ನೀಟ್ ಪರೀಕ್ಷೆಯಲ್ಲೂ ಎಸ್‌ಬಿಆರ್‌ಗೆ ದಾಖಲೆ ಫಲಿತಾಂಶ
Team Udayavani, Jun 24, 2017, 3:03 PM IST
ಕಲಬುರಗಿ: ಇಂಜಿನಿಯರಿಂಗ್ ಸೇರಿದಂತೆ ಇತರ ಸ್ಪರ್ಧಾತ್ಮಕ ಕೋರ್ಸುಗಳ ಪ್ರವೇಶಾತಿಯ ಸಿಇಟಿ ಹಾಗೂ ಪಿಯುಸಿಯಲ್ಲೂ ಅತ್ಯುತ್ತಮ ರ್‍ಯಾಂಕ್ ಹಾಗೂ ಉತ್ತಮ ಫಲಿತಾಂಶ ಪಡೆದಿರುವ ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಪಿಯು (ಎಸ್‌ಬಿಆರ್) ಕಾಲೇಜಿಗೆ ವೈದ್ಯಕೀಯ ಕೋರ್ಸ್ ಪ್ರವೇಶಾತಿಯ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲೂ ಅತ್ಯುತ್ತಮ ಫಲಿತಾಂಶ ಬಂದಿದೆ.
ಕಳೆದ ಮೇ ತಿಂಗಳಲ್ಲಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಎಸ್‌ಬಿಆರ್ ಕಾಲೇಜಿನ 407 ವಿದ್ಯಾರ್ಥಿಗಳು ವೈದ್ಯಕೀಯ ವಿಭಾಗದ ಪ್ರವೇಶಾತಿ ಅರ್ಹತೆ ಪಡೆಯುವ ಮುಖಾಂತರ ಈ ಭಾಗಕ್ಕೆ ಕೀರ್ತಿ ತಂದಿದ್ದಾರೆ. ಸಂತೋಷಿ ಕೋರವಾರ 720 ಅಂಕಗಳಿಗೆ 611 ಅಂಕಗಳನ್ನು ಪಡೆದು 1917ನೇ ರ್‍ಯಾಂಕ್ ನೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಅದೇ ರೀತಿ ಅಖೀಲೇಶ 5110 ರ್‍ಯಾಂಕ್, ರಾಮನಗೌಡ 5114 ರ್‍ಯಾಂಕ್, ಶರತ್‌ಚಂದ್ರ 8081 ರ್‍ಯಾಂಕ್, ಶರಣಪ್ರಸಾದ 8559 ರ್‍ಯಾಂಕ್, ನಿಜಾಮುದ್ದಿನ್ 9812 ರ್‍ಯಾಂಕ್ ಗಳನ್ನು ಪಡೆದಿದ್ದಾರೆ. 12 ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚಿನ ಅಂಕ, 19 ವಿದ್ಯಾರ್ಥಿಗಳು 450ರಿಂದ 500 ಅಂಕಗಳನ್ನು ಪಡೆದಿದ್ದರೆ 51 ವಿದ್ಯಾರ್ಥಿಗಳು 400ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟಾರೆ 407 ವಿದ್ಯಾರ್ಥಿಗಳು ವೈದ್ಯಕೀಯ ವಿಭಾಗದ ಪ್ರವೇಶಾತಿಗೆ ಅರ್ಹತೆ ಪಡೆದಿದ್ದಾರೆ. ಕಳೆದ ಮೇ ಮಾಸಾಂತ್ಯದಲ್ಲಿ ಪ್ರಕಟಗೊಂಡ ಇಂಜನೀಯರಿಂಗ್ ಕೋಸ್‌ನ ಪ್ರವೇಶಾತಿಯ ಸಿಇಟಿಯಲ್ಲಿ ಕಾಲೇಜ್‌ನ 34 ವಿದ್ಯಾರ್ಥಿಗಳು 5000 ಒಳಗಿನ ರ್‍ಯಾಂಕ್ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.