ರ್‍ಯಾಂಡಮ್ ಟೆಸ್ಟಿಂಗ್: 99 ಜನರ ಮಾದರಿ ಸಂಗ್ರಹ
Team Udayavani, May 17, 2020, 5:41 AM IST
ಕಲಬುರಗಿ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚು ಕಂಡುಬಂದ ನಗರದ ಮೋಮಿನಪುರ ಬಡಾವಣೆಯಲ್ಲಿ ಮನೆ-ಮನೆ ವೈದ್ಯಕೀಯ ತಪಾಸಣೆ ನಡೆಸಿ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳಿಂದ ರ್‍ಯಾಂಡಮ್ ಸ್ಯಾಂಪಲ್ಸ್ ಸಂಗ್ರಹ ಕಾರ್ಯ ಶನಿವಾರದಿಂದ ಆರಂಭವಾಗಿದ್ದು, ಮೊದಲ ದಿನ 99 ಜನರ ಮಾದರಿ ಸಂಗ್ರಹಿಸಲಾಗಿದೆ.
ಮೋಮಿನಪುರ ಪ್ರದೇಶ ವಾರ್ಡ್ ನಂ. 23, 24 ಮತ್ತು 25ರಲ್ಲಿ ಏಕಕಾಲಕ್ಕೆ 23 ಅಂಗನವಾಡಿ ಪ್ರದೇಶದ 1,189 ಮನೆಗಳಿಗೆ ತಪಾಸಣಾ ತಂಡದವರು ಭೇಟಿ ನೀಡಿ 6,078 ಜನರನ್ನು ರ್‍ಯಾಂಡಮ್ ಸ್ಕ್ರಿನಿಂಗ್ ಮಾಡಲಾಯಿತು. ಈ ಪ್ರದೇಶದಲ್ಲಿ ಝೋನ್‌ನಲ್ಲಿ ಒಟ್ಟು 21,320 ನಿವಾಸಿಗಳ ಸ್ಕ್ರಿನಿಂಗ್ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಣಾಕಾರಿ ಡಾ| ಎಂ.ಎ. ಜಬ್ಟಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.