ಮನೆಗೊಂದು ಮರ ನೆಟ್ಟು ಬರ ದೂರ ಮಾಡಿ
Team Udayavani, Jul 5, 2017, 10:53 AM IST
ಆಳಂದ: ಇಂದಿನ ತಾಪಮಾನ ತಗ್ಗಿಸಲು ಮನೆಗೊಂದು ಮರ ನೆಟ್ಟು ಬರ ದೂರಮಾಡಲು ಪ್ರತಿಯೊಬ್ಬರು ದೃಢ ಸಂಕಲ್ಪ ಮಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಟ್ಟಣ ಶಾಖೆ ಸಂಯೋಜಕ ರಾಘವೇಂದ್ರ ಕುಮಟಾ ಹೇಳಿದರು.
ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿ ಜ್ಯೋತಿಬಾ ಫುಲೆ ಪೂರ್ವ ಪ್ರಾಥಮಿಕ ಶಾಲೆ ಮತ್ತು ಪ್ರಾರ್ಥನಾ ಹಿರಿಯ
ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಸ್‌ಬಿಐ ಇವುಗಳಸಹಯೋಗದಲ್ಲಿ
ಹಮ್ಮಿಕೊಳ್ಳಲಾಗಿದ್ದ ವನ ಮಹೋತ್ಸವ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗವು ಸದಾ ತಾಪಮಾನದಿಂದ ಕೂಡಿರುತ್ತದೆ. ಇದನ್ನು ಕಡಿಮೆ ಮಾಡಲು ಸಸಿ ನೆಟ್ಟು ಸಂರಕ್ಷಣೆ ಮಾಡಿದಾಗ ಮಾತ್ರ ಶುದ್ಧ ಗಾಳಿ, ನೀರು, ಬೆಳಕು ಲಭಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರ ಈಶ್ವರೀಯ ವಿದ್ಯಾಲಯದ ಸಂಯೋಜಕಿ ಬಿಕೆ ಗುರುದೇವಿ ಅಕ್ಕನವರು ಮಾತನಾಡಿ, ಹಸಿರು ನಮ್ಮೆಲ್ಲರ ಉಸಿರಾಗಬೇಕು. ಅಂದಾಗ ಮಳೆ, ಬೆಳೆ ಸಮೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂತ ಸಾವಂತ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾಳಿ, ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಅಪ್ಪಸಾಹೇಬ ತೀಥೆì, ಕಾರ್ಯದರ್ಶಿ ಡಿ.ಎಂ. ಪಾಟೀಲ ಮಾತನಾಡಿದರು.
ಕಮಲಾಪುರ ಡಯಟ್ ಕೇಂದ್ರದ ಉಪನ್ಯಾಸಕ ಗುಂಡಪ್ಪ ಹುಡಗೆ, ಸಿಆರ್‌ಸಿ ಸಂಯೋಜಕ ಪ್ರಕಾಶ ಸುರವಸೆ,
ಮುಖಂಡ ಶರಣಯ್ಯ ಮಠಪತಿ, ದತ್ತಾತ್ರೇಯ ಬಿರಾದಾರ, ಪದ್ಮಣ್ಣ ಬಿಸಗುಂಡೆ, ಕನಕಪ್ಪ ಬಂಡಿ, ಸುಲೋಚನಾ
ಮುನೊಳಿ, ಗಂಗಮ್ಮ, ಭಾಗ್ಯಶ್ರೀ ಕುಮ್ಮೆ, ಬಿಕೆ ಶಿಲ್ಪಾ ಇದ್ದರು. ಮುಖ್ಯಶಿಕ್ಷಕಿ ಗಾಯತ್ರಿ ಕುಲಕರ್ಣಿ ಸ್ವಾಗತಿಸಿದರು. ರಾಮಚಂದ್ರ ತರಂಗೆ ನಿರೂಪಿಸಿದರು. ಸುಧಾರಾಣಿ ಭಕರೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.