ಮರುಕಳಿಸಿತು ಮಳಖೇಡ ಗತವೈಭವ


Team Udayavani, Mar 4, 2018, 11:07 AM IST

Untitled-1.jpg

ಸೇಡಂ: ಶತಮಾನಗಳ ಹಿಂದೆ ಇಡೀ ವಿಶ್ವದಲ್ಲಿ ತನ್ನ ರಾಜಗತವೈಭವದ ಮೂಲಕ ಛಾಪು ಮೂಡಿಸಿ ಜಗದ್ವಿಖ್ಯಾತಿ ಗಳಿಸಿದ್ದ, ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟದ ಗತವೈಭವ ಮರುಕಳಿಸಿದೆ. ನೂರಾರು ವರ್ಷಗಳ ಹೋರಾಟದ ಫಲವಾಗಿ ಮಾ. 4 ಮತ್ತು 5ರಂದು ರಾಷ್ಟ್ರಕೂಟರ ಉತ್ಸವ ನಡೆಯಲಿದೆ.

ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿ ತಟದಲ್ಲಿ, 8-10ನೇ ಶತಮಾನದಲ್ಲಿ ಕಾವೇರಿಯಿಂದ ಗೋದಾವರಿವರೆಗೆ ತನ್ನ ಸಾಮ್ರಾಜ್ಯ ಸ್ಥಾಪಿಸಿದ ರಾಷ್ಟ್ರಕೂಟ ಮನೆತನದ ರಾಜರು ಮಾನ್ಯಖೇಟ (ಇಂದಿನ ಮಳಖೇಡ) ರಾಜಧಾನಿಯನ್ನಾಗಿ ಮಾಡಿ ಚಕ್ರಾ ಪತ್ಯ ಮೆರೆದಿದ್ದರು. ಈಗ ಅಂತಹ ಪುಣ್ಯ ನೆಲದಲ್ಲಿ ಜಿಲ್ಲಾಡಳಿತ ಉತ್ಸವ ಆಚರಿಸಲು ಹೊರಟಿರುವುದು ಹೈದ್ರಾಬಾದ ಕರ್ನಾಟಕ ಭಾಗದ ಸಾಹಿತಿಗಳು, ಕನ್ನಡಪರ ಸಂಘಟಕರಲ್ಲಿ ಸಂತಸ ಮೂಡಿಸಿದೆ.
 
ಪ್ರಪಂಚದ ಪ್ರಸಿದ್ಧ ರಾಜಮನೆತನಗಳ ಪೈಕಿ ರಾಷ್ಟ್ರಕೂಟರು ಒಬ್ಬರು. ರಾಜ ನೃಪತುಂಗ ಚಕ್ರವರ್ತಿ ಆಡಳಿತದ ವೈಖರಿಯಿಂದ ಮಾನ್ಯಖೇಟ ಇಡೀ ಜಗತ್ತಿಗೆ ಪರಿಚಯವಾಗಿತ್ತು. ಕಲೆ, ಸಾಹಿತ್ಯ, ಸಂಗೀತ, ಧಾರ್ಮಿಕ ಸಾಮರಸ್ಯತೆ ಮುಂತಾದ ಕ್ಷೇತ್ರಗಳ ಸಂಪದ್ಭರಿತವಾದವು. ಅಲ್ಲದೆ ಕನ್ನಡಕ್ಕೆ ಮೊಟ್ಟ ಮೊದಲ ಕೃತಿ ಕವಿರಾಜಮಾರ್ಗ ನೀಡಿದ ನೆಲ ಮಾನ್ಯಖೇಟವಾಗಿತ್ತು.

ರಾಷ್ಟ್ರಕೂಟರ ಕೋಟೆ ಕನ್ನಡಿಗರ ಸ್ವಾಭಿಮಾನದ ಸಂಕೇತ ವಾಗಿದ್ದು, ಶತಮಾನಗಳ ಹಿಂದೆ ನಡೆದ ಕಲೆ, ಸಂಸ್ಕೃತಿಯನ್ನು ಈಗ ಮರುಕಳಿಸಲು ಇಡೀ ಜಿಲ್ಲಾಡಳಿತ ಸಜ್ಜಾಗಿದೆ. ರಾಜ್ಯದ ನಾನಾ ಭಾಗಗಳಿಂದ ನೂರಾರು ಜನ ಸಾಹಿತಿಗಳು ನೃಪತುಂಗನ
ಆಸ್ಥಾನವನ್ನು ಹಾಡಿ ಹೊಗಳಲಿದ್ದಾರೆ. ಅಲ್ಲದೆ ಸಿನಿ ತಂಡಗಳು ಸಹ ಜನರನ್ನು ರಂಜಿಸಲಿವೆ. ನಾಡಿನ ವೈವಿಧ್ಯ ಕಲಾ ತಂಡಗಳು, ಜಾನಪದ ವಾದ್ಯಗಳು, ಸ್ಥಳೀಯ ಡೊಳ್ಳು ಕುಣಿತ, ಹಲಗೆ ಕುಣಿತ, ಪುರವಂತಿಕೆ ಮತ್ತು ಮಹಿಳಾ ತಂಡಗಳು ಕೋಲಾಟ ಪ್ರದರ್ಶಿಸಲಿವೆ. ಇಡೀ ಕೋಟೆ ನವವಧುವಿನಂತೆ ಸಿಂಗಾರಗೊಂಡಿದೆ. 

ಕವಿರಾಜಮಾರ್ಗ ಕೃತಿ ಪ್ರತಿರೂಪ ಇಲ್ಲಿ ನಿರ್ಮಿಸಲಾಗಿದೆ. ಕೋಟೆಯನ್ನು ರಂಗುರಂಗಾಗಿ ಸಜ್ಜುಗೊಳಿಸಲಾಗಿದೆ. ರಾಜ್ಯ
ಹೆದ್ದಾರಿಗೆ ಹೊಂದಿಕೊಂಡಿರುವ ಮಠದ ಆವರಣದಲ್ಲಿ 20 ಸಾವಿರ ಆಸನಗಳ ಬೈಹತ್‌ ವೇದಿಕೆ ನಿರ್ಮಿಸಲಾಗಿದೆ. ಒಟ್ಟಾರೆ ಇಡೀ ಮಳಖೇಡ ಗ್ರಾಮ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. 

ಪ್ರಮುಖ ಬೇಡಿಕೆಗಳು ಕೋಟೆ ಪುನರ್‌ ಅಭಿವೃದ್ಧಿ ಕಾರ್ಯ ಶೀಘ್ರ ಪೂರ್ಣಗೊಳಿಸಿ ಪ್ರವಾಸಿ ತಾಣವಾಗಿಸಬೇಕು.  ವಿಶ್ವ ಮಟ್ಟದಲ್ಲಿ ಮಾನ್ಯಖೇಟ ಕೋಟೆ ಪ್ರಚಾರವಾಗಬೇಕು. ಮಳಖೇಡದಲ್ಲಿ ನೃಪತುಂಗ ರಾಜನ ಪುತ್ಥಳಿ ಸ್ಥಾಪಿಸಬೇಕು. ಪ್ರತಿಯೊಬ್ಬರಿಗೆ ಕವಿರಾಜಮಾರ್ಗ ಕೃತಿ ಪರಿಚಯ ಆಗಬೇಕು. ಮಳಖೇಡ ಹೆಸರು ಬದಲಿಸಿ ಮಾನ್ಯಖೇಟ ಮಾಡಬೇಕು. 

ಅಸಮಾಧಾನದ ಹೊಗೆ ಈ ಭಾಗದ ಪ್ರತಿಷ್ಠೆ ರಾಷ್ಟ್ರಕೂಟರಕೋಟೆಯಾಗಿದ್ದು, ಅದರ ರಕ್ಷಣೆ ಮತ್ತು ಉತ್ಸವ ಆಚರಣೆಗಾಗಿ ಕನ್ನಡಪರ ಸಂಘಟನೆಗಳು, ಸ್ಥಳೀಯ ಸಾಹಿತಿಗಳು ಮತ್ತು ನಾಗರಿಕರು ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ. ಆದರೆ ಅವರಲ್ಲಿ ಕೆಲವರಿಗೆ ಆಮಂತ್ರಣ ತಲುಪಿಲ್ಲ. ಅಲ್ಲದೆ ಸ್ಥಳೀಯರನ್ನು ಹೊರಗಿಟ್ಟು ಉತ್ಸವ ಆಚರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

„ಶಿವಕುಮಾರ ಬಿ. ನಿಡಗುಂದಾ

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.