ಲಿಂಗಾಯಿತ ಮಹಾರ್ಯಾಲಿ ಯಶಸ್ಸಿಗೆ ಸಿದ್ಧತೆ
Team Udayavani, Sep 23, 2017, 9:52 AM IST
ಕಲಬುರಗಿ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಆಗ್ರಹಿಸಿ ಸೆ. 24ರಂದು ನಗರದ ನೂತನ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಲಿಂಗಾಯತ ಮಹಾರ್ಯಾಲಿ ಮಹಾಸಭೆಗೆ ವ್ಯಾಪಕ ಸಿದ್ಧತೆ ಹಾಗೂ ಪ್ರಚಾರದ ಕಾರ್ಯ ಜೋರಾಗಿ ನಡೆಯುತ್ತಿದ್ದು, ಸಾವಿರಾರು ಸಮಾಜದ ಮುಖಂಡರು-ಯುವಕರು ಸಕ್ರಿಯವಾಗಿ ಪಾಲ್ಗೊಂಡಿದ್ದು, ಮಹಾರ್ಯಾಲಿ ಯಶಸ್ವಿಯ ಲಕ್ಷಣಗಳು ಕಂಡು ಬರುತ್ತಿವೆ.
ಕಳೆದ ಸೆ. 10ರಂದು ನಿಗದಿಯಾಗಿದ್ದ ಮಹಾರ್ಯಾಲಿ ಅಗತ್ಯ ಸಿದ್ಧತೆ ಆಗಿಲ್ಲವೆಂದು ಸೆ. 24ಕ್ಕೆ ಮುಂದೂಡಲಾಗಿತ್ತು. ಈ ನಡುವೆ ವೀರಶೈವ-ಲಿಂಗಾಯತ ನಡುವೆ ಭಿನ್ನಮತ ಉಂಟಾಗಿ ಆರೋಪ-ಪ್ರತ್ಯಾರೋಪ ನಡೆದ ಪರಿಣಾಮ ಜತೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಬೆಂಗಳೂರಿನ ಮನೆಯಲ್ಲಿ ಸಭೆ ನಡೆದು ಸಮನ್ವಯ ಸಮಿತಿ ರಚನೆ ಕುರಿತಾಗಿ ನಿರ್ಣಯ ಕೈಗೊಂಡ ನಂತರ ಮಹಾರ್ಯಾಲಿ ಕಾವು ಸ್ವಲ್ಪ ಕುಸಿತವಾಗಿತ್ತು.
ಕಳೆದ ನಾಲ್ಕು ದಿನಗಳಿಂದ ಲಿಂಗಾಯತ ಧರ್ಮ ಸಮನ್ವಯ ಸಮಿತಿ ಪದಾಧಿಕಾರಿಗಳು, ಸಚಿವರಾದ ಎಂ.ಬಿ.ಪಾಟೀಲ, ಡಾ| ಶರಣಪ್ರಕಾಶ ಪಾಟೀಲ, ಶಾಸಕ ಬಿ.ಆರ್. ಪಾಟೀಲ ಸೇರಿದಂತೆ ಇತರರು ಹಗಲಿರಳು ಸಮಾಜ ಸಂಘಟಕರ ನಿರಂತರ ಸಭೆಗಳನ್ನು ನಡೆಸುವುದರ ಮುಖಾಂತರ ಸಮಾವೇಶದ ಯಶಸ್ವಿಗೆ ಹುರಿದುಂಬಿಸಿದ್ದರಿಂದ, ಜತೆಗೆ ನಾಡಿನ ವಿವಿಧ ಮಠಾಧೀಶರು, ಶ್ರೀ ಶೈಲ ಸಾರಂಗಧರೇಶ್ವರ ಮಹಾಸ್ವಾಮಿಗಳು ಸೇರಿದಂತೆ ಇತರರು ಸಮಾವೇಶ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.