ರಾಮಾಯಣ ಅಧ್ಯಯನ: ಏಳು ಪ್ರಬಂಧ ಮಂಡನೆ
Team Udayavani, Sep 9, 2018, 12:04 PM IST
ಕಲಬುರಗಿ: ನಗರದ ಬ್ರಹ್ಮಪುರ ಉತ್ತರಾದಿ ಮಠದಂಗಳದಲ್ಲಿ ನಡೆದ ರಾಷ್ಟ್ರೀಯ ವೈಚಾರಿಕ ವಿದ್ವದೊಷ್ಠಿಯಲ್ಲಿ ರಾಮಾಯಣ ಅಧ್ಯಯನಸ್ಯ ಸಾರ್ವಕಾಲಿಕತ್ವ ವಿಷಯವಾಗಿ ಉತ್ತರಾದಿ ಮಠದ ಸತ್ಯಾತ್ಮತೀರ್ಥರ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ವಿದ್ವಾಂಸರ ಚಿಂತನ ಮಂಥನ ತ್ರೇತಾಯುಗದ ರಾಮಾಯಣ ಇಂದಿಗೂ ಸಾಮಾಜಿಕ ಸಮಸ್ಯೆ ನಿವಾರಣೆಗೆ ಅದ್ಹೇಗೆ ರಾಮಬಾಣ ಆಗುತ್ತದೆ ಎನ್ನುವ ವಿಷಯದ ಕುರಿತು ಚರ್ಚೆಗಳಿಗೆ ವೇದಿಕೆಯಾಯ್ತು.
ಶ್ರೀ ಸತ್ಯಪ್ರಮೋದತೀರ್ಥ ಜನ್ಮಶತಮಾನೋತ್ಸವ ಸಮಿತಿ, ದಿ. ಪಂ. ವಾದಿರಾಜಾಚಾರ್ಯ ಅಗ್ನಿಹೋತ್ರಿ ಜನ್ಮಶತಮಾನೋತ್ಸವ ಸಮಿತಿ, ನೂತನ ವಿದ್ಯಾಲಯ ಪದವಿ ವಿದ್ಯಾಲಯ, ಸ್ಥಳೀಯ ಕಲಬುರಗಿ ಚಾತುರ್ಮಾಸ್ಯ ಸಮಿತಿ ಸಹಯೋಗದಲ್ಲಿ ನಡೆದ ವಿದ್ವದೊಷ್ಠಿಯಲ್ಲಿ ಪಾಲ್ಗೊಂಡಿದ್ದ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ವಿದ್ವಾಂಸರಿಂದ ಏಳು ಸಂಶೋಧನಾತ್ಮಕ ಪ್ರಬಂಧಗಳ ಮಂಡನೆಯಾದವು.
ರಾಮಾಯಣ ಇಂದಿಗೂ ಸಾಮಾಜಿಕ ಸಮಸ್ಯೆಗಳಿಗೆ ಅದ್ಹೇಗೆ ಸ್ಪಂದಿಸುತ್ತದೆ, ಸಮಸ್ಯೆಗಳ ನಿರ್ಮೂಲನೆಗೆ ಹೇಗೆ ರಾಮಾಯಣ ನೆರವಾಗುತ್ತದೆ ಎಂಬ ಚಿಂತನೆ ಗೋಷ್ಠಿ ನಡೆಯಿತು.
ಗೋಷ್ಠಿಯ ಸಾನ್ನಿಧ್ಯ ವಹಿಸಿದ್ದ ಉತ್ತರಾದಿ ಮಠಾಧಿಧೀಶ ಸತ್ಯಾತ್ಮತೀರ್ಥರು ರಾಮಾಯಣದ ಸೀತಾ- ರಾಮರು ಯಾವ ರೀತಿ ಆದರ್ಶ ತೋರಿಸಿಕೊಟ್ಟಿದ್ದಾರೆ ಎನ್ನುವುದನ್ನು ವಿವರಿಸುತ್ತ ಸಮಾಜದ ಉತ್ತಮ ಬದುಕಿಗೆ ರಾಮಾಯಣ
ದಿಕ್ಸೂಚಿಯಾಗಿದೆ. ಇದು ಭಗವಂತನ ಮಹಾ ಕಾರುಣ್ಯವೇ ಸರಿ ಎಂದು ವಿವರಿಸಿದರು.
ಶ್ರೀಪಾದಂಗಳವರು ರಾಮಾಯಣ ಗೋಷ್ಠಿಯಲ್ಲಿ ನೀಡಿದ ಪ್ರವಚನ, ಹಲವಾರು ಮಹತ್ವದ ವಿವರಣೆಗಳು, ದೃಷ್ಟಾಂತಗಳನ್ನು ಕೇಳಿದ ಪಂಡಿತ ಸಮೂಹ ಸಾಹಿತ್ಯಿಕ ಹಿನ್ನೆಲೆಯಲ್ಲಿ ಬಾಣಭಟ್ಟನ ವಾಗ್ಝರಿಯನ್ನೇ ನೆನಪಿಸುವಂತೆ
ಗುರುಗಳು ವಿವರಣೆ ನೀಡಿದರು ಎಂದು ತಮ್ಮ ಅನುಭವ ಹಂಚಿಕೊಂಡರು.
ಸಂಸ್ಕೃತದಲ್ಲೇ ನಡೆದ ರಾಮಾಯಣದ ಈ ಗೋಷ್ಠಿಯಲ್ಲಿ ಮಧ್ಯದಲ್ಲಿ ಕನ್ನಡಕ್ಕೂ ಅವಕಾಶ ದೊರಕಿತ್ತು. ಶೃಂಗೇರಿಯ
ರಾಜೀವಗಾಂಧಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಡಾ| ವೆಂಕಟರಮಣ ಭಟ್, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಡಾ| ಉಡುಪ ರಮೇಶ, ಪ್ರಾಧ್ಯಾಪಕರಾದ ಡಾ| ರಾಮಕೃಷ್ಣ ಉಡುಪ, ವಿಜಯಪುರದ ಕಾಖಂಡಕಿ ಕೃಷ್ಣ ಜೋಷಿ, ಕಲಬುರಗಿ ಎನ್‌ವಿ ಪದವಿ ವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ| ಗುರುಮದ್ವಾಚಾರ್ಯ ನವಲಿ, ಡಾ| ಹಣಮಂತಾಚಾರ್ಯ ಸರಡಗಿ ರಾಮಾಯಣ ಅಧ್ಯಯನದ ಸಾರ್ವಕಾಲಿಕ ಪ್ರಸ್ತುತತೆ ವಿಷಯವಾಗಿ ಸಂಶೋಧನಾತ್ಮಕ ಪ್ರಬಂಧಗಳನ್ನು ಗೋಷ್ಠಿಯಲ್ಲಿ ಶ್ರೀಗಳ ಸಮ್ಮುಖದಲ್ಲಿ ಮಂಡಿಸಿದರು.
2 ದಿನಗಳ ರಾಷ್ಟ್ರೀಯ ವಿದ್ವದ್ಗೋಷ್ಠಿಯ ಉಪ ಸಂಯೋಜಕರಾದ ಡಾ| ಹಣಮಂತಾಚಾರ್ಯ ಸರಡಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೋಷ್ಠಿಯ ಸಂಯೋಜಕ ಡಾ| ಗುರು ಮಧ್ವಾಚಾರ್ಯ ನವಲಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.