ರಾವಣ ದಹನ ದುಷ್ಟ ಶಕ್ತಿ ಸಂಹಾರ ಸಂಕೇತ
Team Udayavani, Oct 20, 2018, 12:12 PM IST
ವಾಡಿ: ಮಾತೆ ದುರ್ಗೆ ಎದುರು ರಾವಣ ಪ್ರತಿಕೃತಿ ದಹನ ಮಾಡುವ ಕ್ರಿಯೆ ದುಷ್ಟ ಶಕ್ತಿಗಳ ಸಂಹಾರದ ಸಂಕೇತ ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ವಿಜಯದಶಮಿ ನಿಮಿತ್ತ ಗುರುವಾರ ಪಟ್ಟಣದ ರೈಲ್ವೆ ಕಾಲೋನಿಯಲ್ಲಿ ಏರ್ಪಡಿಸಲಾಗಿದ್ದ ದುರ್ಗಾ ಪೂಜೆ ಹಾಗೂ ರಾವಣ ದಹನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಾಡಹಬ್ಬ ದಸರಾ ವಿಜಯದ ಸಂಕೇತವಾಗಿದ್ದು, ರಕ್ಕಸರ ವಧೆ ಮಾಡುವ ಮೂಲಕ ದೇವಿ
ಶನಿ ಪೀಡೆಗಳನ್ನು ತೊಲಗಿಸುತ್ತಾಳೆ. ಹತ್ತು ದುಷ್ಟ ಗುಣಗಳನ್ನು ಹೊಂದಿದ ರಾವಣ ರಕ್ಕಸ ಪ್ರವೃತ್ತಿಯ ಅಸುರನಾಗಿದ್ದ. ರಾವಣ ದಹನ ಎನ್ನುವುದು ದಸರಾ ಹಬ್ಬದ ವಿಶೇಷತೆಯಾಗಿ ಬೆಳೆದು ಬಂದಿದೆ ಎಂದರು. ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ದಸರಾ ಹಬ್ಬವನ್ನು
ಹಿಂದೂಗಳು ಜಾತಿ ಬೇಧವಿಲ್ಲದೆ ಪಕ್ಷಾತೀತವಾಗಿ ಸಂಭ್ರಮದಿಂದ ಆಚರಿಸುವಂತೆ ಆಗಬೇಕು. ಹಬ್ಬಗಳು ರಾಜಕೀಯ ಪ್ರೇರಿತವಾಗಬಾರದು. ವಿಶೇಷವಾಗಿ ವಿಜಯದಶಮಿ ಹಬ್ಬದ ಸಾರ್ವಜನಿಕ ಆಚರಣೆ ಎಲ್ಲ ಧರ್ಮಗಳ ಜನರನ್ನು ಒಳಗೊಂಡಿರಬೇಕು ಎಂದರು.
40 ಅಡಿ ಎತ್ತರದ ರಾವಣ ಪ್ರತಿಕೃತಿಗೆ ಅಗ್ನಿಸ್ಪರ್ಷ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಪಟ್ಟಣದಲ್ಲಿ ದಸರಾ ಆಚರಣೆಯನ್ನು ಇಷ್ಟೊಂದು ಅದ್ಧೂರಿಯಾಗಿ ಸಂಭ್ರಮಿಸುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಇಲ್ಲಿನ ಜೈ ಭವಾನಿ
ಭವನ ಅಭಿವೃದ್ಧಿಗೆ 4.5 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು.
ಮುಸ್ಲಿಂ ಸಮಾಜದ ಮುಖಂಡ ಬಾಬುಮಿಯ್ನಾ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಪಿಎಸ್‌ಐ ವಿಜಯಕುಮಾರ ಭಾವಗಿ, ರೈಲ್ವೆ ಪಿಎಸ್‌ಐ ವೀರಭದ್ರಪ್ಪ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ನಿವೇದಿತಾ ದಹಿಹಂಡೆ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ರೈಲು ನಿಲ್ದಾಣ ಪ್ರಬಂಧಕ ಎ.ಎಸ್. ಪ್ರಸಾದರಾವ್, ಎಪಿಎಂಸಿ ಸದಸ್ಯ ತಿಮ್ಮಯ್ಯ ಕುರುಕುಂಟಾ, ಉತ್ಸವ ಸಮಿತಿ ಮುಖಂಡರಾದ ಸುರೇಶ ಬಣಗಾರ, ಹರಿ ಗಲಾಂಡೆ, ರಾಜೇಶ ಕಾಂಬಳೆ, ರಾಜು ಮುಕ್ಕಣ್ಣ, ರಾಮಚಂದ್ರ ರೆಡ್ಡಿ, ಗಿರಿಮಲ್ಲಪ್ಪ ಕಟ್ಟಿಮನಿ, ವೀರಣ್ಣ ಯಾರಿ, ಬಸವರಾಜ ಕೋಲಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ರಾವಣ ದಹನ ಸಂದರ್ಭದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಪಾಲ್ಗೋಂಡಿದ್ದರು. ರೈಲ್ವೆ ಕಾಲೋನಿ, ಎಸಿಸಿ ಕಾಲೋನಿ ಹಾಗೂ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಿ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಹನುಮಾನ ದೇವರ ದರ್ಶನ ಪಡೆದ ಸ್ಥಳೀಯರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.