಬುರಗಿ: ಮಹಾಶಿವರಾತ್ರಿ ನಿಮಿತ್ತ ಶುಕ್ರವಾರ ನಗರದ ಹೊರವಲಯದಲ್ಲಿನ ಆಳಂದ ರಸ್ತೆಯಲ್ಲಿನ ರಾಮತೀರ್ಥಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಹೂವಿನಿಂದ ಅಲಂಕರಿಸಿದ ಶಿವಲಿಂಗ ದರ್ಶನ ಪಡೆದರು.
ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ನಗರ, ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಿಂದ ರಾಮತೀರ್ಥಕ್ಕೆ ಆಗಮಿಸಿದ್ದರು. ಪುರುಷರು ಹಾಗೂ ಮಹಿಳೆಯರಿಗಾಗಿ ಶಿವಲಿಂಗ ದರ್ಶನ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಬಂದ ಭಕ್ತರಿಗೆ ಶಿವನ ಚಿತ್ರ, ದ್ರಾಕ್ಷಿ, ಜೂರಿ ಕೊಟ್ಟು ಸತ್ಕರಿಸಲಾಯಿತು. ಶಿವರಾತ್ರಿಯಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ತೆಂಗು, ಕರ್ಪೂರ, ಊದಿನಕಡ್ಡಿ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಮಳಿಗೆಗಳನ್ನು ಹಾಕಲಾಗಿತ್ತು. ರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು.
ಅಮೃತ ಸರೋವರದಲ್ಲಿ ಮಹಾಶಿವರಾತ್ರಿ
ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಂಗಳದಲ್ಲಿ ನಿರ್ಮಾಣಗೊಂಡ ಅಮೃತ ಸರೋವರದಲ್ಲಿ ಸ್ಥಾಪಿಸಿರುವ ಬೃಹತ್ ಗಾತ್ರದ ಶಿವಲಿಂಗವನ್ನು ಸಾವಿರಾರು ಭಕ್ತರು ಶಿವರಾತ್ರಿ ನಿಮಿತ್ತ ಶುಕ್ರವಾರ ದರ್ಶನ ಮಾಡಿದರು.
ಅಮೃತ ಸರೋವರದಲ್ಲಿ ವಿವಿಧ ರೀತಿಯ ಶಿವಲಿಂಗ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಕೇದಾರನಾಥ, ಸೋಮನಾಥ ದೇವಾಲಯದ ಶಿವಲಿಂಗ ದರ್ಶನದ ಪ್ರತಿರೂಪ ವ್ಯವಸ್ಥೆಯನ್ನು ಭಕ್ತರು ದರ್ಶಿಸಿದರು.
ಇನ್ನು ಕೆಲ ಶಿವಲಿಂಗಗಳನ್ನು ವಿವಿಧ ಹಣ್ಣುಗಳ ಮೂಲಕ, ಹೂವುಗಳ ಮೂಲಕ, ಅನೇಕ ರೀತಿಯ ಬೇಳೆಕಾಳುಗಳ ಮೂಲಕ, ವಜ್ರ ಹಾಗೂ ಬೆಳ್ಳಿಯ ಪ್ರತಿರೂಪದಲ್ಲಿ ಅಲಂಕರಿಸಲಾಗಿತ್ತು. ಇನ್ನು ಕೆಲವು ಶಿವಲಿಂಗಗಳನ್ನು ವೀಳ್ಯದೆಲೆ, ಬಾಣದ ಬುತ್ತಿ ಹಾಗೂ ರುದ್ರಾಕ್ಷಿಗಳಿಂದ ಸಿಂಗರಿಸಲಾಗಿತ್ತು. ಶಿವಲಿಂಗದ ಕುರಿತು ಬ್ರಹ್ಮಕುಮಾರಿಯರು ಮಾಹಿತಿ ಒದಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
Chittapur: ತಾಯಿಯನ್ನೇ ಕೊ*ಲೆಗೈದ ಮಗ: ಆರೋಪಿಯ ಬಂಧನ
MUST WATCH
ಹೊಸ ಸೇರ್ಪಡೆ
Lucknow: ಹೊಟೇಲ್ ಬಳಿಕ 7 ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ
Jammu: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋದರ, ಬಿಜೆಪಿ ಶಾಸಕ ದೇವೇಂದ್ರ ಸಿಂಗ್ ರಾಣಾ ನಿಧನ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.