ಜನವರಿಯಲ್ಲಿ ರಂಗಾವಲೋಕನ ಶಿಬಿರ
Team Udayavani, Dec 22, 2020, 4:27 PM IST
ಕಲಬುರಗಿ: ಉತ್ತಮ ರಂಗ ವಿಮರ್ಶೆ ಕಾರಣಕ್ಕಾಗಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು,ಯುವ ಬರಹಗಾರರಿಗಾಗಿ ರಾಜ್ಯದ ಹತ್ತು ಭಾಗಗಳಲ್ಲಿ “ರಂಗಾವಲೋಕನ ಶಿಬಿರ’ ಆಯೋಜಿಸಲು ಉದ್ದೇಶಿಸಲಾಗಿದ್ದು, ಕಲಬುರಗಿಯಲ್ಲಿ ಜನವರಿ 5 ಮತ್ತು 6ರಂದು ಪ್ರಥಮ ಶಿಬಿರ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ| ಆರ್.ಭೀಮಸೇನ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ರಂಗಾಯಣ ಮತ್ತು ಪತ್ರಕರ್ತರ ಸಂಘದ ಸಹಯೋಗದಲ್ಲಿ ಶಿಬಿರದಲ್ಲಿ ನಡೆಯಲಿದೆ. ಡಾ| ಬಿ.ವಿ. ರಾಜಾರಾಂ, ರಾಜಪ್ಪ ದಳವಾಯಿ, ನಾರಾಯಣ ರಾಯಚೂರು, ದಿನೇಶ ಅಮೀನಗಡ ಪಾಲ್ಗೊಳ್ಳುವರು. ಶಿಬಿರದಲ್ಲಿ ನಾಟಕ ಕೃತಿ, ನಾಟಕ ಪ್ರದರ್ಶನಗಳ ಕುರಿತುಮಾಹಿತಿ ನೀಡಲಾಗುವುದು. ಉಳಿದಂತೆ ನಾಡಿನ ಆಯ್ದಜಿಲ್ಲೆಗಳಲ್ಲಿ ರಂಗ ಸಂಗೀತ, ರಂಗ ಪ್ರಸಾಧನ, ಪರಿಕರ,ರಂಗ ಸಜ್ಜಿಕೆ, ಧ್ವನಿ ಬೆಳಕು ಶಿಬಿರಗಳು ಪ್ರತ್ಯೇಕವಾಗಿ ನಡೆಯಲಿದೆ ಎಂದರು.
ತಾವು ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ವಿಭಿನ್ನ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಯುವ ಜನರನ್ನು ರಂಗಭೂಮಿಯತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ವೃತ್ತಿ, ಹವ್ಯಾಸ ಮತ್ತುಗ್ರಾಮೀಣ ರಂಗಕರ್ಮಿಗಳಾಗಿ ನಾಟಕೋತ್ಸವ,ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯುವ ಜನತೆಗೆರಂಗ ತರಬೇತಿ ಕೊಟ್ಟು, ನಾಟಕ ಪ್ರರ್ದಶನಗಳನ್ನುಹಮ್ಮಿಕೊಳ್ಳಲಾಗಿದೆ. ಗ್ರಾಮೀಣ, ಪೌರಾಣಿಕ ಹಾಗೂ ಭಕ್ತಿಪ್ರಧಾನ ನಾಟಕೋತ್ಸವ ನಡೆಸಲಾಗಿದೆ. ಹೊರನಾಡುಕನ್ನಡಿಗರಿಗಾಗಿ ಹೈದ್ರಾಬಾದ್‌ನಲ್ಲಿ ಕನ್ನಡ ನಾಟಕೋತ್ಸವ ಆಯೋಜಿಸಲಾಗಿತ್ತು. ಅಲ್ಲಿನ ದೂರದರ್ಶನದಲ್ಲಿ ಕನ್ನಡ ಸಂದರ್ಶನ ನೀಡಲಾಗಿತ್ತು ಎಂದರು.
ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ ಅಕಾಡೆಮಿ ಚಟುವಟಿಕೆಗಳನ್ನು ಮತ್ತೆ ಆರಂಭಗೊಳಿಸಲಾಗಿದೆ. ಜನವರಿಯಲ್ಲಿ ಅಕಾಡೆಮಿಯಿಂದ ಕೊಡಮಾಡುವವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನುತುಮಕೂರಿನಲ್ಲಿ ಆಯೋಜಿಸಲಾಗಿದೆ. ಜೀವಮಾನದಸಾಧನೆಗಾಗಿ ರಂಗ ಗೌರವ ಪ್ರಶಸ್ತಿ, 25 ವಾರ್ಷಿಕ ರಂಗ ಪ್ರಶಸ್ತಿ ಹಾಗೂ ನಾಲ್ಕು ದತ್ತಿ ಪ್ರಶಸ್ತಿ ಸೇರಿ ಒಟ್ಟು 30 ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಯಗುಳೇದಗುಡ್ಡದಲ್ಲಿ ಮಹಿಳಾ ತಂಡಗಳ ನಾಟಕೋತ್ಸವ ನಡೆಯಲಿದೆ. ಮಂಗಳಮುಖೀಯರ ಆತ್ಮಸ್ಥೈರ್ಯ ಸಬಲೀಕರಣಕ್ಕಾಗಿ ರಂಗ ತರಬೇತಿ ಶಿಬಿರ ಆಯೋಜಿಸಲಾಗಿದೆ. ಅಕಾಡೆಮಿಯಿಂದ ರಂಗಭೂಮಿಗೆಸಂಬಂಧಿಸಿದ ಸುಮಾರು 3,500 ಪುಸ್ತಕಗಳ ಸಂಗ್ರಹ ಆನ್‌ಲೈನ್‌ನಲ್ಲಿ ಲಭ್ಯವಿದೆ. ಅವುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳವ ವ್ಯವಸ್ಥೆ ಇದೆ ಎಂದರು.
ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ನಾಟಕ ಅಕಾಡೆಮಿ ಸದಸ್ಯರಾದ ಪ್ರಭುದೇವ ಕಪಗಲ್, ಪ್ರವೀಣ ನಾಯಕ, ಕಲಬುರಗಿರಂಗತೋರಣದ ಸದಸ್ಯರಾದ ಸುನೀಲ ಬನಶೆಟ್ಟಿ, ನಾಗೇಶ ಮೂಲಗೆ ಇದ್ದರು.
ಒಂದು ಹುದ್ದೆ ಬಿಡಲು ಸಿದ್ಧ : ರಂಗ ಸಮಾಜ ಮತ್ತು ನಾಟಕ ಅಕಾಡೆಮಿ ಎರಡರಲ್ಲೂ ಸದಸ್ಯರಾಗಿ ಮುಂದುವರಿಯಲು ಅವಕಾಶವಿದೆ. ಇವು ಲಾಭದಾಯಕ ಹುದ್ದೆಗಳಲ್ಲ. ಹೀಗಾಗಿ ಎರಡೂ ಸದಸ್ಯ ಸ್ಥಾನ ಹೊಂದಲು ಯಾವುದೇ ಅಡ್ಡಿ ಇಲ್ಲ. ಒಂದು ವೇಳೆ ಸರ್ಕಾರ ಸೂಚಿಸಿದರೆ ಒಂದು ಸದಸ್ಯತ್ವವನ್ನು ಬಿಡಲು ಸಿದ್ಧನಿದ್ದೇನೆ ಎಂದು ಸದಸ್ಯ ಪ್ರಭುದೇವ ಕಪಗಲ್‌ತಿಳಿಸಿದ್ದಾರೆ. ಪ್ರಭುದೇವ ಕಪಗಲ್ ಎರಡೂ ಹುದ್ದೆಗಳಲ್ಲಿ ಮುಂದು ವರಿದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿಗೆ ಸರ್ಕಾರದಿಂದ 80 ಲಕ್ಷ ರೂ. ಅನುದಾನ ಸಿಗಲಿದೆ. ಕೋವಿಡ್ ಕಾರಣದಿಂದ ಶೇ.30ರಷ್ಟು ಅನುದಾನ ಕಡಿತಗೊಳಿಸಲು ಸರ್ಕಾರ ಮುಂದಾಗಿತ್ತು.ಆದರೆ ಈಗ ಯಾವುದೇ ಅನುದಾನ ಕಡಿತ ಮಾಡದೆ ಸಂಪೂರ್ಣ ನೀಡಲು ತೀರ್ಮಾನಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯದ ವೃತ್ತಿ, ಹವ್ಯಾಸಿ, ಗ್ರಾಮೀಣ,ಬೀದಿ ರಂಗಭೂಮಿಯ 2,700ಕ್ಕೂ ಅಧಿಕ ಕಲಾವಿದರಿಗೆ ಧನ ಸಹಾಯ ಕಲ್ಪಿಸಲಾಗಿದೆ. -ಪ್ರೊ| ಆರ್.ಭೀಮಸೇನ, ಅಧ್ಯಕ್ಷ, ಕರ್ನಾಟಕ ನಾಟಕ ಅಕಾಡೆಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.