ಸರ್ಕಾರದಿಂದ ರೇಣುಕಾಚಾರ್ಯ ಜಯಂತಿ-ಹರ್ಷ
Team Udayavani, Mar 27, 2022, 11:36 AM IST
ಶಹಾಬಾದ: ಪ್ರತಿ ವರ್ಷ ಮಾರ್ಚ್ 16ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವುದಾಗಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶನಿವಾರ ನಗರದ ಲಕ್ಷ್ಮೀ ಗಂಜ್‌ನ ರೇಣುಕಾಚಾರ್ಯ ದೇವಸ್ಥಾನದ ಮುಂಭಾಗದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ, ಬೇಡ ಜಂಗಮ ಸಮಾಜದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಸಮಾಜದ ಮುಖಂಡ ಮೃತ್ಯುಂಜಯ ಹಿರೇಮಠ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿರುವುದಕ್ಕೆ ವೀರಶೈವ ಹಾಗೂ ಬೇಡ ಜಂಗಮ ಸಮಾಜದ ಜನರಿಗೆ ಸಂತಸವಾಗಿದೆ. ಸಮಾಜಕ್ಕಾಗಿ, ಧರ್ಮಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ ರೇಣುಕಾಚಾರ್ಯ ಜಯಂತಿ ಆಚರಿಸಲು ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಎಂದರು.
ಮುಖಂಡರಾದ ಸೂರ್ಯಕಾಂತ ಕೋಬಾಳ, ಶಿವಕುಮಾರ ಹಿರೇಮಠ, ಶರಣಬಸಪ್ಪ ಕೋಬಾಳ, ಪ್ರದೀಪ ಗೊಳೇದ, ಶರಣಗೌಡ ಪಾಟೀಲ ಗೋಳಾ, ವಿಶ್ವಾರಾಧ್ಯ ಬಿರಾಳ, ಶೇಖುಗೌಡ, ಜಗದೀಶ ಮಠಪತಿ, ರಾಜು ಬೆಳಗುಂಪಿ, ಶರಣು ಜೇರಟಗಿ, ಸಿದ್ಧಯ್ಯ ಗೋಳಾ, ರಾಜಶೇಖರ ಘಂಟಿಮಠ, ಶಾಂತಯ್ಯಸ್ವಾಮಿ, ವಿಶ್ವಾರಾಧ್ಯ ಸ್ವಾಮಿ, ಜಗದೀಶ ಟೆಂಗಳಿ, ಮಲ್ಲಿಕಾರ್ಜುನ ಟೆಂಗಳಿ, ಬಾಬುರಾವ್ ಪಂಚಾಳ, ಶರಣಯ್ಯಸ್ವಾಮಿ ಹಿರೇಮಠ, ನಾಗಣ್ಣ ರಾಂಪುರೆ, ಅರುಣಕುಮಾರ ಪಟ್ಟಣಕರ್, ಶಿವಕುಮಾರ ಇಂಗಿನಶೆಟ್ಟಿ, ಚನ್ನಬಸಪ್ಪ ಕೊಲ್ಲೂರ್, ಶಾಂತಕುಮಾರ ವಾಲಿ, ಜಗದೀಶ ಬೆಳಗುಂಪಿ, ಎಮ್.ಆರ್. ಶರಣಯ್ಯಸ್ವಾಮಿ, ಶರಣು ನಂದಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.