ರಾಂಪುರಹಳ್ಳಿ-ಶಾಂಪುರಹಳ್ಳಿ 8 ಸ್ಥಾನಗಳಿಗೆ ಚುನಾವಣೆ
Team Udayavani, Jun 7, 2018, 9:55 AM IST
ವಾಡಿ: ತಮ್ಮೂರಿಗೆ ಗ್ರಾಪಂ ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯಿಸಿ ಚುನಾವಣೆ ಬಹಿಷ್ಕಾರ ನಿರ್ಧಾ ಮುಂದುವರಿಸಿರುವ ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮಸ್ಥರು, ಗ್ರಾಪಂ ಚುನಾವಣೆ ಬಹಿಷ್ಕರಿಸುವ ಮೂಲಕ
ಸರಕಾರಕ್ಕೆ ಸವಾಲು ಹಾಕಿದ್ದಾರೆ.
ಕೊಲ್ಲೂರ ಗ್ರಾಪಂ 15 ಸ್ಥಾನಗಳಿಗೆ ಹಾಗೂ ಶಾಂಪುರಹಳ್ಳಿ ಗ್ರಾಪಂ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಗೆ ಜೂ.2 ಕೊನೆ ದಿನವಾಗಿತ್ತು. ತರ್ಕಸ್‌ಪೇಟೆಯಿಂದ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.
ರಾಂಪುರಹಳ್ಳಿ ಗ್ರಾಪಂ ಚುನಾವಣೆಯಿಂದ ತರ್ಕಸ್‌ಪೇಟೆ ಹೊರಗುಳಿದಂತಾಗಿದ್ದು, ರಾಂಪುರಹಳ್ಳಿ ಹಾಗೂ ಶಾಂಪುರಹಳ್ಳಿ ಗ್ರಾಮಗಳ 8 ಸ್ಥಾನಗಳಿಗೆ ಮಾತ್ರ ಜೂ.14 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಕರಬಸಯ್ಯ ಮಠ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಬಹಿಷ್ಕರಿಸಿ ಅಸಮಾಧಾನ ಹೊರಹಾಕಿದ್ದ ಗ್ರಾಮಸ್ಥರು, ಗ್ರಾಪಂ ಚುನಾವಣೆಯಲ್ಲೂ ಬಹಿಷ್ಕಾರ ನಿರ್ಧಾರ ಮುಂದುವರಿಸಿ ಆಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮಸ್ಥರು ಹೀಗೆ ಪದೇಪದೆ ಚುನಾವಣೆ ಬಹಿಷ್ಕರಿಸುತ್ತಿದ್ದರೂ ಸಮಸ್ಯೆ ಇತ್ಯರ್ಥಪಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಕೊಲ್ಲೂರ ಗ್ರಾಪಂ ವಿಂಗಡಣೆಯಾಗಿ ರಾಂಪುರಹಳ್ಳಿ ಗ್ರಾಮಕ್ಕೆ ನೂತನ ಗ್ರಾಪಂ ಸ್ಥಾನಮಾನ ದಕ್ಕಿಸಿರುವುದೇ ತರ್ಕಸ್‌ಪೇಟೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲ್ಲೂರ ಗ್ರಾಪಂ ವಿಂಗಡಿಸಿ ರಾಂಪುರಹಳ್ಳಿಗೆ ಗ್ರಾಪಂ ಸ್ಥಾನ ಕೊಡುವ ಮೂಲಕ ಶಾಂಪುರಹಳ್ಳಿ ಹಾಗೂ ತರ್ಕಸ್‌ಪೇಟೆ ಸೇರ್ಪಡೆ ಮಾಡಿರುವುದು ಅನ್ಯಾಯದಿಂದ ಕೂಡಿದೆ. ಗ್ರಾಪಂ ಸ್ಥಾನಮಾನ ಹೊಂದಲು ತರ್ಕಸ್‌ಪೇಟೆ ಎಲ್ಲಾ ರೀತಿಯಿಂದಲೂ ಅರ್ಹತೆ ಪಡೆದಿದೆ. ಈ ಕುರಿತು ಪ್ರಕರಣ
ನ್ಯಾಯಾಲಯದಲ್ಲಿ ಇರುವಾಗಲೇ ಚುನಾವಣೆ ಘೋಷಣೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತರ್ಕಸ್‌ಪೇಟೆ ಗ್ರಾಮ ಕೊಲ್ಲೂರ ಗ್ರಾಪಂ ಅಧೀನದಲ್ಲಿದ್ದಾಗ ಒಟ್ಟು 6 ಜನರು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗುತ್ತಿದ್ದರು. ಈಗ ಅದರಲ್ಲಿ ಎರಡು ಸ್ಥಾನಗಳನ್ನು ಕಡಿತಗೊಳಿಸಿ ನಾಲ್ಕು ಸ್ಥಾನಕ್ಕೆ ಇಳಿಸಲಾಗಿದೆ. ತರ್ಕಸ್‌ಪೇಟೆಯನ್ನು ರಾಂಪುರಹಳ್ಳಿಗೆ ಸೇರಿಸುವುದಕ್ಕೆ ತಕರಾರಿದೆ.
ಸರಕಾರ ನಮ್ಮೂರಿಗೆ ಗ್ರಾಪಂ ಸ್ಥಾನಮಾನ ಕಲ್ಪಿಸಲಿ ಅಥವಾ ಕೊಲ್ಲೂರು ಗ್ರಾಪಂಗೆ ಸೇರ್ಪಡೆ ಮಾಡಲಿ. ಯಾವುದೇ ಕಾರಣಕ್ಕೂ ನಾವು ರಾಂಪುರಹಳ್ಳಿಗೆ ಸೇರ್ಪಡೆಯಾಗುವುದಿಲ್ಲ. ಈಗಾಗಲೇ ವಿಧಾನಸಭೆ ಚುನಾವಣೆ ಬಹಿಷ್ಕರಿಸಿದ್ದೇವೆ. ಸದ್ಯ ನಡೆಯುತ್ತಿರುವ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ. ಗ್ರಾಮಸ್ಥರೆಲ್ಲ ಸಂಘಟಿತರಾಗಿದ್ದೇವೆ.
ನ್ಯಾಯ ಸಿಗದಿದ್ದರೆ ಮುಂದೆ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಮುಖಂಡರಾದ ದಾನಪ್ಪಗೌಡ ನೀಲಗಲ್, ಶಾಂತಯ್ಯ ಗುತ್ತೇದಾರ, ಬಸವರಾಜ ದಂಡಗಿ, ಹಾಜಿಸಾಬ ರಾಜಾಪುರ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.