ಶಾಂತಿಗಾಗಿ ಬೇಕು ಧರ್ಮ: ಖರ್ಗೆ
Team Udayavani, Jan 19, 2018, 11:37 AM IST
ವಾಡಿ: ಶಾಂತಿ, ನೆಮ್ಮದಿಗಾಗಿ ಹಂಬಲಿಸಿ ಜನರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ಇತ್ತೀಚೆಗೆ ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆದು ಅಶಾಂತಿ ಮೂಡಿಸುವ ಷಡ್ಯಂತ್ರಗಳು ನಡೆಯುತ್ತಿವೆ. ಮನಃಶಾಂತಿಗಾಗಿ ಧರ್ಮ ಬೇಕೇ ವಿನಃ ಸಂಘರ್ಷಕ್ಕಲ್ಲ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಾಲವಾರ ಮಠದಲ್ಲಿ ಶ್ರೀಕೋರಿಸಿದ್ಧೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಶಾಂತಿ ಬೇಕು. ನಮ್ಮಲ್ಲಿ ಹಣ ಮತ್ತು ವಿದ್ಯಾಬಲ ಇದ್ದರೂ ಶಾಂತಿ ಪಡೆಯಲು ಸಾಧ್ಯವಿಲ್ಲ. ಶಾಂತಿ ಸಹಜವಾಗಿಯೆ ಪಡೆಯುವ ವಸ್ತುವಾಗಿದೆ. ಯಾವ ಸ್ಥಳದಲ್ಲಿ ನಮಗೆ ನೆಮ್ಮದಿ ಸಿಗುತ್ತದೋ ಅಂತಹ ಸ್ಥಳಕ್ಕೆ ನಾವು ಪದೇ ಪದೇ ಹೋಗುತ್ತೇವೆ. ಅಂಥಹ ಸ್ಥಳ ನಾಲವಾರ ಮಠವಾಗಿದ್ದು,
ಭಕ್ತರು ಇಲ್ಲಿ ಪ್ರತಿ ವರ್ಷ ಹೆಚ್ಚುಹೆಚ್ಚು ಬರುವುದನ್ನು ಗಮನಿಸಿದರೆ, ಬಹುಷ್ಯ ಜೀವನದಲ್ಲಿ ಅವರಿಗೆ ಶಾಂತಿ ಹಾಗೂ
ನೆಮ್ಮದಿ ಸಿಗುತ್ತಿರಬಹುದು ಎಂದು ಹೇಳಿದರು.
ಧರ್ಮದ ಹೆಸರಿನಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಇಂಥ ಗೊಂದಲಕಾರಿ ವಾತಾವಣರದಲ್ಲಿ ದೇಶದ ಜನರು ಒಂದಾಗಿ ಇರಲು ಸಾಧ್ಯವಿಲ್ಲ. ಜಾತಿ ಮತ ಮರೆತು ನಾವೆಲ್ಲ ಒಂದು ಎಂದು ತಿಳಿದಾಗ ಮಾತ್ರ ದೇಶದಲ್ಲಿ ಒಗ್ಗಟ್ಟು ಮೂಡಲು ಸಾಧ್ಯವಾಗುತ್ತದೆ. ರೈತರ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಈ ಬಗ್ಗೆ ನಾನು ಸಂಸತ್‌ನಲ್ಲಿ ವಿಷಯ ಪ್ರಾಸ್ತಾವಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಡಾ| ಸಿದ್ದ ತೋಟೇಂದ್ರ ಸ್ವಾಮೀಜಿ, ಶ್ರೀ ಸಿದ್ದಲಿಂಗ ದೇವರು, ಚನ್ನರುದ್ರಮುನಿ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಭಾಗಣ್ಣಗೌಡ ಸಂಕನೂರ, ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ, ಕಲಬುರಗಿ ಮಹಾಪೌರ ಶರಣು ಮೋದಿ, ಹೈ.ಕ.ಶಿ. ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮನಳ್ಳಿ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಭೀಮಣ್ಣ ಸಾಲಿ, ಶಿವರಾಜ ಶಾಸ್ತ್ರಿ ರಾಂಪುರ, ಆಂಧ್ರದ ಮಾಜಿ ಸಚಿವ ಚಂದ್ರಶೇಖರರಾವ, ಮಾಪಣ್ಣ ಗಂಜಗೇರಿ, ಕರವೇ ಮುಖಂಡ ಸೋಮನಾಥ ಕಟ್ಟಿಮನಿ, ಡಾ|ಚಂದ್ರಶೇಖರ ಪಾಟೀಲ, ಉದಯಶೆಟ್ಟಿ, ರಾಜು ಭೀಮನಳ್ಳಿ ಪಾಲ್ಗೊಂಡಿದ್ದರು. ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು. ಯೋಗಾನಂದ ಮಳ್ಳಿಮಠ ಸ್ವಾಗತಿಸಿದರು. ನವಲಿಂಗ ಪಾಟೀಲ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.