ತಾಂಡಾಗಳಲ್ಲಿ ಉಳಿದಿದೆ ಧರ್ಮ-ಸಂಸ್ಕೃತಿ
Team Udayavani, Feb 14, 2019, 6:34 AM IST
ಅಫಜಲಪುರ: ಆಧುನಿಕತೆ ದಿನಗಳಲ್ಲಿ ಬಹಳಷ್ಟು ಸಮಾಜಗಳು ಕೆಟ್ಟು ಹೋಗಿವೆ. ಆದರೆ ಬಂಜಾರಾ ಸಮಾಜ ಮಾತ್ರ ಧರ್ಮ, ಸಂಸ್ಕೃತಿ ಉಳಿಸಿಕೊಂಡು ಬಂದಿದ್ದು, ಭಾರತೀಯ ಸಂಸ್ಕೃತಿಯನ್ನು ಇಂದಿಗೂ ತಾಂಡಾಗಳಲ್ಲಿ ಕಾಣಬಹುದು ಎಂದು ಚಿನ್ಮಯಗಿರಿಯ ಶ್ರೀ ವೀರ ಮಹಾಂತ ಶಿವಾಚಾರ್ಯರು ನುಡಿದರು.
ತಾಲೂಕಿನ ಚವಡಾಪುರ ತಾಂಡಾದಲ್ಲಿ ನಡೆದ ಜಗದಂಬಾದೇವಿ 9ನೇ ಅಗ್ಗಿ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಚವಡಾಪುರ ತಾಂಡಾ ಈಗ ಪುಣ್ಯಕ್ಷೇತ್ರವಾಗಿ ಬೆಳೆಯುತ್ತಿದೆ. ಮುರಾಹರಿ ಮಹಾರಾಜರು ತಾಲೂಕಿನ ಸಮಸ್ತ ಬಂಜಾರಾ ಸಮಾಜ ಒಗ್ಗೂಡಿಸಿ ಎಲ್ಲ ಸಮಾಜಗಳೊಂದಿಗೆ ಬೆರೆತು ಸಮ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ಬಂಜಾರಾ ಸಮಾಜ ಸದಾ ಕಾಯಕ ತತ್ವ ಪಾಲಿಸಿಕೊಂಡು ಬಂದ ಸಮಾಜವಾಗಿದೆ. ಹೀಗಾಗಿ ಸರ್ಕಾರಗಳು ಬಂಜಾರಾ ಸಮಾಜವನ್ನು ಕಡೆಗಣಿಸಬಾರದು. ಬಡತನ, ಅನಕ್ಷರತೆ ತಾಂಡವವಾಡುತ್ತಿದೆ. ಹೀಗಾಗಿ ಸರ್ಕಾರಗಳು ತಾಂಡಾಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದರು.
ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ, ಅತನೂರಿನ ಗುರುಬಸವ ಶಿವಾಚಾರ್ಯರು, ಜಿಲಾನಿ ಮಠ ಕಲಬುರಗಿಯ ಶಮಶೋದ್ದೀನ್ ಖಾದ್ರಿ ಸಾಹೇಬ್ ಮಾತನಾಡಿ, ತಾಲೂಕಿನ ಚವಡಾಪುರ ತಾಂಡಾದ ಮುರಾಹರಿ ಮಹಾರಾಜ, ಗೊಬ್ಬೂರದ ಬಳಿರಾಮ ಮಹಾರಾಜರು ಬಂಜಾರಾ ಸಮಾಜದ ಕಣ್ಣುಗಳಾಗಿದ್ದಾರೆ. ತಪಸ್ವಿ ಮುರಾಹರಿ ಮಹಾರಾಜರಿಂದ ಬಂಜಾರಾ ಸಮಾಜ ಇನ್ನಷ್ಟು ಏಳಿಗೆಯಾಗಲಿ ಎಂದು ಹೇಳಿದರು. ನೇತೃತ್ವ ವಹಿಸಿದ್ದ ಮುರಾಹರಿ ಮಹಾರಾಜರು ಮಾತನಾಡಿ, ಮಾನವ ಧರ್ಮ ದೊಡ್ಡದು, ಯಾವುದೇ ಜಾತಿ, ಭೇದ ಮಾಡದೆ ಎಲ್ಲರನ್ನು ಒಂದಾಗಿ ಕಾಣುವುದೇ ಮನುಷ್ಯ ಧರ್ಮವಾಗಿದೆ ಎಂದರು.
ಪರ್ವತಲಿಂಗ ಮಹಾರಾಜ, ಸಿದ್ಧಲಿಂಗ ಮಹಾಸ್ವಾಮಿ, ಜೇಮಸಿಂಗ್ ಮಹಾರಾಜ್, ರೇವಣಸಿದ್ದೇಶ್ವರ ಶಿವಾಚಾರ್ಯರು, ಅನೀಲ ಸಾಹೇಬ, ಮಾತಾ ಕಲಾವತಿದೇವಿ, ಶಾಂತಾದೇವಿ ಹಾಗೂ ಇನ್ನಿತರರು ಭಾಗವಹಿಸಿದ್ದರು. ದೇವಸ್ಥಾನದ ಕಾರ್ಯದರ್ಶಿ ದತ್ತು ಪವಾರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.