ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸಿದ್ಧ
Team Udayavani, Apr 19, 2017, 3:29 PM IST
ಕಲಬುರಗಿ: ಮಹಾನಗರದ ತ್ಯಾಜ್ಯ (ಒಳಚರಂಡಿ) ನೀರು ನೇರವಾಗಿ ಭೀಮಾ ನದಿ ಸರಡಗಿ ಬ್ಯಾರೇಜ್ ಗೆ ಸೇರಿ ಅದೇ ನೀರಿನಲ್ಲಿ ಬೆರೆತು ವಾಪಸ್ಸು ಬರುತ್ತಿರುವುದಕ್ಕೆ ಬ್ರೇಕ್ ಬೀಳುತ್ತಿದ್ದು, ಇನ್ಮುಂದೆ ಮಹಾನಗರಕ್ಕೆ ಕಲುಷಿತ ಕುಡಿಯುವ ನೀರು ಬದಲು ಶುದ್ಧ ನೀರು ಪೂರೈಕೆಯಾಗಲಿದೆ.
ತ್ಯಾಜ್ಯ ನೀರು ಶುದ್ಧೀಕರಣಗೊಳಿಸುವ ನಂದಿಕೂರ ಬಳಿ ವಿಶಾಲವಾದ 45 ಎಕರೆ ಭೂಮಿಯಲ್ಲಿ ಆತ್ಯಾಧುನಿಕ 47 ಕೋಟಿ ರೂ. ವೆಚ್ಚದಲ್ಲಿ ಘಟಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಂಪೂರ್ಣವಾಗಿ ಕಾರ್ಯರೂಪಗೊಳ್ಳಲಿದೆ. 2014ರಲ್ಲಿ ಆರಂಭಗೊಂಡ 40 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಈಗ ಸಂಪೂರ್ಣಗೊಂಡಿದ್ದರಿಂದ ಶೀಘ್ರದಲ್ಲಿಯೇ ಸಮರ್ಪಣೆಯಾಗಲಿದೆ.
ಹಳೆ ಮಾದರಿಯಲ್ಲಿ ಕೋಟನೂರ ಬಳಿ ಈಗಿರುವ ನೀರು ತ್ಯಾಜ್ಯ ನೀರು ಶುದ್ಧೀಕರಣ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ 2014ರಲ್ಲಿ ನಂದಿಕೂರ ಬಳಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ (ಕೆಯುಐಎಫ್ ಡಿಸಿ) ಅಡಿ ಪಾಲಿಕೆ ಆಯುಕ್ತರ ಸುಪರ್ದಿಯಲ್ಲಿ ಆರಂಭಗೊಂಡ ಕಾಮಗಾರಿ ಈಗ ಪೂರ್ಣಗೊಂಡಿದೆ.
ತ್ಯಾಜ್ಯ ನೀರು ಶುದ್ಧೀಕರಣದ ಎಲ್ಲ ಹಂತದ ಘಟಕಗಳು ಸಿದ್ಧವಾಗಿವೆ. ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಅವರು ಮಂಗಳವಾರ ಘಟಕಕ್ಕೆ ಭೇಟಿ ನೀಡಿ ಸಮಗ್ರವಾಗಿ ಅವಲೋಕಿಸಿದರು. ಕೋಟನೂರ ಬಳಿಯಿಂದ ನಂದಿಕೂರ ಹತ್ತಿರದ ನೂತನ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಹೋಗುವ 1.8 ಕಿಮೀ ದೂರದ ಪೈಪ್‌ಲೈನ್ ಕಾಮಗಾರಿಯಲ್ಲಿ ಈಗ ಕೇವಲ 500 ಮೀಟರ್ ಬಾಕಿ ಉಳಿದಿದೆ.
ಉಳಿದ ಕಾಮಗಾರಿ ವಾರದಲ್ಲಿಯೇ ಪೂರ್ಣಗೊಳ್ಳಲಿದೆ. ಅಂದರೆ ಬರುವ ಮೇ ಆರಂಭದ ಹೊತ್ತಿಗೆ ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಶುದ್ಧತೆ ಬರಲಿದೆ. ಇದರಿಂದ ಪ್ರತಿವರ್ಷ ಮಳೆಗಾಲದಲ್ಲಿ ಕಲುಷಿತ ನೀರು ಕುಡಿದು ಇಷ್ಟು ಜನರು ಕಾಲರಾ ದಾಳಿ ಎಂಬ ಆತಂಕ ದೂರಾಗಲಿದೆ. ನಂದಿಕೂರ ಬಳಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಮಹಾನಗರದ ಶೇ. 70ರಷ್ಟು ತ್ಯಾಜ್ಯ ನೀರು ಬಂದು ಸೇರುತ್ತದೆ.
ಕಲಬುರಗಿ ಉತ್ತರ ಭಾಗದಲ್ಲಿ ಕಪನೂರ ಬಳಿ 25 ಎಂಎಲ್‌ಡಿ ತ್ಯಾಜ್ಯ ನೀರು ಸಾಮರ್ಥ್ಯದ ಘಟಕದ ಕಾಮಗಾರಿ ನಡೆದು ಇಷ್ಟರಲ್ಲಿಯೇ ಪೂರ್ಣಗೊಳ್ಳಲಿದೆ. ಅದೇ ರೀತಿ ಅಮೃತ ಯೋಜನೆ ಅಡಿ ಉತ್ತರ ಭಾಗದಲ್ಲಿಯೇ ಮಗದೊಂದು ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಈ ಎಲ್ಲವುಗಳು ಪೂರ್ಣಗೊಂಡಿದ್ದಲ್ಲಿ ಮಹಾನಗರ ಸಂಪೂರ್ಣ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ.
ತ್ಯಾಜ್ಯ ನೀರು ಶುದ್ಧೀಕರಣದ ಜತೆಗೆ ಚೋರಗುಂಬಜ್ ಬಳಿಯ μಲ್ಟರ್‌ಬೆಡ್ ಕಾರ್ಯದಲ್ಲೂ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಹಳೆಯದಾದ ಯಂತ್ರಗಳನ್ನು ಬದಲಾಯಿಸಲಾಗಿದೆ. ಇದಲ್ಲದೇ ಮಹಾನಗರದ ನೀರು ಪೂರೈಕೆ ಪೈಪ್‌ಲೈನ್ ನಲ್ಲಿ ಅಲ್ಲಲಿ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲು ಸಹ ಹೆಜ್ಜೆ ಇಡಲಾಗಿದೆ.
ಒಟ್ಟಾರೆ ಈ ಎಲ್ಲ ಕಾರ್ಯಗಳನ್ನು ಅವಲೋಕಿಸಿದರೆ ಕಲಬುರಗಿ ಮಹಾನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುವುದು ನಿಶ್ಚಿತ ಎಂದು ಪಾಲಿಕೆ ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಂದಿಕೂರ ಬಳಿ ತ್ಯಾಜ್ಯ ಶುದ್ಧೀಕರಣಕ್ಕೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹಲವು ಸಲ ಹೋರಾಟ ಮಾಡಿದ್ದರಲ್ಲದೇ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.
ಅದರ ಪರಿಣಾಮ ಘಟಕ ಸಿದ್ಧವಾಗಿ ನಿಂತಿದೆ. ಒಟ್ಟಾರೆ ಅಶುದ್ಧ ಕುಡಿಯುವ ನೀರು ಪೂರೈಕೆಗೆ ಬ್ರೇಕ್ ಬಿದ್ದು, ಶುದ್ಧ ಕುಡಿಯುವ ನೀರು ಪೂರೈಕೆಯಾಗುವುದನ್ನು ಮಹಾನಗರದ ಜನರು ಕಾತರದಿಂದ ಕಾಯುತ್ತಿದ್ದಾರೆ.
* ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.