ಕೋಡ್ಲಿ ವಲಯದಲ್ಲಿ ದಾಖಲೆ ಮಳೆ: ಹೊಲಗಳಲ್ಲಿ ನೀರು
Team Udayavani, Oct 5, 2018, 11:09 AM IST
ಚಿಂಚೋಳಿ:ತಾಲೂಕಿನ ಕೋಡ್ಲಿ ವಲಯದಲ್ಲಿ ಬುಧವಾರ ಸಂಜೆ ಗುಡುಗು ಸಿಡಿಲಿನ ಆರ್ಭಟದಿಂದ ಕೂಡಿದ ವ್ಯಾಪಕ
ಮಳೆ ಆಗಿದ್ದು, ಹೊಲಗಳಲ್ಲಿ ನೀರು ನಿಂತುಕೊಂಡು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ.
ಹಲಚೇರಿ, ನಾವದಗಿ, ತೇಗಲತಿಪ್ಪಿ, ಕುಡಹಳ್ಳಿ, ಹೊಸಳ್ಳಿ ಗ್ರಾಮಗಳ ರೈತರ ಹೊಲದಲ್ಲಿ ಮಳೆ ನೀರು ನಿಂತುಕೊಂಡಿದೆ.
ಕೋಡ್ಲಿ ಹೋಬಳಿಯಲ್ಲಿ ಎರಡು ಗಂಟೆಗಳಲ್ಲಿ 87.2 ಮಿ.ಮೀ ದಾಖಲೆ ಮಳೆ ಸುರಿದಿದೆ. ಇದರಿಂದ ಅನೇಕ ಹೊಲಗಳಲ್ಲಿ
ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದೆ. ಅಲ್ಲದೆ ಬಿರುಗಾಳಿಗೆ ತೊಗರಿ ಬೆಳೆಯ ಹೂವಿನ ಮೊಗ್ಗು ಉದುರಿವೆ ಎಂದು ಹೊಸಳ್ಳಿ ರೈತ ವಿಜಯಕುಮಾರ ಚೇಂಗಟಿ ತಿಳಿಸಿದ್ದಾರೆ.ತಾಲೂಕಿನ ಶಿರೋಳಿ, ನಿಡಗುಂದಾ, ರುದನೂರ, ಕೆರೋಳಿ, ಕರ್ಚಖೇಡ, ಕೊಡಂಪಳ್ಳಿ ಗ್ರಾಮಗಳಲ್ಲಿ ಜೋರಾದ ಮಳೆ ಆಗಿದೆ. ಕೆರೊಳ್ಳಿ ಗ್ರಾಮದಲ್ಲಿ ಒಂದೇ ಸಮನೆ ಸುರಿದ ಭಾರಿ ಮಳೆಯಿಂದ ಮನೆಯೊಂದರಲ್ಲಿ ಮಳೆ ನೀರು ಹೊಕ್ಕಿದೆ ಎಂದು ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಬಸವರಾಜ ಕೆರೊಳ್ಳಿ ತಿಳಿಸಿದ್ದಾರೆ.
ಉತ್ತಮ ಮಳೆ: ತಾಲೂಕಿನಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಹಿಂಗಾರು ಬಿತ್ತನೆಗೆ ಅನುಕೂಲವಾಗಿದೆ. ಐನಾಪುರ,ರಟಕಲ್,ಸಲಗರ ಬಸಂತಪುರ, ಬೆನಕೆಪಳ್ಳಿ, ಮೋಘಾ, ಕೋಡ್ಲಿ, ಕನಕಪುರ, ಚಿಮ್ಮನಚೋಡ ಗ್ರಾಮಗಳಲ್ಲಿ
ರೈತರು ಹಿಂಗಾರು ಜೋಳ ಮತ್ತು ಕಡಲೆ ಬೀಜ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ತೊಗರಿ ಬೆಳೆಯು ಉತ್ತಮವಾಗಿ
ಬೆಳೆಯುತ್ತಿದೆ.
2018-19ನೇ ಸಾಲಿನಲ್ಲಿ ಹಿಂಗಾರು ಬಿತ್ತನೆ ಗುರಿ 36,427 ಹೆಕ್ಟೇರ್ ಇದೆ. ಇದರಲ್ಲಿ 19,7800 ಹೆಕ್ಟೇರ್ ಕಡಲೆ, 15,275 ಹೆಕ್ಟೇರ್ ಜೋಳ ಬಿತ್ತನೆ ಗುರಿ ಇದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಹೆಚ್. ಗಡಗಿಮನಿ ತಿಳಿಸಿದ್ದಾರೆ. ಐನಾಪುರ, ಚಿಮ್ಮನಚೋಡ, ಕೋಡ್ಲಿ, ಸುಲೇಪೇಟ, ಚಿಂಚೋಳಿ ರೈತ ಸಂಪರ್ಕ ಕೇಂದ್ರಗಳಲ್ಲಿ 1055 ಕ್ವಿಂಟಲ್ ಕಡಲೆ, 57ಕ್ವಿಂಟಲ್ ಜೋಳದ ಬಿತ್ತನೆ ಬೀಜಗಳನ್ನು ಸಂಗ್ರಹಣೆ ಮಾಡಲಾಗಿದೆ. ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ಚಿಂಚೋಳಿ 4.2 ಮಿ.ಮೀ, ಸುಲೇಪೇಟ 16.8 ಮಿ.ಮೀ, ಕೋಡ್ಲಿ 87.2 ಮಿ.ಮೀ, ನಿಡಗುಂದಾ 2.0 ಮಿ.ಮೀ ಮಳೆ
ಆಗಿದೆ. ಗುಡುಗು ಮಿಂಚಿನ ಹಿಂಗಾರು ಮಳೆ ಆಗುತ್ತಿದ್ದು, ಬಿತ್ತನೆ ಕಾರ್ಯ ತುರುಸಿನಿಂದ ನಡೆಯಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.